ಮಂಗಳೂರು ಏರ್ಪೋರ್ಟ್ ಸುತ್ತಮುತ್ತ ಹೈ ಅಲರ್ಟ್ ಘೋಷಣೆ
ಮಂಗಳೂರು: ದೇಶದಲ್ಲಿ ಉಗ್ರರ ವಿಧ್ವಂಸಕ ಕೃತ್ಯ ಸಾಧ್ಯತೆ ಬೆನ್ನಲ್ಲೇ ಮಂಗಳೂರು ಏರ್ ಪೋರ್ಟ್ ಸುತ್ತಮುತ್ತ ಅಲರ್ಟ್ ಘೋಷಿಸಲಾಗಿದ್ದು, ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಡ್ರೋನ್ ದಾಳಿ ಭೀತಿ ಕಾಡುತ್ತಿದೆಯಾ ಎಂಬ ಅನುಮಾನ ಮೂಡಿದೆ.
ವಿಮಾನ ನಿಲ್ದಾಣ ವ್ಯಾಪ್ತಿಯ ಅದ್ಯಪಾಡಿ ಸುತ್ತಮುತ್ತಲಿನ ಪರಿಸರದಲ್ಲಿ ಅಲರ್ಟ್ ಘೋಷಿಸಲಾಗಿದೆ.ಏರ್ ಪೋರ್ಟ್ ಭದ್ರತೆಯ ಸಿಐಎಸ್‌ಎಫ್ ಹಾಗೂ ಬಜ್ಪೆ ಪೊಲೀಸರು ಸ್ಥಳೀಯರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಅನುಮಾನಾಸ್ಪದ ವ್ಯಕ್ತಿ ಅಥವಾ ವಸ್ತು, ಡ್ರೋನ್ ಬಳಕೆ ಕಂಡು ಬಂದಲ್ಲಿ ಮಾಹಿತಿ ನೀಡಲು ಸೂಚನೆ ನೀಡಲಾಗಿದೆ.
ಈಗಾಗಲೇ ಬಿಗಿ ಭದ್ರತೆಯಿದ್ದರೂ ತಿಂಗಳ ಹಿಂದೆ ಏರ್ ಪೋರ್ಟ್ ಪರಿಸರದಲ್ಲಿ ಹಲವು ಬಾರಿ ಡ್ರೋನ್ ಗಳು ಹಾರಾಟ ನಡೆಸಿವೆ ಎನ್ನಲಾಗಿದೆ. ಸದ್ಯ ಕರಾವಳಿ ಭಾಗ ಉಗ್ರರ ಟಾರ್ಗೆಟ್ ಆಗಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಹೈ ಅಲರ್ಟ್ ಘೋಷಿಸಿ ಮಂಗಳೂರಿನಲ್ಲಿ ಸ್ಯಾಟಲೈಟ್ ಫೋನ್ ಕರೆ ಹಾಗೂ ಉಗ್ರರ ಸ್ಲೀಪರ್ ಸೆಲ್ ಮಾಹಿತಿಯ ಹಿನ್ನೆಲೆಯಲ್ಲಿ ಮತ್ತಷ್ಟು ಭದ್ರತೆ ಮಾಡಿಕೊಳ್ಳಲಾಗುತ್ತಿದೆ. ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ಹಿನ್ನೆಲೆಯಲ್ಲಿ ಭದ್ರತಾ ಕಾರ್ಯ ನಡೆಯುತ್ತಿದೆ.
ಗುಪ್ತಚರ ಇಲಾಖೆ ಮಂಗಳೂರು ಹೈ ಅಲರ್ಟ್ ಘೋಷಣೆ