ಅಣ್ಣೇಶ್ವರ ಸರಕಾರಿ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣೆ
ದೇವನಹಳ್ಳಿ: ಇತ್ತೀಚಿನ ದಿನಗಳಲ್ಲಿ ಅನಾರೊಗ್ಯದ ಕೂಗ ಎಲ್ಲೆಡೆ ಕೇಳಿ ಬರುತಿದ್ದು ಇಂತಹ ಸಂದರ್ಭದಲ್ಲಿ ಬೆಲೆ ಏರಿಕೆ ಕಷ್ಟ ತೊಡಿಕೊಳ್ಳದ ಬಡವರು ಹಿಂದೇಟು ಹಾಕುತಿದ್ದು ಅವರ ಆರೋಗ್ಯದ ಕಾಳಜಿಯಿಂದ ಉಚಿತ ಆರೋಗ್ಯ ಶಿಬಿರ ಗ್ರಾಮದಲ್ಲಿ ಆಯೋಜಿಸಲಾಗಿದೆ ಎಂದು ಅಣ್ಣೇಶ್ವರ ಗ್ರಾಪಂ ಮಾಜಿ ಅಧ್ಯಕ್ಯ ಹಾಲಿ ಸದಸ್ಯ ಎ.ಚಂದ್ರಶೇಖರ್ ತಿಳಿಸಿದರು.
ದೇವನಹಳ್ಳಿ ತಾಲೂಕಿನ ಅಣ್ಣೇಶ್ವರ ಸರಕಾರಿ ಶಾಲೆಯಲ್ಲಿ ಗ್ರಾಮಸ್ಥ ಆರೋಗ್ಯದ ಸುರಕ್ಷೆಗಾಗಿ ಉಚಿತ ಆರೋಗ್ಯ ಶಿಬಿರ ಮತ್ತು ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ ನಂತರ ಮಾತನಾಡಿದ ಅವರು ಮನುಷ್ಯ ಅತಿಯಾದ ಒತ್ತಡದಲ್ಲಿ ಜೀವನ ಸಾಗಿಸುತ್ತಿದ್ದಾನೆ. ಎಲ್ಲರು ಆರೋಗ್ಯದ ಕಡೆ ಗಮನ ಹರಿಸಬೇಕು. ಆರೋಗ್ಯ ಚೆನ್ನಾಗಿದ್ದರೆ, ಕುಟುಂಬ ಚೆನ್ನಾಗಿರುತ್ತದೆ.
ಇತ್ತೀಚಿನ ದಿನಗಳಲ್ಲಿ ಯಾವ ಸಮಯದಲ್ಲಿ ಯಾರಿಗೆ ಏನಾದರೂ ಆಗಬಹುದೆಂಬ ಪರಿಸ್ಥಿತಿ ಇದೆ. ಹೀಗಿರುವಾಗ ಪ್ರತಿಯೊಬ್ಬರು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ಕೋವಿಡ್ ಸಾಂಕ್ರಾಮಿಕ ರೋಗದ ಭೀತಿಯಿಂದ ಸರಳವಾಗಿ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವ ದೃಷ್ಠಿಯಿಂದ ಉಚಿತ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿದೆ.
ನ್ಯೂ ಮಾನಸ ಆಸ್ಪತ್ರೆಯ ಆಡಳಿತ ವ್ಯವಸ್ಥಾಪಕ ಸೋಮಶೇಖರ್ ಮಾತನಾಡಿ ರಕ್ತದಾನ ಶಿಬಿರದಲ್ಲಿ ೫೦ ಯೂನಿಟ್‌ನಷ್ಟು ರಕ್ತದಾನ ಸಂಗ್ರಹಿಸಲಾಗಿದೆ. ನೇತ್ರ ತಪಾಸಣೆಯ ಮೂಲಕ ೫೦ ಜನರಿಗೆ ಉಚಿತ ಕನ್ನಡಕಗಳನ್ನು ನೀಡುವ ಕಾರ್ಯ ಮಾಡಲಾಗುತ್ತಿದೆ. ಸಾಮಾನ್ಯ ಆರೋಗ್ಯ ತಪಾಸಣೆಯನ್ನು ಸಹ ನಡೆಸಲಾಗುತ್ತಿದೆ. ಇದಕ್ಕೆ ಸಹಕಾರ ನೀಡಿದ ಯಲಹಂಕ ಬ್ಲಾಕ್ ಬ್ಯಾಂಕ್ ಮತ್ತು ದೇವನಹಳ್ಳಿಯ ನ್ಯೂ ಮಾನಸ ಆಸ್ಪತ್ರೆಗೆ ಅಭಾರಿಯಾಗಿರುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ವೆಂಕಟಸ್ವಾಮಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸಿ.ಶ್ರೀನಿವಾಸ್, ಕೆಪಿಸಿಸಿ ಸದಸ್ಯ ಚಿನ್ನಪ್ಪ, ಸಾವಕನಹಳ್ಳಿ ಡೈರಿ ಅಧ್ಯಕ್ಷ ಎಸ್.ಪಿ.ಮುನಿರಾಜ್,ಅಣ್ಣೇಶ್ವರ ಗ್ರಾಪಂ ಸದಸ್ಯ ಮುನಿರಾಜು, ಕಾಂಗ್ರೇಸ್ ಯುವ ಮುಖಂಡರಾದ ಮುನಿಯಪ್ಪ, ವೆಂಕಟೇಶ್, ಗೋಪಾಲ್, ಚೇತನ್, ಅನೀಲ್ ಸೇರಿದಂತೆ ನ್ಯೂ ಮಾನಸ ಆಸ್ಪತ್ರೆಯ ಆಡಳಿತ ಸಿಬ್ಬಂದಿ, ಯಲಹಂಕ ರಕ್ತನಿಧಿಯ ಸಿಬ್ಬಂದಿವರ್ಗ, ಗ್ರಾಮಸ್ಥರು ಇದ್ದರು.
ಮಂಜು ಬೂದಿಗೆರೆ
9113813926