ಮನುಷ್ಯನಿಗೆ ಜೀವನ ಮತ್ತು ಆರೋಗ್ಯ ಬಹುಮುಖ್ಯವಾದದ್ದು -ಸಿದ್ದಗಂಗಾ ಶ್ರೀ

 

 

ತುಮಕೂರು ಮ್ಯಾಂಗೋ ಫ್ರೂಟ್ ಮಾರ್ಕೆಟಿಂಗ್ ಬಿಸಿನೆಸ್ ಯೂನಿಯನ್ ವತಿಯಿಂದ ಮಾವಿನಹಣ್ಣಿನ ಮಳಿಗೆಗಳ ಉದ್ಘಾಟನಾ ಸಮಾರಂಭ ನಡೆಯಿತು. ತುಮಕೂರಿನ ರಿಂಗ್ ರಸ್ತೆ ಬಳಿ ನೂತನವಾಗಿ ಮಾವಿನಹಣ್ಣಿನ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿದ ಸಿದ್ದಗಂಗಾ ಮಠದ ಸಿದ್ದಲಿಂಗ ಶ್ರೀಗಳು ತುಮಕೂರು ಜಿಲ್ಲೆ ಹೆಚ್ಚು ಮಾವು ಬೆಳೆಯುವ ಜಿಲ್ಲೆಯಾಗಿದೆ. ತುಮಕೂರು ಜಿಲ್ಲೆಯ ಮಾವಿನಹಣ್ಣಿಗೆ ಜಿಲ್ಲೆ, ರಾಜ್ಯ ಸೇರಿದಂತೆ ವಿವಿಧ ದೇಶಗಳಿಗೂ ಸರಬರಾಜಾಗುತ್ತಿದ್ದು ಮಾವಿನ ಹಣ್ಣು ಬೆಳೆಯುವಲ್ಲಿ ತುಮಕೂರು ಜಿಲ್ಲೆ ಮುಂಚೂಣಿಯಲ್ಲಿದೆ ಇದರಿಂದ ಜಿಲ್ಲೆಯ ರೈತರು ಹಾಗೂ ವರ್ತಕರಿಗೆ ಒಂದು ಉತ್ತಮ ರೀತಿಯಲ್ಲಿ ಲಾಭ ತಂದುಕೊಡುತ್ತಿದೆ. ಕೊರೋನಾ ಸಂದರ್ಭದಲ್ಲೂ ರೈತರು ಹಾಗೂ ವರ್ತಕರು ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿದ್ದಾರೆ ಎಲ್ಲರೂ ಎಚ್ಚರಿಕೆಯಿಂದ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದು ತಿಳಿಸಿದರು.

 

ಕಾರ್ಯಕ್ರಮದಲ್ಲಿ ಮಾತನಾಡಿದ ತುಮಕೂರು ಮಹಾನಗರ ಪಾಲಿಕೆ ಮಾಜಿ ಮೇಯರ್ ಫರೀದಾ ಬೇಗಮ್ ಅವರು ಎಲ್ಲರೂ ಕೋವಿದ ನಿಯಮಗಳನ್ನು ತಪ್ಪದೇ ಪಾಲಿಸಬೇಕು, ವರ್ತಕರು ಹೊರಜಿಲ್ಲೆ ಹೊರರಾಜ್ಯಗಳಿಗೆ ವ್ಯಾಪಾರಕ್ಕಾಗಿ ತೆರಳುವವರು ತಮ್ಮ ಆರೋಗ್ಯದ ದೃಷ್ಟಿಯಿಂದ ಸುರಕ್ಷತಾ ಕ್ರಮಗಳನ್ನು ಪಾಲಿಸಿ ತಮ್ಮ ವ್ಯಾಪಾರ ಚಟುವಟಿಕೆಗಳಲ್ಲಿ ಭಾಗವಹಿಸಿ ಎಂದು ತಿಳಿಸಿದರು.

 

ಇನ್ನು ತುಮಕೂರು ಮ್ಯಾಂಗೋ ಫ್ರೂಟ್ ಯೂನಿಯನ್ ಅಧ್ಯಕ್ಷರಾದ ಖುದ್ದುಸ್ ಅಹಮದ್ ರವರು ಮಾತನಾಡಿ. ತುಮಕೂರು ಜಿಲ್ಲೆಯ ಮಾವಿನಹಣ್ಣು ಬಾಂಬೆ ,ಹರಿಯಾಣ ,ಆಂಧ್ರ ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಿಗೆ ಸರಬರಾಜು ಮಾಡುತ್ತಿದ್ದು ಸುಮಾರು ಹದಿನೈದು ಬಗೆಯ ಮಾವಿನಹಣ್ಣನ್ನು ತುಮಕೂರು ಜಿಲ್ಲೆಯಲ್ಲಿ ರೈತರು ಬೆಳೆಯುತ್ತಿದ್ದಾರೆ ಎಂದು ತಿಳಿಸಿದರು.

 

 

ಕಾರ್ಯಕ್ರಮದಲ್ಲಿ ತುಮಕೂರು ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸೈಯದ್ ಸೈಯದ್ ನಯಾಜ್, ಮಾಜಿ ಕಾರ್ಪೊರೇಟರ್ ಹಫೀಜ್ ಖಾನ್, ಮ್ಯಾಂಗೋ ಫ್ರೂಟ್ ಯೂನಿಯನ್ನ ಉಪಾಧ್ಯಕ್ಷರಾದ ಚಾಂದ್ ಪಾಷಾ, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್, ಕಾರ್ಯದರ್ಶಿ ಬಾಬಾಜಾನ್ ಖಜಾಂಚಿ ಶಬ್ಬೀರ್, ಸಂಘದ ನಿರ್ದೇಶಕರು ಸೇರಿದಂತೆ ಜಿಲ್ಲೆಯ ರೈತರು ಹಾಜರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!