ತುಮಕೂರು ನಗರದಲ್ಲಿ ಹಜರತ್ ಖ್ವಾಜಾ ಗರಿಬ್ ನವಾಜ್ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆದ ಸಾಮೂಹಿಕ ವಿವಾಹ ಹಲವು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಪ್ರತಿವರ್ಷದಂತೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಾಮೂಹಿಕ ವಿವಾಹ ನಡೆಯುತ್ತಿದ್ದು ಅದರಂತೆ ತುಮಕೂರಿನ ಹೆಚ್ಎಂಎಸ್ ಶಾದಿಮಹಲ್ ನಲ್ಲಿ ಈ ವರ್ಷದ ಸಾಮೂಹಿಕ ವಿವಾಹ ಅದ್ದೂರಿಯಾಗಿ ನಡೆಯಿತು.
ಟ್ರಸ್ಟ್ ನ ಅಧ್ಯಕ್ಷರಾದ ತಾಜುದ್ದೀನ್ ಶರೀಫ್ ಮಾತನಾಡಿ ನಮ್ಮ ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರತಿವರ್ಷ ಸಾಮೂಹಿಕ ವಿವಾಹ ನಡೆಸಿಕೊಂಡು ಬರುತ್ತಿದ್ದೇವೆ ಹಲವು ದಾನಿಗಳ ಸಹಕಾರದಿಂದ ನಡೆಸಿಕೊಂಡು ಬರುತ್ತಿದ್ದು ಇದನ್ನು ಮುಂದಿನ ದಿನಗಳಲ್ಲಿ ದೊಡ್ಡಮಟ್ಟದಲ್ಲಿ ನಡೆಸಿಕೊಂಡು ಬರುವ ಯೋಜನೆ ಇದೆ ಎಂದರು .ಇಂದಿನ ದಿನಗಳಲ್ಲಿ ಹೆಣ್ಣುಮಕ್ಕಳನ್ನು ಹೆತ್ತ ತಂದೆ ತಾಯಿಗಳಿಗೆ ಅವರ ಮದುವೆ ಮಾಡುವುದೇ ಒಂದು ದೊಡ್ಡ ಕೆಲಸವಾಗಿದ್ದು ಆರ್ಥಿಕ ತೊಂದರೆಯಿಂದ ಬಳಲುತ್ತಿರುವ ಬಡ ಹೆಣ್ಣು ಮಕ್ಕಳನ್ನು ಗುರುತಿಸಿ ಅವರಿಗೆ ವಿವಾಹ ಮಾಡಿಸುವುದರ ಜೊತೆಗೆ ನವದಂಪತಿಗಳಿಗೆ ಕುಟುಂಬ ನಿರ್ವಹಣೆಗೆ ಮನೆಗೆ ಬೇಕಾದ ಸಂಪೂರ್ಣ ಸಾಮಗ್ರಿಗಳನ್ನು ಸಹ ನಮ್ಮ ಸಂಘದ ವತಿಯಿಂದ ನೀಡಿಕೊಂಡು ಬರುತ್ತಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಟ್ರಸ್ಟಿನ ಉಪಾಧ್ಯಕ್ಷರಾದ ಆಫ್ಟರ್ ಹಜರತ್, ಕಾರ್ಯದರ್ಶಿ ಮೌಲಾ ಸಾಬ್,ಟ್ರಸ್ಟ್ ನ ಸದಸ್ಯರು ಹಾಗೂ ದಾನಿಗಳು ಹಾಜರಿದ್ದರು.