ತುಮಕೂರಿನಲ್ಲಿ ಬಾಣಂತಿ ಹಾಗೂ ಮಕ್ಕಳ ಸಾವು ಪ್ರಕರಣ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ_ ಆರೋಗ್ಯ ಸಚಿವ ಕೆ ಸುಧಾಕರ್.

ತುಮಕೂರಿನಲ್ಲಿ ಬಾಣಂತಿ ಹಾಗೂ ಮಕ್ಕಳ ಸಾವು ಪ್ರಕರಣ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ_ ಆರೋಗ್ಯ ಸಚಿವ ಕೆ ಸುಧಾಕರ್.

 

ತುಮಕೂರು_ತುಮಕೂರಿನಲ್ಲಿ ಕಳೆದ ಹತ್ತು ದಿನಗಳ ಹಿಂದೆ ಭಾರತಿ ನಗರದ ಮಹಿಳೆ ಹಾಗೂ ಮಕ್ಕಳ ಸಾವು ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವರು ತಾಯಿ ಹಾಗೂ ಮಕ್ಕಳ ಸಾವಿಗೆ ಕಾರಣರಾದವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಇನ್ನು ತನಿಖೆ ನಡೆಯುತ್ತಿದ್ದು ತನಿಖಾ ವರದಿಯನ್ನು ಆಧರಿಸಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

 

 

 

ತುಮಕೂರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಆರೋಗ್ಯ ಸಚಿವರು ತಾಯಿಯನ್ನು ಕಳೆದುಕೊಂಡ ಮಗುವನ್ನ ಸರ್ಕಾರದಿಂದ ನೋಡಿ ಕೊಳ್ಳಲಾಗುವುದು ಇನ್ನೂ ಮಗುವಿನ ಹೆಸರಿಗೆ ಆರೋಗ್ಯ ಇಲಾಖೆಯಿಂದ 10 ಲಕ್ಷ ರೂಗಳನ್ನು ಎಫ್ ಡಿ ಮಾಡಲಾಗುವುದು ಎಂದರು.

 

 

ಇನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಸಹಾಯವಾಣಿ ಕೇಂದ್ರವನ್ನ ಸ್ಥಾಪಿಸಲಾಗುವುದು ಈ ಮೂಲಕ ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ತುರ್ತು ಚಿಕಿತ್ಸೆಗೆ ಅನುವು ಮಾಡಿಕೊಡಲಾಗುವುದು ಎಂದರು.

 

 

 

ಇನ್ನು ವೈದ್ಯಕೀಯ ಸಂಘಕ್ಕೆ ವೈದ್ಯೆ ಡಾಕ್ಟರ ಉಷಾ ರವರು ಪತ್ರ ಬರೆದಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು ನಾವು ಯಾವುದೇ ಏಕ ಪಕ್ಷಿಯ ನಿರ್ಧಾರ ತೆಗೆದುಕೊಂಡಿಲ್ಲ ಇನ್ನು ಸಿಸಿಟಿವಿ ದೃಶ್ಯವನ್ನು ಆಧರಿಸಿ ಹಾಗೂ ಮಾಹಿತಿಯನ್ನು ಪಡೆದು ಕ್ರಮ ಕೈಗೊಂಡಿದ್ದು ತನಿಕ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

 

 

 

ಕಾಂಗ್ರೆಸ್ ನಾಯಕರ ಬುಡ ಅಲುಗಾಡುತ್ತಿದೆ.

 

ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ನಾಯಕರ ಬುಡ ಅಲುಗಾಡುತ್ತಿದೆ ಇನ್ನೂ ಕೋಲಾರದಲ್ಲಿ ಸಾಕಷ್ಟು ಕಾಂಗ್ರೆಸ್ನ ದೊಡ್ಡ ನಾಯಕರು ಇದ್ದರೂ ಸಹ ಬುಡ ಅಲುಗಾಡುತ್ತಿರುವ ಹಿನ್ನೆಲೆಯಲ್ಲಿ ಅದನ್ನ ಸರಿ ಮಾಡಲು ಸಿದ್ದರಾಮಯ್ಯನವರನ್ನು ಕರೆದುಕೊಂಡು ಬಂದಿದ್ದಾರೆ ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ ಅಸ್ತಿತ್ವ ಕಡಿಮೆ ಆಗುತ್ತಿದ್ದು ಸಿದ್ದರಾಮಯ್ಯನವರನ್ನು ಬಲಿ ಕೊಡಲು ಮುಂದಾಗಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

 

 

ವರದಿ _ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *