ತುಮಕೂರಿನ ಮತ್ತಷ್ಟು ದೇವಸ್ಥಾನಗಳಲ್ಲಿ ಮೊಳಗಿದ ಹನುಮಾನ್ ಚಾಲಿಸಾ ಪಠಣ.
ತುಮಕೂರು_ರಾಜ್ಯಾದ್ಯಂತ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ರವರು ಮಸೀದಿಗಳ ವರ್ಧಕ ಗಳಿಂದ ಆಗುತ್ತಿರುವ ತೊಂದರೆ ಸಂಬಂಧ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ವರೆಗೂ ತಾವು ಕೂಡ ಹಿಂದೂ ದೇವಾಲಯಗಳಲ್ಲಿ ಹಿಂದೂಪರ ಸಂಘಟನೆಗಳ ವತಿಯಿಂದ ನಿರಂತರ ಹನುಮಾನ್ ಚಾಲೀಸಾ ಪಠಣ ಹಾಗೂ ಭಜನೆ ಮಾಡುವ ಹೋರಾಟಕ್ಕೆ ಕರೆಕೊಟ್ಟಿರುವ ಸಂಬಂಧ.
ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದಲ್ಲಿ ಶ್ರೀರಾಮಸೇನೆ ಹಾಗೂ ಹಿಂದೂಪರ ಸಂಘಟನೆಗಳ ವತಿಯಿಂದ ಎರಡನೇ ದಿನವೂ ಸಹ ದೇವಸ್ಥಾನಗಳಲ್ಲಿ ಮುಂಜಾನೆ 4.50 ರಿಂದಲೇ ಹನುಮಾನ್ ಚಾಲೀಸ ಪಠಣ ಹಾಗೂ ಭಜನೆ ಮಾಡುವ ಮೂಲಕ ಹೋರಾಟ ಮುಂದುವರಿಸಿದ್ದಾರೆ.
ನಿನ್ನೆ ಪಾವಗಡ ಪಟ್ಟಣದಲ್ಲಿ ಕೋಟೆ ಆಂಜನೇಯ ದೇವಾಲಯವೊಂದರಲ್ಲಿ ಶುರುವಾಗಿದ್ದ ಭಜನೆ ಇಂದು ಮತ್ತಷ್ಟು ದೇವಾಲಯಗಳಿಗೆ ವಿಸ್ತರಣೆಗೊಂಡಿದೆ.
ಪಾವಗಡ ಪಟ್ಟಣದ ಕೋಟೆ ಆಂಜನೇಯ ದೇವಾಲಯ, ಕಾಶಿ ವಿಶ್ವನಾಥ ದೇವಸ್ಥಾನ ,ಪ್ರಸನ್ನ ಆಂಜನೇಯ ದೇವಸ್ಥಾನ, ಶಿರಡಿ ಸಾಯಿಬಾಬಾ ದೇವಾಲಯಗಳಲ್ಲಿ ಶ್ರೀರಾಮ ಸೇನೆ ವತಿಯಿಂದ ಹನುಮಾನ್ ಚಾಲೀಸ ವನ್ನು ಪಠಿಸುವ ಮೂಲಕ ಧ್ವನಿವರ್ಧಕಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುವ ಹೋರಾಟವನ್ನು ಮುಂದುವರೆಸಿದ್ದಾರೆ.
ಇನ್ನೂ ನೆನ್ನೆ ರಾಜ್ಯದ ಗೃಹ ಸಚಿವರಾದ ಅರಗ ಜ್ಞಾನೆಂದ್ರ ರವರು ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಿದ್ದರು. ಇನ್ನೂ ಸುಪ್ರೀಂಕೋರ್ಟ್ ಆದೇಶವನ್ನು ಬಹುತೇಕ ಮಸೀದಿಗಳಲ್ಲಿ ಪಾಲಿಸದೆ ಹೆಚ್ಚು ಧ್ವನಿವರ್ಧಕಗಳ ಮೂಲಕ ಶಬ್ದ ಮಾಲಿನ್ಯ ಉಂಟು ಮಾಡುತ್ತಾರೆ ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದು ಇದಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆಗಳು ಸುಪ್ರೀಂಕೋರ್ಟ್ ಆದೇಶದಂತೆ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಗಳು ಒತ್ತಾಯ ಮಾಡುತ್ತಿದ್ದಾರೆ.
ಕ್ರಮ ಕೈಗೊಳ್ಳಬೇಕಾದ ಇಲಾಖೆಗಳು ಕೈಕಟ್ಟಿ ಕುಳಿತ ಕಾರಣ ಹಿಂದೂಪರ ಸಂಘಟನೆಗಳ ಹೋರಾಟಕ್ಕೆ ನಾಂದಿಯಾಗಿದೆ.
ವರದಿ _ಮಾರುತಿ ಪ್ರಸಾದ್ ತುಮಕೂರು