ಜೆಡಿಎಸ್ ಶಾಸಕ ಶ್ರೀನಿವಾಸ್ ಕೊನೆಯ ಬಾಗಿಲು ಮುಚ್ಚಿತೆ….? ಜೆಡಿಎಸ್ ವರಿಷ್ಠರು ಹೇಳಿದ್ದೇನು…?
ಗುಬ್ಬಿಯ ಜೆಡಿಎಸ್ ಶಾಸಕ ಎಸ್ ಆರ್ ಶ್ರೀನಿವಾಸ್ ಹಾಗೂ ಪಕ್ಷದ ವರಿಷ್ಠರ ಮುನಿಸು ತಾರಕಕ್ಕೇರಿದ ಹಿನ್ನೆಲೆಯಲ್ಲಿ ಪರ್ಯಾಯ ನಾಯಕತ್ವಕ್ಕೆ ಮಣೆ ಹಾಕಿದ ಜೆಡಿಎಸ್ ವರಿಷ್ಠರು ಇಂದು ಗುಬ್ಬಿ ಪಟ್ಟಣದಲ್ಲಿ ಸಿಎಸ್ ಪುರ ಮೂಲದ ನಾಗರಾಜರವರ ಪಕ್ಷಕ್ಕೆ ಸೇರ್ಪಡೆ ಮಾಡುವ ಮೂಲಕ ಜೆಡಿಎಸ್ ಶಾಸಕ ಎಸ್ಆರ್ ಶ್ರೀನಿವಾಸ್ಗೆ ನೇರ ಟಾಂಗ್ ಕೊಟ್ಟಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜೆಡಿಎಸ್ ವರಿಷ್ಠರಾದ ಹೆಚ್ ಡಿ ದೇವೇಗೌಡ ರವರು ಇಂದು ತುಮಕೂರು ನಗರದ ವಿಶ್ವವಿದ್ಯಾನಿಲಯದ ಗೆಸ್ಟ್ ಹೌಸ್ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಜೆಡಿಎಸ್ ವರಿಷ್ಠರಾದ ದೇವೇಗೌಡ ರವರು.
ಗುಬ್ಬಿ ಶಾಸಕ ವಾಸು ಪಕ್ಷದ ಅಧ್ಯಕ್ಷರು ಹಾಗೂ ನಾವೆಲ್ಲರೂ ಅವರೊಂದಿಗೆ ಮಾತನಾಡಲು ಸಿದ್ಧರಿದ್ದೇವು ಅದಕ್ಕೆ ಸಂಬಂಧಿಸಿದಂತೆ ಎಲ್ಲಾ ತಯಾರಿ ಕೂಡ ನಡೆದಿತ್ತು ಆದರೆ ಅವರು ನಮ್ಮ ಮಾತಿಗೆ ಮನ್ನಣೆ ನೀಡದೆ ನಮ್ಮ ಜೊತೆ ಮಾತುಕತೆಗೆ ಬಾರದೆ ಮುನಿಸು ತೋರಿಸಿದರು.
ಹಾಗಾಗಿ ನಾವು ಅವರ ಬಳಿ ಮಾತನಾಡಲು ತಮ್ಮ ನಿವಾಸಕ್ಕೆ ಬರುತ್ತೇವೆ ಎಂದು ತಿಳಿಸಿದರು ಅವರೇ ನಮ್ಮನ್ನು ಮನೆಗೆ ಬರದ ಹಾಗೆ ತಡೆದರು ಆದರೂ ಕೂಡ ನಾವು ಅವರನ್ನು ಸಂಪರ್ಕಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದೆವು ಆದರೆ ಶ್ರೀನಿವಾಸ ನಮ್ಮ ಯಾವ ಮಾತಿಗೂ ಮನ್ನಣೆ ನೀಡಲಿಲ್ಲ.
ಗುಬ್ಬಿ ಶಾಸಕ ಶ್ರೀನಿವಾಸ್ ರವರ ಅಧ್ಯಾಯ ಮುಗಿಯಿತೆ…? ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ರವರು ನಮ್ಮ ಮಾತಿಗೆ ಮನ್ನಣೆ ನೀಡದ ಎಸ್ಆರ್ ಶ್ರೀನಿವಾಸ್ ರವರಿಗೆ ಇಂದಿನಿಂದ ಅವರನ್ನು ಸಂಪರ್ಕಿಸುವ ಎಲ್ಲಾ ದಾರಿಗಳನ್ನು ಹಾಗೂ ಪ್ರಯತ್ನಗಳನ್ನು ನಿಲ್ಲಲಿವೆ ಹಾಗಾಗಿ ಇಂದಿನಿಂದ ಜೆಡಿಎಸ್ ಪಕ್ಷದ ವತಿಯಿಂದ ಅವರನ್ನು ಸಂಪರ್ಕಿಸುವ ಹಾಗೂ ಈ ಬಗ್ಗೆ ಮಾತುಕತೆ ಮುಂದುವರಿಸುವ ಎಲ್ಲಾ ಪ್ರಯತ್ನಗಳನ್ನು ನಿಲ್ಲಿಸಲಿದ್ದೇವೆ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.
ಮನುಷ್ಯ ಹದ್ದು ಮೀರಿ ಮುಂದೆ ಹೋದಹಾಗೆ ಕಾಣಿಸುತ್ತಿತ್ತು ನಾನು ಗುಬ್ಬಿ ಶಾಸಕ ಶ್ರೀನಿವಾಸ್ ರವರನ್ನು ಮಾತನಾಡಲು ಸಾಕಷ್ಟು ಪ್ರಯತ್ನವನ್ನು ನಾವು ಹಾಗೂ ಅಧ್ಯಕ್ಷರು ಸೇರಿದಂತೆ ಎಲ್ಲರೂ ಸಹ ಪ್ರಯತ್ನಪಟ್ಟೆವು ಆದರೆ ಅವರೇ ತಮ್ಮ ಮನಸ್ಸಿಗೆ ಬಂದಂತೆ ಹಿಂದೆ ಒಂದು ಮುಂದೆ ಒಂದು ಮಾತನಾಡುತ್ತಾ ವರಿಷ್ಠರ ಬಗ್ಗೆ ತಮ್ಮ ಅಸಮಾಧಾನ ಹಾಗೂ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಿದ್ದರು .
ಹಾಗೂ ಇದರ ಜೊತೆಯಲ್ಲಿ ವಿಧಾನಪರಿಷತ್ತು ಶಾಸಕರೊಬ್ಬರು ಹಾಗೂ ಎಸ್ ಆರ್ ಶ್ರೀನಿವಾಸ್ ರವರು ಪಕ್ಷದ ಒಬ್ಬ ಸಮರ್ಥ ನಾಯಕನನ್ನು ಸೋಲಿಸಲು ಕೈಜೋಡಿಸಿದ್ದು ನಮಗೂ ಸಹ ತಿಳಿದಿದೆ.
ಒಂದು ಎಂಎಲ್ಎ ಹಾಗೂ ಎಂಎಲ್ಸಿ ಆಗುವುದು ಅಷ್ಟು ಸುಲಭದ ಕೆಲಸ ಅಲ್ಲ ನಾವು ಬರುವ ಹಣವನ್ನೆಲ್ಲ ಕ್ಷೇತ್ರಕ್ಕೆ ಕೊಟ್ಟಿದ್ದೆವು ಆದರೂ ಕೂಡ ನಮ್ಮ ಪಕ್ಷದ ಸಮರ್ಥ ನಾಯಕನನ್ನು ಸೋಲಿಸಲು ಅವರೆಲ್ಲರೂ ಕಾರಣರಾಗಿದ್ದಾರೆ ಈಗ ಅವೆಲ್ಲವೂ ಬೇಡವಾದ ವಿಷಯವಾಗಿದೆ.
ಹೀಗೆ ನಾಯಕರುಗಳು ಪ್ರತಿನಿತ್ಯ ಸಾಧಿಸುತ್ತಾ ಹೋದರೆ ಅದು ಬೇರೆಯದೇ ಸಂದೇಶ ಕೊಟ್ಟಂತಾಗುತ್ತದೆ ತುರುವೇಕೆರೆ ತಾಲೂಕಿಗೆ ನೀರು ಹರಿಯಲು ತಾವು ಸಹ ಕಾರಣವಾಗಿದ್ದು ಅಂದಿನ ಶಾಸಕರೊಂದಿಗೆ ಸೇರಿ ನೀರು ತರಲು ನಾವು ಸಹ ಸಾಕಷ್ಟು ಹೋರಾಟ ಮಾಡಿದ್ದವು ಎಂದು ತಿಳಿಸಿದರು