ಭಾಷಣದ ವೇಳೆ ಊಟಕ್ಕೆ ಮುಗಿಬಿದ್ದ ಮಹಿಳಾ ಕಾರ್ಯಕರ್ತೆಯರು ಬೇಸರ ವ್ಯಕ್ತಪಡಿಸಿದ ದೇವೇಗೌಡರು
ಬೆಂಗಳೂರು:ಜೆಡಿಎಸ್ ಮಹಿಳಾ ಸಮಾವೇಶದಲ್ಲಿ ನಾಯಕರ ಭಾಷಣದ ವೇಳೆಯಲ್ಲಿಯೇ ಮಹಿಳೆಯರು ಊಟಕ್ಕೆ ಮುಗಿಬಿದ್ದ ಘಟನೆ ನಡೆದಿದ್ದು, ಇತ್ತ ಭಾಷಣಕ್ಕೆ ನಿಂತ ದೇವೇಗೌಡರಿಗೆ ಖಾಲಿ ಕುರ್ಚಿಗಳ ದರ್ಶನವಾಗಿದೆ. ಇದರಿಂದಾಗಿ ದೇವೇಗೌಡರು ವೇದಿಕೆಯಲ್ಲಿಯೇ ಆಕ್ರೋಶ ಹೊರ ಹಾಕಿದ್ದಾರೆ ಎಂದು ವರದಿಯಾಗಿದೆ.
ಮಳೆಯ ನಡುವೆಯೂ ಉತ್ಸಾಹ ಕಳೆದುಕೊಳ್ಳದ ದೇವೇಗೌಡರು, ಭಾಷಣ ಆರಂಭಿಸಿದ್ದಾರೆ. ಈ ವೇಳೆ ಎಲ್ಲರೂ ಊಟಕ್ಕೆ ಮುಗಿಬಿದ್ದಿರುವುದನ್ನು ಕಂಡು ಬೇಸರ ವ್ಯಕ್ತಪಡಿಸಿದ ಅವರು, ಊಟಕ್ಕಾಗಿ ಜಗಳವಾಡಲು ಬರುವವರನ್ನು ಸಮಾವೇಶಕ್ಕೆ ಕರೆತರಬಾರದು. ನೂರೈವತ್ತು ಜನ ಬಂದರೂ ಸಾಕು ಎಂದು ಹೇಳಿದರು
ಇನ್ನೂ ಮುಂದಿನ ಚುನಾವಣೆ ಸಂಬಂಧ ಮಾತನಾಡಿದ ದೇವೇಗೌಡರು, ನಾನು ಸುಮ್ಮನೆ ಕೂರುವುದಿಲ್ಲ. ನಿರಂತರವಾಗಿ ಹೋರಾಟ ಮಾಡುತ್ತೇನೆ. ನಾನು ಸಿಎಂ ಆಗಿದ್ದಾಗ ನೂರಾರು ಕೊಳೆಗೇರಿಗಳಿದ್ದವು. ಕೊಳೆಗೇರಿಗಳಿಗೆ ನಾನು ಭೇಟಿ ನೀಡುತ್ತಿದ್ದೆ. ಇದೂವರೆಗೆ ಯಾವ ಸಿಎಂ ಕೊಳೆಗೇರಿಗಳಿಗೆ ಭೇಟಿ ನೀಡಿದ್ದಾರೆ? ಎಂದು ಅವರು ಪ್ರಶ್ನಿಸಿದರು. ಜೊತೆಗೆ ಮುಂದಿನ ಚುನಾವಣೆಯಲ್ಲಿ ಬೆಂಗಳೂರಿನ ಎಲ್ಲ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಹಾಕುತ್ತೇವೆ. ಕನಿಷ್ಠ 9 ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್ ನೀಡುತ್ತೇವೆ ಎಂದು ಘೋಷಿಸಿದರು.