ವಿಜಯಪುರ: ತಂಬಾಕು ನಿಯಂತ್ರಣ ಅರಿವು ಕುರಿತ ಗುಲಾಬಿ ಆಂದೋಲನ

 

 

 

ವಿಜಯಪುರ: ತಂಬಾಕು ನಿಯಂತ್ರಣ ಅರಿವು ಕುರಿತ ಗುಲಾಬಿ ಆಂದೋಲನ

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಫೆಬ್ರವರಿ 24 ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ಸಹಯೋಗದೊಂದಿಗೆ ದೇವನಹಳ್ಳಿ ತಾಲ್ಲೂಕಿನ ವಿಜಯಪುರದ ಸರ್ಕಾರಿ ಪ್ರೌಢಶಾಲೆಯಲ್ಲಿಂದು ಧೂಮಪಾನ ಹಾಗೂ ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳು ಕುರಿತ ಜನಜಾಗೃತಿ ಮೂಡಿಸುವ “ಗುಲಾಬಿ ಆಂದೋಲನ”ಯನ್ನು ನಡೆಸಲಾಯಿತು.

ಗುಲಾಬಿ ಆಂದೋಲನದ ಅಂಗವಾಗಿ ವಿಜಯಪುರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಅಂಗಡಿ ಮುಂಗಟ್ಟುಗಳಲ್ಲಿ, ಶಾಲಾ ಆವರಣದ ಸುತ್ತಮುತ್ತ, ತಂಬಾಕು ಮಾರಾಟ ಹಾಗೂ ಖರೀದಿ ಮಾಡದಂತೆ‌‌ ಮಾಹಿತಿಯುಳ್ಳ ಕರಪತ್ರ ಹಾಗೂ ಗುಲಾಬಿ‌ ಹೂವನ್ನು ನೀಡುವ ಮೂಲಕ ಅರಿವು ಮೂಡಿಸಿದರು.

ದೇವನಹಳ್ಳಿ ತಹಶೀಲ್ದಾರ್ ಅನಿಲ್ ಕುಮಾರ್, ವಿಜಯಪುರ ಪುರಸಭೆಯ ಮುಖ್ಯಾಧಿಕಾರಿ ಪ್ರದೀಪ್ ಕುಮಾರ್, ಎ.ಎಸ್.ಐ. ಮುನಿರಾಜು, ಬೆಂಗಳೂರು ಗ್ರಾಮಾಂತರ ತಂಬಾಕು ನಿಯಂತ್ರಣ ಘಟಕದ ಜಿಲ್ಲಾ ಸಲಹೆಗಾರರು ಡಾ.ವಿದ್ಯಾರಾಣಿ, ಹಿರಿಯ ಆರೋಗ್ಯ ಸಹಾಯಕ ವೆಂಕಟೇಶ್, ಶಿಕ್ಷಕರು ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದರು.

 

ಗುರುಮೂರ್ತಿ ಬೂದಿಗೆರೆ

8861100990

Leave a Reply

Your email address will not be published. Required fields are marked *

You cannot copy content of this page

error: Content is protected !!