ಗುಜರಾತ್ ಮಾಜಿ ಮುಖ್ಯಮಂತ್ರಿ ಮಾಧವಸಿಂಗ್ ಸೋಳಂಕಿ ನಿಧನ .Gujarath former chief minister madhavasingh Solanki died

ಬೆಂಗಳೂರು: ಗುಜರಾತ್ ಮಾಜಿ ಮುಖ್ಯಮಂತ್ರಿ ಮಾಧವಸಿಂಗ್ ಸೋಳಂಕಿ ನಿಧನಕ್ಕೆ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

 

ಈ ಕುರಿತು ಟ್ವಿಟ್ ಮಾಡಿರುವ ಅವರು ಗುಜರಾತ್‌ನ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಮಾಧವಸಿಂಗ್ ಸೋಳಂಕಿ ನಿಧನದಿಂದ ಮುತ್ಸದ್ದಿ ನಾಯಕರೊಬ್ಬರನ್ನು ದೇಶ ಕಳೆದುಕೊಂಡಿದೆ.

 

ಸಾಮಾಜಿಕ ನ್ಯಾಯದ ಹರಿಕಾರರಾಗಿ ಗುಜರಾತ್ ರಾಜಕೀಯದ ಚಿತ್ರವನ್ನು ಬದಲಾಯಿಸಿದ್ದ ಸೋಳಂಕಿ, ಬಡವರು ಮತ್ತು ಶೋಷಿತರ ದನಿಯಾಗಿದ್ದರು.

ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!