ಜೆಡಿಎಸ್ ಸೇರ್ಪಡೆ ಸಮಾವೇಶ ಕಾರ್ಯಕ್ರಮದಲ್ಲಿ ಗುಬ್ಬಿ ತಾಲೂಕು ಎಸ್ ಸಿ ಘಟಕದ ಕಾರ್ಯಕರ್ತರ ಕಡೆಗಣನೆ

 

ಜೆಡಿಎಸ್ ಸೇರ್ಪಡೆ ಸಮಾವೇಶ ಕಾರ್ಯಕ್ರಮದಲ್ಲಿ ಗುಬ್ಬಿ ತಾಲೂಕು ಎಸ್ ಸಿ ಘಟಕದ ಕಾರ್ಯಕರ್ತರ ಕಡೆಗಣನೆ

ಗುಬ್ಬಿ:- ತಾಲ್ಲೂಕಿನಲ್ಲಿ ಸೋಮವಾರ ನಡೆಯುವ ಜೆಡಿಎಸ್ ಸೇರ್ಪಡೆ ಸಮಾವೇಶ ಕಾರ್ಯಕ್ರಮಕ್ಕೆಗುಬ್ಬಿ ಜೆಡಿಎಸ್ ತಾಲೂಕು ಎಸ್ ಸಿ ಘಟಕದ ಕಾರ್ಯಕರ್ತರನ್ನು ಜೆ ಡಿ ಎಸ್ ಪಕ್ಷ ಕಡೆಗಣಿಸಿದೆ ಎಂದು ತಾಲೂಕು ಎಸ್ಸಿ ಘಟಕದ ಅಧ್ಯಕ್ಷ ಕೊಡಿಯಾಲ ಮಹದೇವ ಅಸಮಾಧಾನ ವ್ಯಕ್ತಪಡಿಸಿದರು.

ಗುಬ್ಬಿ ತಾಲೂಕಿನಾಧ್ಯಂತ ಜೆಡಿಎಸ್ ಪಕ್ಷಕ್ಕಾಗಿ ಸುಮಾರು ವರ್ಷಗಳಿಂದ ಸಂಘಟನೆ ಮಾಡಿದ್ದು ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲು ನಮ್ಮ ಜನಪ್ರಿಯ ಶಾಸಕರಾದ ಎಸ್ ಆರ್ ಶ್ರೀನಿವಾಸ್ ರವರ ಮಾರ್ಗದರ್ಶನ ದಂತೆ ನಾವುಗಳು ಪಕ್ಷ ಸಂಘಟನೆ ಮಾಡುತ್ತಿದ್ದೇವೆ ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಶಾಸಕರ ಮತ್ತು ಗುಬ್ಬಿ ತಾಲ್ಲೂಕಿನ ಜೆಡಿಎಸ್ ಕಾರ್ಯಕರ್ತರ ಗಮನಕ್ಕೆ ಬಾರದಂತೆ ಗುಬ್ಬಿ ತಾಲೂಕಿನಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮದ ನೆಪದಲ್ಲಿ ಸಮಾವೇಶ ಮಾಡುತ್ತಿರುವುದು ಬೇಸರದ ಸಂಗತಿ ಎಂದು ನಗರದ ಪ್ರಾವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಗುಬ್ಬಿ ತಾಲೂಕಿನಲ್ಲಿ ಜೆಡಿಎಸ್ ಪಕ್ಷ ಅಧಿಕಾ,ದಲ್ಲಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ನಮ್ಮ ಜನನಾಯಕರಾದ ಶ್ರೀನಿವಾಸ್ ಅವರ ಸರಳತೆ ದಲಿತರ ಮೇಲಿನ ಪ್ರೀತಿ ಅವರಲ್ಲಿರುವ ಕ್ಷೇತ್ರಾಭಿವೃದ್ದಿಯಲ್ಲಿರುವ ಕಾಳಜಿಯೆ ಕಾರಣ ಅಂತಹ ವ್ಯಕ್ತಿಯನ್ನು ಸಮಾವೇಶಕ್ಕೆ ಅಥವಾ ಸೇರ್ಪಡೆ ಕಾರ್ಯಕ್ರಮಕ್ಕೆ ಕರೆಯದೆ ನಿರಾಕರಿಸುತ್ತಿರುವ ಜೆಡಿಎಸ್ ವರಿಷ್ಟರಿಗೆ ದಿಕ್ಕಾರ ದಿಕ್ಕಾರ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

 

ತಾಲೂಕಿನಾದ್ಯಂತ ಸುಮಾರು ವರ್ಷಗಳಿಂದ ಜೆಡಿಎಸ್ ಪಕ್ಷವನ್ನು ನಮ್ಮ ಪಕ್ಷ ಎಂದುಕೊಂಡು ಶ್ರಮಿಸುತ್ತಿದ್ದು ತಾಲೂಕಿನಾದ್ಯಂತ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ದಲಿತರು ಆಗಮಿಸುವುದು ಬೇಡವಾ ಇಲ್ಲ ದಲಿತರಿಗೆ ಅವಕಾಶ ಇಲ್ಲವೇ ಎಂಬ ಪ್ರಶ್ನೆ ತಾಲೂಕಿನಾದ್ಯಂತ ಇರುವಂತಹ ದಲಿತರ ಪ್ರಶ್ನೆಯಾಗಿದೆ.

 

ನಾಲ್ಕು ಬಾರಿ ಶಾಸಕರಾಗಿ ಕಾರ್ಯನಿರ್ವಹಿಸಿದ ಎಸ್ ಆರ್ ಶ್ರೀನಿವಾಸ್ ರವರು ಈ ಸೋಮವಾರ ನಡೆಯುವ ಜೆಡಿಎಸ್ ಕಾರ್ಯಕ್ರಮಕ್ಕೆ ಆಗಮಿಸುವುದಿಲ್ಲ ಎಂದರೆ ನಾವುಗಳು ಕೂಡ ಆಗಮಿಸುವುದಿಲ್ಲ ಸುಮಾರು ನಾಲ್ಕು ವರ್ಷಗಳ ಕಾಲ ಜೆಡಿಎಸ್ ಎಂಬ ಪಕ್ಷವನ್ನು ಕಟ್ಟಿ ನಮ್ಮೆಲ್ಲರ ಕಷ್ಟಸುಖಗಳನ್ನು ಆಲಿಸಿ ನಮಗೆ ಸಂತ ಹಿಸಿದ್ ಅಂತಹ ಶಾಸಕರೇ ಇಲ್ಲವಾದರೆ ಈ ಜೆಡಿಎಸ್ ಪಕ್ಷದಲ್ಲಿ ನಾವು ಇದ್ದರೂ ಕೂಡ ನಮ್ಮಗಳಿಗೆ ಗೌರವ ಇರುವುದಿಲ್ಲ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಕೊಡಿಯಾಲ ಮಹಾದೇವ ತಿಳಿಸಿದರು.

 

ದಲಿತ ಮುಖಂಡ ಚೇಳೂರು ಶಿವನಂಜಪ್ಪ ಮಾತನಾಡಿ ಮಾನ್ಯ ಕುಮಾರಸ್ವಾಮಿಯವರು ಗುಬ್ಬಿ ತಾಲೂಕಿನಲ್ಲಿ ದಲಿತರನ್ನು ಕಡೆಗಣಿಸುತ್ತಿದ್ದಾರೆ ಎಂದು ನೇರ ಆರೋಪ ಮಾಡಿದರು

 

ತಾಲೂಕಿನಲ್ಲಿ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮ ಎಸ್ಸಿ ಘಟಕಕ್ಕೆ ಯಾವುದೇ ರೀತಿ ಮಾಹಿತಿ ಇಲ್ಲದೆ ಇರುವುದರಿಂದ ಗುಬ್ಬಿ ತಾಲೂಕಿನ ದಲಿತರ ಮತಗಳು ಮಾನ್ಯ ಕುಮಾರಸ್ವಾಮಿಯವರಿಗೆ ತಿರಸ್ಕಾರ ಆಗಿರಬಹುದು

ಗುಬ್ಬಿ ತಾಲೂಕಿನಿಂದ ಮಾನ್ಯ ಕುಮಾರಸ್ವಾಮಿಯವರ ಭೇಟಿಮಾಡಲು ಹೋದಂತ ಜೆಡಿಎಸ್ ಕಾರ್ಯಕರ್ತರಿಗೆ ಕುಮಾರಸ್ವಾಮಿಯವರು ಅವಕಾಶವನ್ನು ನಿರಾಕರಿಸುತ್ತಾರೆ ಎಂದು ನೇರ ಆರೋಪ ಮಾಡಿದರು.

ಪತ್ರಿಕಾ ಗೋಷ್ಠಿಯಲ್ಲಿ ಕಡಬ ಶಂಕರ್. ಕುಂದರನಹಳ್ಳಿ ನಟರಾಜು ಗಂಗಣ್ಣ ಮುಂತಾದವರು ಭಾಗವಹಿಸಿದ್ದರು.

 

ವರದಿ ಯೋಗೀಶ್ ಮೇಳೇಕಲ್ಲಹಳ್ಳಿ

Leave a Reply

Your email address will not be published. Required fields are marked *

You cannot copy content of this page

error: Content is protected !!