ಗುಬ್ಬಿ ಕ್ಷೇತ್ರದಿಂದ ಹೆದರಿ ಪಲಾಯನ ಮಾಡುವ ವ್ಯಕ್ತಿ ನಾನಲ್ಲ ಎಸ್ ಆರ್ ಶ್ರೀನಿವಾಸ್ ಆಕ್ರೋಶ

ಗುಬ್ಬಿ ಕ್ಷೇತ್ರದಿಂದ ಹೆದರಿ ಪಲಾಯನ ಮಾಡುವ ವ್ಯಕ್ತಿ ನಾನಲ್ಲ ಎಸ್ ಆರ್ ಶ್ರೀನಿವಾಸ್ ಆಕ್ರೋಶ

ಗುಬ್ಬಿ ತಾಲೂಕಿನಲ್ಲೇ ಮಲ್ಲೇಶಪ್ಪನ ಪವಾಡ ಎಂದು ಖ್ಯಾತಿ ಪಡೆದಿರುವ ಅತಿ ದೊಡ್ಡ ಕೆರೆಯಾದ ಕಡಬ ಅಮಾನಿಕೆರೆ ತುಂಬಿ ಕೊಡಿಬಿದ್ದ ಹಿನ್ನೆಲೆಯಲ್ಲಿ ಗಂಗಾ ಪೋಜೆ ಮಾಡಿ ಭಾಗಿನ ಅರ್ಪಿಸಿ ಮಾತಾನಾಡಿದ ಅವರು ಗುಬ್ಬಿ ತಾಲ್ಲೂಕಿನ ಜನರ ಹೃದಯಂತರಾಳದಲ್ಲಿ ನೆಲಸಿ ಅವರ ಮನೆಮಗನಾದ ನಾನು ಯಾರಿಗೂ ಹೆದರಿ ತಾಲೂಕಿನಿಂದ ಪಲಾಯನ ಮಾಡುವ ವ್ಯಕ್ತಿ ನಾನಲ್ಲ ಇಲ್ಲಿಗೆ ಗೋಣಿಚಿಲದಲ್ಲಿ ತಂದವರು ಟ್ಯಾಕ್ಟರ್ ನಲ್ಲಿ ತುಂಬಿಕೊಂಡು ಬಂದವರನ್ನು ನಾನು ಸಾಕಷ್ಟು ನೊಡಿದ್ದೆನೆ ಎಂದು ಗುಬ್ಬಿ ಶಾಸಕರು ಹಾಗು ಮಾಜಿ ಶಿಕ್ಷಣ ಸಚಿವರು ಆದ ಎಸ್ ಆರ್ ಶ್ರೀನಿವಾಸ್ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

 

ತಾಲೂಕಿನ ಬಹುತೇಕ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವಂತ ಕೆಲಸ ಮಾಡಲಾಗಿದೆ ಹಾಗಲವಾಡಿ ಹಾಗು ಕೆಲವು ಕೆರೆ ಬಿಟ್ಟರೆ ಉಳಿದಂತೆ ಎಲ್ಲಾ ಕೆರೆಗಳಿಗೆ ನಿರು ತುಂಬಿಸುವ ಕೆಲಸ ಮಾಡಿದ್ದೆವೆ ಈ ಬಾರಿ ಹೇಮಾವತಿ ಜೂತೆಗೆ ವರುಣನ ಸಹಕಾರದಿಂದ ಎಲ್ಲಾ ಕೆರೆಗಳು ತುಂಬಿರುವುದರಿಂದ ರೈತರಿಗೆ ಸಾಕಷ್ಟು ಪ್ರಮಾಣದಲ್ಲಿ ಅನುಕೂಲ ವಾಗಿದೆ ಅಂತರ್ಜಾಲ ಮಟ್ಟ ಹೆಚ್ಚಾಗಿ ರೈತರ ಕೊಳವೆಬಾವಿಗಳಲ್ಲಿ ನೀರಿನ ಮಟ್ಟವು ಹೆಚ್ಚಿದ್ದು ಜನಸಾಮಾನ್ಯರು ಸುಭಿಕ್ಷವಾದ ಜೀವನ ನಡೆಸಲು ಅನುಕೂಲವಾಗಿದೆ ಎಂದರು.

 

ದೇವೇಗೌಡರು ಒಬ್ಬ ಸಾಮಾನ್ಯ ವ್ಯಕ್ತಿಯಲ್ಲ ಅವರು ಈ ದೇಶಕ್ಕೆ ಪ್ರಧಾನಮಂತ್ರಿಯಾದವರು ಅಂತಹ ವ್ಯಕ್ತಿಗೆ ನಾನು ದ್ರೋಹ ಮಾಡುವಂತ ಕೇಲಸವನ್ನು ಮಾಡಿಲ್ಲ ಕುಮಾರಸ್ವಾಮಿಯವರ ಒಂದು ಸುಳ್ಳು ಹೇಳಿಕೆಯಿಂದ ನಾನು ನನ್ನ ಮೇಲಿನ ಅಪಾದನೆಯನ್ನ ಶಾಸ್ವಾತವಾಗಿ ಎದುರಿಸುವಂತಾಗಿದೆ ಕುಮಾರಸ್ವಾಮಿ ಮಾಡಿರುವಂತ ಕೆಟ್ಟದ್ದನ್ನು ನಾನು ಎಂದಿಗೂ ಮಾಡುವುದಿಲ್ಲ ಅವರು ಯಾವುದೇ ದೇವಾಲಯದಲ್ಲಿ ಬೇಕಾದರೂ ಕರೆದುಕೊಂಡು ಹೋಗಿ ಪ್ರಮಾಣ ಮಾಡಿಸಿದರು ನಾನು ಸಿದ್ದನಿದ್ದೇನೆ ಅವರು ಸಹ ಪ್ರಾಮಾಣಿಕವಾಗಿ ಪ್ರಮಾಣ ಮಾಡಲಿ ನಾನು ತಪ್ಪು ಮಾಡಿದ್ದರೆ ನನ್ನ ಮನೆ ಆಳಾಗಲಿ ಇಲ್ಲ ಅವರ ಮನೆ ಆಳಾಗಲಿ ಎಂದು ಅವರ ಮನದಾಳದ ನೋವಿನ ನುಡಿಗಳನ್ನು ಹಂಚಿಕೊಂಡರು.

 

ಗುಬ್ಬಿ ಕ್ಷೇತ್ರದಲ್ಲಿ ನನ್ನಿಂದ ಹೆಚ್ಚಿನ ಸಹಾಯ ಪಡೆದ ವ್ಯಕ್ತಿಗಳೆ ನನಗೆ ವಿರೋಧ ಮಾಡುವುದು ನನಗೆ ಶಾಪವಾಗಿದೆ ಆದರೆ ಯಾರೆ ನನ್ನನ್ನು ವಿರೋಧ ಮಾಡಿದರು ಕ್ಷೇತ್ರದ ಮತದಾರರ ಆಶಿರ್ವಾದ ನನ್ನ ಮೇಲಿದೆ ನಾನು ಯಾವುದಕ್ಕೂ ಜಗ್ಗುವವನಲ್ಲ ನನ್ನ ಮತದಾರ ದೇವರುಗಳು ಮತ್ತು ನಮ್ಮ ಕಾರ್ಯಕರ್ತರು ವಸಣ್ಣ ಎಲ್ಲಿರುತ್ತಾರೆ ಅಲ್ಲಿ ನಾವು ಇರುತ್ತವೆ ಎಂಬ ದೈರ್ಯವನ್ನು ನನ್ನಲ್ಲಿ ತುಂಬಿದ್ದಾರೆ ಆಗಾಗಿ ನನ್ನ ಕ್ಷೇತ್ರದ ಜನರ ಹಾಗು ಕಾರ್ಯಕರ್ತರ ನಾಡಿಮಿಡಿತ ಏನೆಂಬುದು ನನಗೆ ತಿಳಿದಿದೆ ನನಗೆ ಯಾವುದೇ ಎದುರಾಳಿ ಬಂದರು ಅವರನ್ನು ಎದುರಿಸಲು ನಾನು ಸಮರ್ಥವಾಗಿ ಸಿದ್ದನಿದ್ದೇನೆ ಎಂದರು.

 

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ. ಬೆಮೆಲ್ ಕಾಂತರಾಜು.ಕೂಪ್ಪ ವೆಂಕಟೇಶ್.ಪಟೇಲ್ ದೇವರಾಜು. ಕಡಬ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟರಂಗಯ್ಯ .ಮುಖಂಡರಾದ ವೆಂಕಟೇಶ್ ದರ್ಶನ್ ಗೌಡ . ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಬಾಲಿಯಪ್ಪ. ದಲಿತ ಮುಖಂಡರಾದ ಕಡಬ ಶಂಕರ್ .ಯುವ ಮಖಂರಾದ ಕೆ ಆರ್ ವೆಂಕಟೇಶ್ ಹಾಗು ಕಡಬ ಹೋಬಳಿಯ ಕಾರ್ಯಕರ್ತರು ಭಾಗವಹಿಸಿದ್ದರು.

 

ವರದಿ ಯೋಗೀಶ್ ಮೇಳೇಕಲ್ಲಹಳ್ಳಿ

Leave a Reply

Your email address will not be published. Required fields are marked *

You cannot copy content of this page

error: Content is protected !!