ಗುಬ್ಬಿ ಶಾಸಕ ಶ್ರೀನಿವಾಸ್ ರವರು ಕಾಂಗ್ರೆಸ್ ಪಕ್ಷಕ್ಕೆ ಬರುವ ಯಾವುದೇ ಮಾಹಿತಿ ಇಲ್ಲ _ಹೊನ್ನ ಗಿರಿಗೌಡ

ಗುಬ್ಬಿ ಶಾಸಕ ಶ್ರೀನಿವಾಸ್ ರವರು ಕಾಂಗ್ರೆಸ್ ಪಕ್ಷಕ್ಕೆ ಬರುವ ಯಾವುದೇ ಮಾಹಿತಿ ಇಲ್ಲ _ಹೊನ್ನ ಗಿರಿಗೌಡ.

 

 

ಗುಬ್ಬಿ ತಾಲೂಕಿನ ಜೆಡಿಎಸ್ ಶಾಸಕ ಎಸ್ ಆರ್ ಶ್ರೀನಿವಾಸ್ ರವರು ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಬರುವ ಯಾವುದೇ ಮಾಹಿತಿ ತಮಗೆ ಇಲ್ಲ ಎಂದು ಗುಬ್ಬಿಯ ಕಾಂಗ್ರೆಸ್ ಮುಖಂಡ ಹೊನ್ನ ಗಿರಿಗೌಡ ತಿಳಿಸಿದ್ದಾರೆ.

 

ತುಮಕೂರಿನ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಹೊನ್ನಾಗಿರಿ ಗೌಡರವರು ಹಾಲಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಬರುವ ಯಾವುದೇ ಮಾಹಿತಿ ತಮಗೆ ಇಲ್ಲವಾಗಿದ್ದು ಅವರು ಜೆಡಿಎಸ್ ಪಕ್ಷದಲ್ಲಿ ಇದ್ದಾರೆ ಅವರು ಎಲ್ಲೇ ಇರಲಿ ನಾವು ಕಾಂಗ್ರೆಸ್ಗೆ ಕರೆಯುವ ಅವಶ್ಯಕತೆ ನಮಗಿಲ್ಲ ಕಾಂಗ್ರೆಸ್ ಪಕ್ಷ ಗುಬ್ಬಿ ತಾಲೂಕಿನಲ್ಲಿ ಸಮರ್ಥವಾಗಿ ಇದೆ . ಗುಬ್ಬಿ ತಾಲೂಕಿನಲ್ಲಿ ಎಸ್ ಆರ್ ಶ್ರೀನಿವಾಸ್ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಸಂಬಂಧ ಇಲ್ಲ ಎಂದರು.

 

 

ಇನ್ನೂ ಮುಂಬರುವ ಚುನಾವಣೆಗೆ ತಾವು ಕೂಡ ಗುಬ್ಬಿ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಆಕಾಂಕ್ಷಿಯಾಗಿದ್ದು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ನಾನು ಸ್ಪರ್ಧಿಸುವುದು ಖಚಿತ ಎಂದರು. ತಾವು ಈಗಲೂ ಕಾಂಗ್ರೆಸ್ ಪಕ್ಷದಲ್ಲೇ ಇದ್ದು ಮುಂದೆಯೂ ಕೂಡ ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇವೆ ಇದರಲ್ಲಿ ಯಾವುದೇ ಅನುಮಾನವಿಲ್ಲ ಇದರಲ್ಲಿ ಗುಬ್ಬಿ ತಾಲೂಕಿನ ಜೆಡಿಎಸ್ ಶಾಸಕರಾದ ಎಸ್ ಆರ್ ಶ್ರೀನಿವಾಸ್ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಸಂಬಂಧ ಇಲ್ಲ ಎಂದರು.

 

ಕೆಲ ಮುಖಂಡರು ನಾವು ಕಾಂಗ್ರೆಸ್ ನಾಯಕರು ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಅಂತಹ ನಾಯಕರ ಮನೆಗಳಿಗೆ ಶಾಸಕರು ಭೇಟಿ ನೀಡಿ ಊಟ ಮಾಡಿದ ಕ್ಷಣಕ್ಕೆ ಅವರು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾರೆ ಎನ್ನುವುದು ಮೂರ್ಖತನ ಹಾಗಾಗಿ ಅವರು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾರೆ ಎನ್ನುವುದು ಎಷ್ಟು ಸರಿ ಎಂದರು.

 

 

ಇನ್ನು ತಾವು ಯಾವುದೇ ಕಾರಣಕ್ಕೂ ಪಕ್ಷ ಸಂಘಟನೆ ಹಾಗೂ ಸ್ಥಳೀಯ ಸಮಸ್ಯೆಗಲಿಗೆ ಸಂಬಂಧಪಟ್ಟಂತೆ ಯಾವುದರಲ್ಲೂ ತಾವು ಹಿಂದೆ ಉಳಿದಿಲ್ಲ ಕಳೆದ ಬಾರಿಯ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಸ್ಥಳೀಯ ಚುನಾವಣೆಗಳಲ್ಲಿ ನಾವೆಲ್ಲರೂ ಸೇರಿ ಕೆಲಸ ಮಾಡಿದ್ದೇವೆ ಮುಂದಿನ ಚುನಾವಣೆಗಳಲ್ಲೂ ಸಹ ನಾನು ಚುನಾವಣೆ ಜವಾಬ್ದಾರಿಗಳನ್ನು ವಹಿಸಿಕೊಳ್ಳಲಿದ್ದೇನೆ ಎಂದರು.

 

ಗುಬ್ಬಿ ತಾಲೂಕಿನಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ ಇನ್ನು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿ ಇದೆ ಹಾಗೂ ಸ್ಥಳೀಯವಾಗಿ ಜೆಡಿಎಸ್ ಶಾಸಕರು ಆಯ್ಕೆಯಾಗಿದ್ದರೂ ಸಹ ಗುಬ್ಬಿ ತಾಲೂಕಿನಲ್ಲಿ ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ತಾಲೂಕಿನಲ್ಲಿ ಕಳಪೆ ಕಾಮಗಾರಿಗಳು ಹಾಗೂ ಹಗರಣಗಳು ಹೆಚ್ಚಿವೆ ಎಂದರು.

 

 

ಇನ್ನೂ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರನ್ನು ಸ್ಥಳೀಯ ಶಾಸಕರು ಹೋಗಳುತ್ತಿರುವುದನ್ನು ನೋಡಿದರೆ ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಳ್ಳಲಿ ಎಂದು ಕೆಪಿಸಿಸಿ ಅಧ್ಯಕ್ಷರನ್ನು ಹೊಗಳುತ್ತಿದ್ದಾರೆ ಎಂದು ಲೇವಡಿ ಮಾಡಿದರು. 20 ವರ್ಷದಿಂದ ಜೆಡಿಎಸ್ ಪಕ್ಷದಲ್ಲಿ ಇರುವ ಶಾಸಕರು ಈಗ ಪಕ್ಷ ತೊರೆಯಲು ಮುಂದಾಗುತ್ತಿದ್ದು ಪಕ್ಷದ ಮುಖಂಡರನ್ನು ಬೈಕೊಂಡು ಬರುವ ಇವರಿಗೆ ಕಾಂಗ್ರೆಸ್ ಪಕ್ಷ ಸೇರಿಸಿಕೊಳ್ಳಲಿ ಎಂದು ಕೆಪಿಸಿಸಿ ಅಧ್ಯಕ್ಷರನ್ನು ಹೊಗಳುತ್ತಿದ್ದಾರೆ ಹಿಂದೆ ಜೆಡಿಎಸ್ ನಾಯಕರನ್ನ ತಮ್ಮ ಸಂಬಂಧಿಗಳು ಎಂದು ಹೇಳುತ್ತಿದ್ದ ಶಾಸಕರು ಈಗ ಕಾಂಗ್ರೆಸ್ ನಾಯಕರನ್ನು ನಮ್ಮ ಸಂಬಂಧಿಗಳು ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದರು.

Leave a Reply

Your email address will not be published. Required fields are marked *

You cannot copy content of this page

error: Content is protected !!