ಮಧುಮೇಹ ಅಥವಾ ಸಕ್ಕರೆ ಕಾಯಿಲೆಗೆ ಏನೆಲ್ಲ ಮನೆ ಮದ್ದು ಇದೆ ಅನ್ನೋದನ್ನ ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಸೀಬೆ ಎಲೇಯಿಂದ ಕಷಾಯ ಮಾಡಿಕೊಂಡು ಕುಡಿಯುವುದರಿಂದ ಯಾವ ರೀತಿ ಸಕ್ಕರೆ ಕಾಯಿಲೆಯನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಅಥವಾ ಸಕ್ಕರೆ ಕಾಯಿಲೆಯನ್ನ ಇಲ್ಲದಂತೆ ಮಾಡಿಕೊಳ್ಳಬಹುದು ಅನ್ನೋದನ್ನ ನೋಡೋಣ. ಇದು ಡಾಕ್ಟರ್ ರಿಸರ್ಚ್ ಆಗಿದೇ. ಡಾಕ್ಟರ್ ಗಳು ಈ ಸೀಬೆ ಎಲೆ ಇದರ ಮೇಲೆ ರಿಸರ್ಚ್ ಮಾಡಿ, ಕಷಾಯ ಕುಡಿಯುವುದರಿಂದ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಈ ಎಲೆಗಳಿಂದ ತುಂಬಾ ಪ್ರಯೋಜನಗಳು ಇದೆ. ಸಕ್ಕರೆ ಕಾಯಿಲೆ ಇರುವವರೂ ಸಹ ದಿನಕ್ಕೆ ಒಂದು ಸೀಬೆ ಹಣ್ಣನ್ನು ತಿನ್ನುವುದು ಒಳ್ಳೆಯದು. ಈ ಎಲೆಗಳಲ್ಲಿ ಕ್ಯಾನ್ಸರ್ ಕಾಯಿಲೆಯನ್ನು ದೂರ ಮಾಡುವ ಶಕ್ತಿಯೂ ಸಹ ಇದೆ.
ಸೀಬೆ ಎಲೆಯ ಕಷಾಯ ಮಾಡೋದು ಹೇಗೆ?
ಐದು ಸೀಬೆ ಎಲೆಗಳನ್ನ ತೆಗೆದುಕೊಂಡು ಅದನ್ನ ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿಕೊಂಡು ಒಂದು ಪ್ಲೇಟ್ ಗೆ ತೆಗೆದಿಟ್ಟುಕೊಳ್ಳಿ. ಡಾಕ್ಟರ್ಸ್ ಹೇಳುವ ಪ್ರಕಾರ, ಈ ಸೀಬೆ ಎಲೇಯ ಕಷಾಯದಿಂದ ಶುಗರ್ ಲೆವೆಲ್ ಬೇಗ ಕಡಿಮೆ ಆಗತ್ತೆ. ಪ್ರತೀ ನಿತ್ಯ ಕುಡಿಯೋದು ತುಂಬಾ ಒಳ್ಳೆಯದು. ಒಂದು ಪಾತ್ರೆಗೆ ೨೦೦ ml ನೀರು ಹಾಕಿ ತೊಳೆದಿಟ್ಟ ಸೀಬೆ ಎಲೆಗಳನ್ನ ಆ ನೀರಿಗೆ ಹಾಕಿ ಗ್ಯಾಸ್ ಮೇಲೆ ಇಟ್ಟು, ಮಧ್ಯಮ ಉರಿಯಲ್ಲಿ ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಾಲ ಚೆನ್ನಾಗಿ ಕುದಿಸಬೇಕು.
ಶುಗರ್ ಇರುವವರಿಗೆ ಕೈ ಕಾಲು, ಮಂಡಿ ನೋವು ಎಲ್ಲ ಇರತ್ತೆ ಆದ್ರೆ ಈ ಕಷಾಯವನ್ನ ಕುಡಿಯುವುದರಿಂದ ಎಲ್ಲ ನೋವುಗಳು ದೂರ ಆಗತ್ತೆ. ಎಲ್ಲ ಕೆಲಸಗಳಲ್ಲೂ ಉತ್ಸಾಹದಿಂದ ಕೆಲಸ ಮಾಡಬಹುದು. ಹಾಗೆ ಇದು ಹೃದಯಕ್ಕೂ ಕೂಡಾ ಒಳ್ಳೆಯದು. ಹದಿನೈದು ಇಪ್ಪತ್ತು ನಿಮಿಷಗಳ ನಂತರ ಗ್ಯಾಸ್ ಆಫ್ ಮಾಡಿ ಅದನ್ನ ಸೋಸಿ ಒಂದು ಗ್ಲಾಸ್ ಗೆ ಹಾಕಿಕೊಳ್ಳಿ. ಇದನ್ನ ನೀವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಒಂದು ವಾರದಲ್ಲಿಯೇ ಶುಗರ್ ಲೆವೆಲ್ ಕಡಿಮೆ ಆಗತ್ತೆ.
ಪ್ರತೀ ದಿನ ಬೆಳಿಗ್ಗೆ ಮತ್ತು ಸಂಜೆ ಈ ಕಷಾಯವನ್ನು ಕುಡಿಯೋದು ತುಂಬಾ ಒಳ್ಳೆಯದು. ಈ ಕಷಾಯವನ್ನ ಕುಡಿದು ಅರ್ಧ ಗಂಟೆಯ ನಂತರ ಆಹಾರವನ್ನು ಸೇವಿಸಬಹುದು. ಹೀಗೆ ಮಾಡುವುದರಿಂದ ಒಂದು ವಾರದಲ್ಲಿ ಸಕ್ಕರೆ ಅಂಶ ಕಡಿಮೆ ಆಗತ್ತೆ. ಸೀಬೆ ಎಲೆಯಲ್ಲಿ “ವಿಟಮಿನ್ ಸಿ” ಹೆಚ್ಚು ಇರತ್ತೆ ಹಾಗಾಗಿ ಇದನ್ನ ಕುದಿಸಿದ ನೀರನ್ನು ತಲೆಗೆ ಹಚ್ಚಿಕೊಳ್ಳುವುದರಿಂದ ಬಿಳಿ ಕೂದಲು ನಿವಾರಣೆ ಸಹ ಅಗತ್ಯ.