ಅಖಿಲ ಕರ್ನಾಟಕ ಡಾಕ್ಟರ್ ಜಿ ಪರಮೇಶ್ವರ್ ಯುವ ಸೈನ್ಯ ವತಿಯಿಂದ ಸಂಘದ ಪದಾಧಿಕಾರಿಗಳು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಪ್ರತಿ ವಾರಂತ್ಯದಲ್ಲಿ ತುಮಕೂರು ನಗರದಾದ್ಯಂತ ಬಡಾವಣೆಗಳಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಮಾಡುತ್ತಾ ಸಾರ್ವಜನಿಕರ ಪ್ರಶಂಸೆಗೆ ಹೆಸರಾಗಿರುವ ಪರಮೇಶ್ವರ್ ಸೈನ್ಯದ ಪದಾಧಿಕಾರಿಗಳು ಗಿಡ ನೆಡುವ ಮೂಲಕ ಹಸಿರು ಸಸ್ಯರಾಶಿ ಕ್ರಾಂತಿಗೆಮುಂದಾಗಿರುವುದರಿಂದ ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು ಸಂಘದ ಚಟುವಟಿಕೆ ಸಂಬಂಧಪಟ್ಟಂತೆ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ. ಇಂದಿನ ಯುವ ಪೀಳಿಗೆ ಸಂಸ್ಕೃತಿ ಪರಿಸರ ಸಂರಕ್ಷಿಸುವಲ್ಲಿ ಅಸಡ್ಡೆ ತೋರುವಂತಹ ಇಂದಿನ ದಿನಮಾನದಲ್ಲಿ ಪರಿಸರ ಪ್ರೇಮ ಪಸರಿಸುತ್ತಿರುವ ಡಾಕ್ಟರ್ ಜಿ ಪರಮೇಶ್ವರ್ ಅವರ ಪದಾಧಿಕಾರಿಗಳು ಪ್ರಶಂಸೆ ಗೆ ವ್ಯಕ್ತವಾಗಿದ್ದರೆ.ಪ್ರತಿ ವಾರಾಂತ್ಯದಲ್ಲಿ ಸೇರುವ ಪದಾಧಿಕಾರಿಗಳು ಬಡಾವಣೆಗಳಲ್ಲಿ ಗಿಡಗಳನ್ನು ನೆಡುತ್ತಾ ಅವುಗಳ ಪೋಷಣೆ ಮಾಡುವ ಮೂಲಕ ಜನರಿಗೆ ಅರಿವನ್ನು ಮೂಡಿಸುವ ಕಾರ್ಯಕ್ರಮ ಪ್ರತಿ ವಾರಾಂತ್ಯದಲ್ಲಿ ಮಾಡುತ್ತಾರೆ ಅದರಂತೆ ಇಂದು ಸಹ ಗಿಡ ನೆಡುವ ಕಾರ್ಯಕ್ರಮ ತುಮಕೂರಿನ ಭೀಮಸoದ್ರ ಗ್ರಾಮದಲ್ಲಿ ಇಂದು ಸಹ ರಸ್ತೆ ಬದಿಯಲ್ಲಿ ಗಿಡ ನೆಡುವ ಮೂಲಕ ತಮ್ಮ ಕಾರ್ಯಚಟುವಟಿಕೆಯನ್ನು ಮುಂದುವರಿಸಿದ್ದಾರೆ. ಸಾರ್ವಜನಿಕರ ಸಹಕಾರದೊಂದಿಗೆ ಸುಮಾರು 50 ಸಾವಿರ ಗಿಡಗಳನ್ನು ನೆಡುವ ಯೋಜನೆಯಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಗಿಡಗಳನ್ನು ನೆಡುವುದು ನಮ್ಮ ಗುರಿಯಾಗಿದೆ ಎಂದು ಡಾಕ್ಟರ್ ಜಿ ಪರಮೇಶ್ವರ್ ಯುವ ಸೈನ್ಯದ ಜಿಲ್ಲಾಧ್ಯಕ್ಷರಾದ ನರಸಿಂಹಮೂರ್ತಿ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿಗಳಾದ ರಮೇಶ್ ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹರಾಜು ,ಯೂತ್ ಕಾಂಗ್ರೆಸ್ ಸೋಮಶೇಖರ್ ಪ್ರವೀಣ್ ಸೇರಿದಂತೆ ಸ್ಥಳೀಯ ನಾಗರಿಕರು ಹಾಜರಿದ್ದರು