ತುಮಕೂರು ತಾಲೂಕಿನ ಉರ್ಡಿಗೆರೆ ಹೋಬಳಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾಕ್ಟರ್ ಮಂಜುನಾಥ (45)ರವರು ಚಿಕಿತ್ಸೆ ಫಲಿಸದೆ ಕೊರೋನಾಗೆ ಇಂದು ಬಲಿಯಾಗಿದ್ದಾರೆ.
ಕಳೆದವಾರ ಇವರಿಗೆ ಕೊರೋನ ಸೋಂಕು ದೃಢಪಟ್ಟಿತ್ತು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಇಂದು ನಿಧನ ಹೊಂದಿದ್ದಾರೆ. ಮೂಲತಹ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಗ್ರಾಮದವರಾಗಿದ್ದಾರೆ.
ರಾಜ್ಯಾದ್ಯಂತ ಕೊರನ ಆರ್ಭಟ ಮುಂದುವರೆದಿದ್ದು ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ತಮ್ಮ ಪ್ರಾಣದ ಹಂಗನ್ನು ತೊರೆದು ಕೊರನ ಸೋಂಕನ್ನು ಮಣಿಸಲು ಸಾಕಷ್ಟು ಶ್ರಮ ಹಾಕುತ್ತಿರುವ ಸಂದರ್ಭದಲ್ಲಿ ವೈದ್ಯರೊಬ್ಬರು ಬಲಿಯಾಗಿರುವುದು ದುರದೃಷ್ಟವೇ ಸರಿ.