ಮಾನವೀಯತೆ ಮೆರೆದ ತುಮಕೂರಿನ ಹೋಂ ಗಾರ್ಡ್ ಸಿಬ್ಬಂದಿ- ರಂಗನಾಥ್.
ತುಮಕೂರು ನಗರದ ಲಕ್ಕಪ್ಪ ವೃತ್ತದಲ್ಲಿ ಇಂದು ಬೆಳಗ್ಗೆ ಸ್ಥಳೀಯ ವೃತ್ತದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೋಂಗಾರ್ಡ್ ಸಿಬ್ಬಂದಿಯೊಬ್ಬರು ಮಾನವೀಯತೆ ಮೆರೆದಿದ್ದಾರೆ. ಇಂದಿನ ದಿನಗಳಲ್ಲಿ ತಾವಾಯಿತು ತಮ್ಮ ಕೆಲಸವಾಯಿತು ಎಂದು ಸ್ವಾರ್ಥ ಮನೋಭಾವದ ನಡುವೆ ಇರುವಂತಹ ಜನಗಳ ಮಧ್ಯದಲ್ಲಿ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗುವ ಅಂತಹ ಕಾರ್ಯವನ್ನು ಮಾಡುವ ಮೂಲಕ ತಮ್ಮ ಮಾನವೀಯತೆ ಹಾಗೂ ಸಾಮಾಜಿಕ ಕಳಕಳಿಯನ್ನು ಸಮಾಜಕ್ಕೆ ತೋರಿಸಿದ್ದಾರೆ.
ದಿನಾಂಕ 4/2 /21ರಂದು ಬೆಳಗ್ಗೆ ಕೆಲಸ ನಿರ್ವಹಿಸುತ್ತಿದ್ದ ರಂಗನಾಥ ರವರು ಸ್ಥಳೀಯ ಲಕ್ಕಪ್ಪ ವೃತ್ತದಲ್ಲಿ ಸುಮಾರು ದಿನಗಳಿಂದ ಗುಂಡಿ ಬಿದ್ದು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟು ಮಾಡುತ್ತಿದ್ದ ಗಮನಿಸಿದ ಅವರು ರಸ್ತೆಯಲ್ಲಿ ಸಾಗುತ್ತಿದ್ದ ಟಿಪ್ಪರ್ ಒಂದನ್ನ ತಡೆದು ಟಿಪ್ಪರ್ ಚಾಲಕನಿಗೆ ಮನವೊಲಿಸಿ ಟಿಪ್ಪರ್ ನಲ್ಲಿದ್ದ ಒಂದಷ್ಟು ಮಣ್ಣನ್ನು ಗುಂಡಿಬಿದ್ದ ಜಾಗಕ್ಕೆ ಹಾಕಿಸುವುದರ ಮೂಲಕ ನಿಮ್ಮ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ. ಕಳೆದ ಕೆಲ ತಿಂಗಳ ಹಿಂದಷ್ಟೇ ಕೂಡ ಇದೇ ಲಕ್ಕಪ್ಪ ವೃತ್ತದಲ್ಲಿ ತಾವೇ ಗುದ್ದಲಿ ಹಿಡಿದು ಗುಂಡಿಯನ್ನು ಮುಚ್ಚಿ ಅಂದು ಕೂಡ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದರು ಅದಕ್ಕೆ ಪುಷ್ಟಿ ನೀಡುವಂತೆ ಇಂದು ಕೂಡ ಗುಂಡಿಗಳನ್ನು ಮುಚ್ಚುವುದರ ಮೂಲಕ ಸಾರ್ವಜನಿಕರಿಗೆ ಹಾಗೂ ವಾಹನ ಚಾಲಕರಿಗೆ ಸಹಾಯ ಮಾಡಿಕೊಟ್ಟಿದ್ದಾರೆ.ಹೋಂ ಗಾರ್ಡ್ಸ್ ಇಲಾಖೆಯಲ್ಲಿ ತನಗೆ ವಹಿಸಿದ ಕೆಲಸವನ್ನು ಚಾಚೂತಪ್ಪದೆ ನಿರ್ವಹಿಸಿ ತನ್ನ ಕರ್ತವ್ಯ ನಿಷ್ಠೆ ತೋರುತ್ತಿರುವ ರಂಗನಾಥ್ ರವರನ್ನು ಗುರುತಿಸುವಂತಹ ಕೆಲಸವನ್ನು ಸಂಬಂಧಪಟ್ಟ ಇಲಾಖೆಗಳು ಮಾಡಬೇಕಾಗಿದೆ. ಅಲ್ಲೇ ಸ್ಥಳೀಯವಾಗಿ ಇದ್ದ ಸಾರ್ವಜನಿಕರೊಬ್ಬರು ಕ್ಲಿಕ್ಕಿಸಿದ ಫೋಟೋ ಇಂದು ಇಂತಹ ಒಂದು ಕರ್ತವ್ಯನಿಷ್ಠೆ ಹಾಗೂ ಸಾಮಾಜಿಕ ಕಳಕಳಿ ಗೆ ಪಾತ್ರರಾದ ರಂಗನಾಥ್ ರವರ ಈ ಕಾರ್ಯಕ್ಕೆ ತುಮಕೂರು ನಗರದಾದ್ಯಂತ ಪ್ರಶಸ್ತವಾಗಿದೆ.