ಜಿಲ್ಲೆಯ ಬೃಹತ್ ರಕ್ತದಾನ ಶಿಬಿರಕ್ಕೆ ಉತ್ತಮ ಸ್ಪಂದನೆ

ಜಿಲ್ಲೆಯ ಬೃಹತ್ ರಕ್ತದಾನ ಶಿಬಿರಕ್ಕೆ ಉತ್ತಮ ಸ್ಪಂದನೆ

 

 

ತುಮಕೂರು: ಕೋವಿಡ್ ೩ನೇ ಅಲೆಯ ಮುಂಜಾಗ್ರತೆಯಾಗಿ ರಕ್ತದ ಕೊರತೆಯಾಗದಂತೆ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರು ಹಾಗೂ ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷರಾದ ಮುರಳೀಧರ ಹಾಲಪ್ಪ ಅವರು, ವಿವಿಧ ಸಂಸ್ಥೆಗಳಾದ ರೆಡ್‌ಕ್ರಾಸ್, ಜಿಲ್ಲಾ ಆಸ್ಪತ್ರೆ, ಸತ್ಯಸಾಯಿ ಆರ್ಗನೈಸೇಷನ್, ಒನ್ ನೇಷನ್, ಎನ್‌ಸಿಸಿ, ಎನ್‌ಎಸ್‌ಎಸ್, ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳು, ತುಮಕೂರು ವಿಶ್ವವಿದ್ಯಾನಿಲಯ, ಸೇವಾದಳ್, ಇನ್ನರ್ ವ್ಹೀಲ್, ಐಎಂಎ, ಆಟೋ ಯೂನಿಯನ್, ಗಿವ್ ಬ್ಯಾಕ್, ಕೈಗಾರಿಕಾ ಸಂಘ ಹಾಗೂ ವಿವಿಧ ರೋಟರಿ ಸಂಸ್ಥೆಗಳ ಸಹಯೋಗದೊಂದಿಗೆ ಶನಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ‘ಮೆಘಾ’ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಲಾಯಿತು.

 

ಭಾರತದ ೭೫ನೇ ವರ್ಷದ ಸ್ವಾತಂತ್ರೊö್ಯoತ್ಸವ ಸಂಭ್ರಮಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೂ ಮುನ್ನ ಮಹಾತ್ಮಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಸ್ವಾತಂತ್ರೊö್ಯoತ್ಸವದ ಧ್ವಜಾರೋಹಣ ನೆರವೇರಿಸಲಾಯಿತು.

 

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷರು ಹಾಗೂ ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷರಾದ ಮುರಳೀಧರ ಹಾಲಪ್ಪ, ಕಳೆದ ೧೫ ದಿನಗಳ ಹಿಂದೆ ಜಿಲ್ಲಾಡಳಿತದೊಂದಿಗೆ ೩ನೇ ಅಲೆಗೆ ಸಂಬAಧಿಸಿದAತೆ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚೆ ನಡೆಸಿದಾಗ ಆ ಚರ್ಚೆಯಲ್ಲಿ ವಿಶೇಷವಾಗಿ ರಕ್ತದ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಬೇಕೆಂಬ ಸಲಹೆಗಳು ಕೇಳಿ ಬಂದ ಹಿನ್ನಲೆಯಲ್ಲಿ ವಿವಿಧ ಸಂಘ ಸಂಸ್ಥೆಗಳೊಡಗೂಡಿ ತುಮಕೂರು ನಗರವೂ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ರಕ್ತದಾನ ಶಿಬಿರ ಹಮ್ಮಿಕೊಂಡು ಸಪ್ತಾಹದ ರೀತಿಯಲ್ಲಿ ರಕ್ತ ಸಂಗ್ರಹ ಮಾಡುವ ತೀರ್ಮಾನಕ್ಕೆ ಬರಲಾಯಿತು ಎಂದರು.

ಈ ಸಂಬoಧ ವಿವಿಧ ಸಂಘ ಸಂಸ್ಥೆಗಳೊoದಿಗೆ ಮೂರು ಭಾರಿ ಚರ್ಚೆ ನಡೆಸಿ ಅಂತಿಮವಾಗಿ ಸ್ವಾತಂತ್ರೊö್ಯoತ್ಸವದ ಮುನ್ನಾದಿನ ತುಮಕೂರಿನಿಂದ ರಕ್ತದಾನ ಶಿಬಿರ ಏರ್ಪಡಿಸುವ ಮೂಲಕ ಆಗಸ್ಟ್ ೩೧ರವರೆಗೂ ಎಲ್ಲಾ ೧೦ ತಾಲ್ಲೂಕುಗಳಲ್ಲೂ ಶಿಬಿರಗಳನ್ನು ಆಯೋಜಿಸಿ ಸುಮಾರು ೨೦೦೦ಕ್ಕೂ ಅಧಿಕ ಯೂನಿಟ್‌ಗಳ ರಕ್ತ ಸಂಗ್ರಹದ ಗುರಿ ಹೊಂದಲಾಗಿದೆ ಎಂದರು.

ಈ ಕಾರ್ಯದಿಂದ ಕೋವಿಡ್ ೩ನೇ ಅಲೆ ಆತಂಕವನ್ನು ಸ್ವಲ್ಪಮಟ್ಟಿಗೆ ದೂರ ಮಾಡಲು ನಮ್ಮದೊಂದು ಸಣ್ಣ ಪ್ರಯತ್ನವಷ್ಟೇ ನಗರದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಸ್ವಯಂ ಪ್ರೇರಕರಾಗಿ ಬಂದು ರಕ್ತದಾನ ಮಾಡಿದ್ದು, ಸುಮಾರು ೧೧೦ ಯೂನಿಟ್ಸ್ ರಕ್ತ ಸಂಗ್ರಹವಾಗಿದೆ. ಪ್ರತಿವಾರ ಬೇರೆ ಬೇರೆ ತಾಲ್ಲೂಕುಗಳಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳುವ ನಿರ್ಧಾರವನ್ನೂ ಮಾಡಲಾಗಿದೆ. ಕೋವಿಡ್ ಸಂದರ್ಭದಲ್ಲೂ ಸಹ ಯುವಕರು ಬೇರೆ ಬೇರೆ ಸ್ಥಳಗಳಿಂದ ಆಗಮಿಸಿ ಆಸಕ್ತಿ ತೋರಿಸಿ ರಕ್ತದಾನ ಮಾಡಿದ್ದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

 

 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರ್‌ವಾಡ್, ಕೋವಿಡ್ ಸಂದರ್ಭದಲ್ಲಿ ಉತ್ತಮವಾದ ಕಾರ್ಯವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ನಾನೂ ಸಹ ಸಾಕಷ್ಟು ಭಾರಿ ರಕ್ತದಾನ ಮಾಡಿದ್ದೇನೆ. ಯುವಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವ ಉಳಿಸಿಬೇಕೆಂದು ಕರೆ ನೀಡಿದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿಗಳಾದ ಎಸ್.ನಾಗಣ್ಣ ಮಾತನಾಡಿ, ಕೋವಿಡ್ ಮುಂಜಾಗ್ರತೆಯಿoದ ಮೆಘಾ ರಕ್ತದಾನ ಶಿಬಿರವನ್ನು ಆಯೋಜಿಸುವ ಮೂಲಕ ಮುರಳೀಧರ ಹಾಲಪ್ಪ ಅವರು ವಿಶೇಷ ಕಾರ್ಯಕ್ರಮವನ್ನು ರೂಪಿಸಿದ್ದಾರೆ. ಇದಕ್ಕೆ ರೆಡ್‌ಕ್ರಾಸ್ ಸಂಸ್ಥೆಯೂ ಕೂಡ ಸಹಕಾರ ನೀಡುತ್ತಿದೆ ಎಂದರು.

ರೆಡ್‌ಕ್ರಾಸ್ ಸಂಸ್ಥೆಯ ಮುಖ್ಯ ಧ್ಯೇಯ ರಕ್ತದಾನ. ನಮ್ಮ ಭಾರತದ ಜನಸಂಖ್ಯೆ ಗನುಗುಣವಾಗಿ ಶೇ.೧ ರಷ್ಟು ರಕ್ತ ಅವಶ್ಯಕತೆಯಿದೆ. ಡಯಾಲಿಸಿಸ್, ಕ್ಯಾನ್ಸರ್, ಹೆರಿಗೆ ಸಂದರ್ಭ, ಅಪಘಾತದ ಸಂದರ್ಭಗಳಲ್ಲಿ ರಕ್ತದಾನದ ಅವಶ್ಯಕತೆ ಹೆಚ್ಚಿನದಾಗಿದೆ ಎಂದು ಹೇಳಿದರು.

ಶಿಬಿರದಲ್ಲಿ ಸಿದ್ಧಗಂಗಾ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು, ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಸಿಬ್ಬಂದಿ ಭಾಗವಹಿಸಿ ರಕ್ತದಾನ ಶಿಬಿರ ಯಶಸ್ವಿಗೊಳಿಸಿದರು. ಸಂಗ್ರಹವಾದ ರಕ್ತವನ್ನು ಜಿಲ್ಲಾಸ್ಪತ್ರೆಯ ಬ್ಲಡ್ ಬ್ಯಾಂಕ್‌ಗೆ ಹಸ್ತಾಂತರಿಸಲಾಯಿತು. ರಕ್ತದಾನ ಮಾಡಿದವರಿಗೆ ಜಿಲ್ಲಾಸ್ಪತ್ರೆಯಿಂದ ಪ್ರಶಂಸಾ ಪತ್ರ ನೀಡಲಾಯಿತು.

ಶಿಬಿರದಲ್ಲಿ ವಿದ್ಯೋದಯ ಫೌಂಡೇಷನ್ ಟ್ರಸ್ಟ್ನ ಪ್ರೊ.ಕೆ.ಚಂದ್ರಣ್ಣ, ಮಹಾನಗರಪಾಲಿಕೆ ಆಯುಕ್ತರಾದ ರೇಣುಕಾ, ಬಾಪೂಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಂ.ಬಸವಯ್ಯ, ರೆಡ್‌ಕ್ರಾಸ ಸಂಸ್ಥೆ ಜಿಲ್ಲಾಧ್ಯಕ್ಷರಾದ ಟಿ.ಬಿ.ಶೇಖರ್, ರೋಟರಿ ಅಧ್ಯಕ್ಷ ಬಸವರಾಜ್ ಹಿರೇಮಠ್, ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಟಿ.ಎ.ವೀರಭದ್ರಯ್ಯ, ರೋಟರಿಯ ನಾಗರಾಜಶೆಟ್ಟಿ, ನಿಜಲಿಂಗಪ್ಪ, ಶ್ರೀನಿವಾಸಮೂರ್ತಿ, ಒನ್ ನೇಷನ್‌ನ ಪೃಥ್ವಿ ಹಾಲಪ್ಪ, ಸತ್ಯಸಾಯಿ ಆರ್ಗನೈಸೇಷನ್‌ನ ಸತ್ಯನಾರಾಯಣ, ಡಾ.ವಿಜಯರಾಘವೇಂದ್ರ, ಐಆರ್‌ಸಿಎಸ್ ನಿರ್ದೇಶಕ ಶಿವಕುಮಾರ್, ಜಿಲ್ಲಾ ಆಸ್ಪತ್ರೆಯ ಬ್ಲಡ್ ಬ್ಯಾಂಕ್‌ನ ಡಾ.ವೀಣಾ, ಮಹಾಲಕ್ಷಿö್ಮ, ಮರಿಚನ್ನಮ್ಮ, ನಟರಾಜ್, ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಯ ವೇಣುಗೋಪಾಲ್, ಅಭಿಷೇಕ್, ಪವನ್, ಸೇರಿದಂತೆ ಗಿವ್ ಬ್ಯಾಕ್, ಎನ್‌ಸಿಸಿ, ಎನ್‌ಎಸ್‌ಎಸ್, ಐಎಂಎ, ಸಿದ್ಧಗಂಗಾ ಸಂಸ್ಥೆಗಳು, ತುಮಕೂರು ವಿಶ್ವವಿದ್ಯಾನಿಲಯ, ಆಟೋ ಯೂನಿಯನ್ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!