ರೈತರು ಬೆಳೆದ ರಾಗಿಗೆ ಸೂಕ್ತ ಬೆಲೆ ನಿಗದಿಯಾಗಿದೆ, ಶಾಸಕ ಎಲ್.ಎನ್. ನಾರಾಯಣಸ್ವಾಮಿ
ದೇವನಹಳ್ಳಿ:
ತಾಲೂಕಿನಾದ್ಯಂತ ನಮ್ಮ ರೈತರು ಈ ಬಾರಿ ಒಳ್ಳೆಯ ಗುಣಮಟ್ಟದ ರಾಗಿ ಬೆಳೆಯನ್ನು ಬೆಳೆದಿದ್ದಾರೆ ಆದ್ದರಿಂದ ಎಲ್ಲಾ ರೈತರು ತಪ್ಪದೇ ರಾಗಿ ಖರೀದಿ ಕೇಂದ್ರದಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿ ಈಗಾಗಲೇ ಈ ವರ್ಷ ರಾಗಿಗೆ ಸರಕಾರ ಸೂಕ್ತವಾದ ಬೆಲೆಯನ್ನು ನಿಗದಿ ಮಾಡಿದೆ . ಎಂದು ಶಾಸಕ ಎಲ್.ಎನ್. ನಾರಾಯಣಸ್ವಾಮಿ ತಿಳಿಸಿದರು.
ಪಟ್ಟಣದ ಪಿಎಲ್‍ಡಿ ಬ್ಯಾಂಕ್ ಆವರಣದ ಸಭಾಂಗಣದಲ್ಲಿ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದರು. ಈ ಬಾರಿ ಉತ್ತಮ ಮಳೆಯಾಗಿ ರೈತರು ಬೆಳೆದ ರಾಗಿಗೆ ಬೆಂಬಲ ಬೆಲೆ ನೀಡಲು ಹಲವು ಲೋಪದೋಷದ ಬಗ್ಗೆ ಇತ್ತೀಚೆಗೆ ಸದನದಲ್ಲಿ ನಡೆದ ಚರ್ಚೆಯಾದ್ದರಿಂದ ಸ್ಪಂದಿಸಿ ರೈತರಿಂದ ರಾಗಿ ಖರೀದಿಸಲು ಸೂಚಿಸಿದೆ. 2020-21ನೇ ಸಾಲಿನ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ಉತ್ತಮ ಗುಣಮಟ್ಟದ ರಾಗಿಯನ್ನು ಖರೀದಿಸಲು ಮತ್ತು ನೋಂದಣಿ ಮಾಡಿಸಲು ಮತ್ತು ಸಂಪೂರ್ಣ ವಿವರಣೆ ನೀಡಲು ಇದೇ ತಿಂಗಳ 11-01-2021ರಿಂದ ನಗರದ ಪಿಎಲ್‍ಡಿ ಬ್ಯಾಂಕ್ ಸಭಾಂಗಣದಲ್ಲಿ ರೈತರು ತಮ್ಮ ಆಧಾರ್ ಕಾರ್ಡ್ ತೆಗೆದುಕೊಂಡು ಬಂದು ಓಟರ್ ಐಡಿ ನೋಂದಣಿ ಮಾಡಿಸಿಕೊಳ್ಳತಕ್ಕದ್ದು. ಇತ್ತೀಚೆಗೆ ಸರ್ಕಾರ ಸ್ಪಂದಿಸಿ ಜರೂರಾಗಿ ರೈತರಿಂದ ರಾಗಿ ಖರೀದಿ ಮಾಡಲು ದಿನಾಂಕ ನಿಗಧಿಪಡಿಸುವುದಾಗಿ ಹೇಳಿರುವಂತೆ ಜ31 ಒಳಗೆ ಹೆಸರು ನೋಂದಾಯಿಸಿಕೊಳ್ಳಲು ಖಡ್ಡಾಯವಾಗಿರುತ್ತದೆ ಮತ್ತು ರಾಗಿ ಖರೀದಿ ದಿನಾಂಕ ಮಾ31 ಕೊನೆಯ ದಿನವಾಗಿರುತ್ತದೆ. ಪ್ರತಿ ಕ್ವಿಂಟಲ್‍ಗೆ ರೂ.3,295 ನಿಗಧಿಪಡಿಸಿದೆ. ಚೀಲಕ್ಕೆ ರೂ.29 ನಿಗಧಿಪಡಿಸಿದೆ. ತಾಲೂಕಿನ ರೈತರು ಹೆಚ್ಚಾಗಿ ಬೆಳೆದ ರಾಗಿಯನ್ನು ಖರೀದಿ ಕೇಂದ್ರಕ್ಕೆ ಸರಬರಾಜು ಮಾಡಿ ನೋಂದಾಯಿಸಿಕೊಳ್ಳಲು ಶಾಸಕರು ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ರಾಗಿ ಖರೀದಿ ಅಧಿಕಾರಿ ಡಿ. ಚಿಕ್ಕಬಸಪ್ಪ, ದೂ.ಸಂಖ್ಯೆ9880156366 ಇವರನ್ನು ಸಂಪರ್ಕಿಸಲು ತಿಳಿಸಿದೆ.
ಇದೇ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ. ಮುನೇಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ಬಿ. ಶ್ರೀನಿವಾಸ್, ಕಾರ್ಯಾಧ್ಯಕ್ಷ ಆರ್. ಮುನೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎ. ರವೀಂದ್ರ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮುನಿರಾಜು, ತಾಲೂಕು ಸೊಸೈಟಿ ಅಧ್ಯಕ್ಷ ಮಂಡಿಬೆಲೆ ರಾಜಣ್ಣ, ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಆರ್. ಭರತ್‍ಕುಮಾರ್, ಹಾಫ್ ಕಾಮ್ಸ್ ನಿರ್ದೇಶಕ ಶ್ರೀನಿವಾಸ್ ಮತ್ತಿತರರು ಇದ್ದರು.
ಗುರುಮೂರ್ತಿ ಬೂದಿಗೆರೆ