ನರೇಗಾ ಕಾಮಗಾರಿಯಲ್ಲಿ ಗೋಲ್ಮಾಲ್ ಆರೋಪ, 15 ಲಕ್ಷದ ಕಾಮಗಾರಿ ಜೆಸಿಬಿ ಮೂಲಕ ನಿರ್ವಹಣೆ

ನರೇಗಾ ಕಾಮಗಾರಿಯಲ್ಲಿ ಗೋಲ್ಮಾಲ್ ಆರೋಪ, 15 ಲಕ್ಷದ ಕಾಮಗಾರಿ ಜೆಸಿಬಿ ಮೂಲಕ ನಿರ್ವಹಣೆ

 

 

 

ಕೊರಟಗೆರೆ- ತಾಲೂಕಿನ ಕಸಬಾ ಹೋಬಳಿ ಹಂಚಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೋಡ ಬಂಡೆನಹಳ್ಳಿ ಗ್ರಾಮದಲ್ಲಿ ಪ್ರತಿಷ್ಠಿತ ಯೋಜನೆಯದ ಅಮೃತ ಸರೋವರ ಯೋಜನೆ ಅಡಿಯಲ್ಲಿ 15 ಲಕ್ಷದ ಕಾಮಗಾರಿ ಬೋಡ ಬಂಡೆನಹಳ್ಳಿಗೆ ದೊರಕಿದೆ.

 

 

 

 

ಹಂಚಿಹಳ್ಳಿ ಗ್ರಾಮ ಪಂಚಾಯಿತಿಯ ಸದಸ್ಯರೊಬ್ಬರು ಗ್ರಾಮ ಪಂಚಾಯತಿಯ ನರೇಗಾ ಯೋಜನೆ ಅಡಿಯಲ್ಲಿ 15 ಲಕ್ಷದ ಕಾಮಗಾರಿಯನ್ನು ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.

 

 

 

 

 

ಸರ್ಕಾರದ ಆದೇಶದಲ್ಲಿ ಯಾವುದೇ ಗ್ರಾಮ ಪಂಚಾಯಿತಿ ಸದಸ್ಯರು ನರೇಗಾ ಕಾಮಗಾರಿಗಳನ್ನು ನಿರ್ವಹಿಸಬಾರದು ಎಂದು ಆದೇಶ ನೀಡಲಾಗಿರುತ್ತದೆ.

 

 

 

 

 

ಈ ಆದೇಶವನ್ನು ಮೀರಿದ ಸದಸ್ಯರ ಸದಸ್ಯತ್ವವನ್ನು ರದ್ದು ಮಾಡಲಾಗುತ್ತದೆ ಎಂದು ಕಟ್ಟುನಿಟ್ಟಿನ ಆದೇಶವನ್ನು ನೀಡಲಾಗಿದೆ.

 

 

 

 

ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ಕೊರಟಗೆರೆ ತಾಲೂಕಿನ ಹಂಚಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸದಸ್ಯರುಗಳು ಕಾಮಗಾರಿಗಳನ್ನು ಮಾಡುತ್ತಿರುವುದಲ್ಲದೆ ಇದನ್ನು ಪ್ರಶ್ನಿಸುವ ಅಧಿಕಾರಿಗಳು ಮೂಕ ವಿಸ್ಮಿಕರಾಗಿರುವುದು, ವಿಪರ್ಯಾಸವೇ ಸರಿ…

 

ಈ ಕಾಮಗಾರಿ ನಡೆಯುವ ಸ್ಥಳಕ್ಕೆ ಮಾಧ್ಯಮ ವ್ಯಕ್ತಿಯೊಬ್ಬರು ಹೋಗಿ ವಿಡಿಯೋ ತೆಗೆದುಕೊಂಡು ಬಂದ ನಂತರ ಸುದ್ದಿ ಪ್ರಸಾರವಾಗಿತ್ತು. ತದನಂತರ ಕೊರಟಗೆರೆ ತಾಲೂಕಿನ ಪತ್ರಕರ್ತರಿಗೆ ಸುದ್ದಿ ತಲುಪಿ ಸ್ಥಳಕ್ಕೆ ಹೋದ ಪತ್ರಕರ್ತರು ಸುದ್ದಿ ಮಾಡದೆ ಸೈಲೆಂಟ್ ಆಗಿರೋದು ಯಕ್ಷಪ್ರಶ್ನೆ ಸರಿ.

 

ಈ ರೀತಿಯಾಗಿ ಕೊರಟಗೆರೆ ಪತ್ರಕರ್ತರು ಸೈಲೆಂಟ್ ಆಗಿರುವುದಕ್ಕೆ ಕಾರಣಗಳು ತಿಳಿದು ಬಂದಿಲ್ಲಾ ತಾಲೂಕಿನ ಯಾವುದೇ ಮಾಧ್ಯಮ ಹಾಗೂ ಪತ್ರಿಕೆಯಲ್ಲೂ ಸಹ ಸುದ್ದಿ ಪ್ರಕಟವಾಗದೆ ಇರುವುದು ಸಾಕಷ್ಟು ಅನುಮಾನಗಳಿಗೂ ಸಹ ಎಡೆ ಮಾಡುತ್ತಿದ್ದು.

 

 

ತಾಲೂಕಿನಾದ್ಯಂತ ಈ ರೀತಿ JCB ಯಲ್ಲಿ ನರೇಗಾ ಕಾಮಗಾರಿಗಳನ್ನು ನಿರ್ವಹಿಸುತ್ತಲೇ ಇರುತ್ತಾರೆ ಗಂಭೀರ ಆರೋಪ ತಾಲೂಕಿನ ಅತ್ಯಂತ ಕೇಳಿ ಬರುತ್ತಿದ್ದು.

 

 

 

 

ಸರ್ಕಾರದ ಯೋಜನೆಗಳನ್ನು ಬರಿ ಹಣಕ್ಕಾಗಿಯೇ ಅಧಿಕಾರಿಗಳು ಶಾಮೀಲಾಗುತ್ತಿದ್ದಾರೆ ಇದನ್ನು ಪ್ರಶ್ನಿಸುವಂತಹ ಮಾಧ್ಯಮದವರು ಸಹ ಹಣದಾಸೆಗೆ ಬಲಿಯಾಗುತ್ತಿದ್ದಾರೆಯೇ ???

 

ಹಾಗಾದರೆ ಈ 15 ಲಕ್ಷದ ಕಾಮಗಾರಿಯಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ಹಣ ತಲುಪಿದೆ ಎಂಬುದು ಕುತೂಹಲಕಾರಿಯಾಗಿದೆ.

 

ಕರ್ನಾಟಕ ರಾಜ್ಯ ಸರ್ಕಾರದ ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀ ಅತಿಕ್ ಅಹಮದ್ ಮೂಲತಃ ಕೊರಟಗೆರೆ ತಾಲೂಕಿನ ಅಧಿಕಾರಿ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ತವರೂರಿನಲ್ಲಿ ತಮ್ಮ ಇಲಾಖೆಯಲ್ಲಿ ಇಂತಹ ಭ್ರಷ್ಟಾಚಾರವನ್ನು ತಡೆಯಲು ವಿಫಲರಾಗಿದ್ದಾರೆ ಎಂದರೆ ತಪ್ಪಾಗಲಾರದು.

 

 

ಇನ್ನು ರಾಜ್ಯದ ಹಲವು ಜಿಲ್ಲೆಗಳಲ್ಲಿ ನಡೆಯುವ ಭ್ರಷ್ಟಾಚಾರವನ್ನು ಇಲಾಖೆ ಮುಖ್ಯಸ್ಥರು ಯಾವ ರೀತಿ ತಡೆಯುತ್ತಾರೆ ಎಂಬುದೇ ಈಗಿನ ಯಕ್ಷ ಪ್ರಶ್ನೆ….?

 

 

 

ರಾಜ್ಯದ ಕಾನೂನು ಕಾಪಾಡುವಂತಹ ಸಚಿವರ ಕ್ಷೇತ್ರದಲ್ಲಿ ಇಂತಹ ಬ್ರಷ್ಟಾಚಾರಗಳು ಎ ನಡೆಯುತ್ತಿದ್ದು ಆದರೂ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುವವರು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!