ಸಾವಯವ ಉತ್ಪನ್ನಗಳ ಮಾರುಕಟ್ಟೆಗೆ ಹೆಚ್ಚಿನ ಆದ್ಯತೆ

ದೊಡ್ಡಬಳ್ಳಾಪುರ : ಪ್ರಜ್ಞಾವಂತ ಆಹಾರವಾದ ಸಿರಿಧಾನ್ಯದ ಕುರಿತು ವ್ಯಾಪಕ ಪ್ರಚಾರವನ್ನು ನೀಡಲು ಜಾಗೃತಿ ಮೂಡಿಸಲು ಸಾವಯವ ಉತ್ಪನ್ನಗಳ ಮಾರುಕಟ್ಟೆಗೆ ಹೆಚ್ಚಿನ ಆದ್ಯತೆ

 

 

 

ನೀಡಲು ಇಂದು ದೊಡ್ಡಬಳ್ಳಾಪುರ ನಗರದ ಸಿರಿಧಾನ್ಯದ ನಡಿಗೆ ಆರೋಗ್ಯದ ಕಡೆಗೆ ಎನ್ನುವ ಮ್ಯಾರಥಾನ್ ಗೆ ಶಾಸಕರಾದ ಟಿ ವೆಂಕಟರಮಣಯ್ಯ ಚಾಲನೆ ನೀಡಿದರು ನಗರದ ಪ್ರವಾಸಿ ಮಂದಿರ ವೃತ್ತದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು ಸಾವಯವ ಸಿರಿಧಾನ್ಯದ ಕುರಿತು ಜಾಗೃತಿ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವಲ್ಲಿ ರೈತರ ಕೊಡುಗೆ ಅಪಾರ ಅವರ ಮನವೊಲಿಸಿ ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲು ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಮ್ಯಾರಥಾನ್ ಅನ್ನು ಆಯೋಜಿಸಲಾಗಿದೆ ಇತ್ತೀಚಿನ ದಿನಗಳಲ್ಲಿ ಕ್ರಿಮಿನಾಶಕ ರಸಗೊಬ್ಬರ ಗಳ ಅತಿಯಾದ ಬಳಕೆ ಆಗುತ್ತಿದೆ ಆರೋಗ್ಯಕರ ಆಹಾರದ ಕಡೆಗೆ ಹೆಚ್ಚಿನ ಗಮನ ಹರಿಸಬೇಕಿದೆ ರಾಸಾಯನಿಕದ ಬಳಕೆಯಿಂದ ನಮ್ಮಭೂಮಿ ಫಲವತ್ತತೆಯನ್ನು ಹಾಳು ಮಾಡುತ್ತಿದ್ದೇವೆ ನಮ್ಮ ಹಿರಿಯರು ನೀಡಿದ ಭೂಮಿ ಪ್ರಕೃತಿಯನ್ನು ರಕ್ಷಿಸಬೇಕಿದೆ ಎಂದು ಮನವಿ ಮಾಡಿದರು ಪ್ರವಾಸಿ ಮಂದಿರ ವೃತ್ತದಿಂದ ಆರಂಭವಾದ ಮ್ಯಾರಥಾನ್ ಕೋರ್ಟ್ ರಸ್ತೆ ತಾಲೂಕು ಕಚೇರಿ ವೃತ್ತ ದಿಂದ ಸಾಗಿ ಬಸವ ಭವನ ವೃತ್ತದ ಮೂಲಕ ಮೂರು ಕಿಲೋಮೀಟರ್ ಸಾಗಿ ಮತ್ತೆ ಪ್ರವಾಸಿ ಮಂದಿರದಲ್ಲಿ ಕೊನೆಯಾಯಿತು ಇದಕ್ಕೂ ಮುನ್ನ ಸಾಮೂಹಿಕ ವ್ಯಾಯಾಮ ಲಾಂಛನವನ್ನು ಬಿಡುಗಡೆ ಮಾಡಲಾಯಿತು

ಈ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಟಿ ಎಸ್ ಶಿವರಾಜ್ ತಾಲೂಕು ಪಂಚಾಯಿತಿ ಅಧ್ಯಕ್ಷ ನಾರಾಯಣಗೌಡ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಜಯಚಂದ್ರ ನಗರಸಭೆ ಪೌರಾಯುಕ್ತ ರಮೇಶ ಸುಣಗಾರ್ ಸಬ್ ಇನ್ಸ್ ಪೆ ಕ್ಟರ್ ಸೋಮಶೇಖರ್ ಸಹಾಯಕ ಕೃಷಿ ನಿರ್ದೇಶಕಿ ಸುಶೀಲಮ್ಮ ತಾಂತ್ರಿಕ ಅಧಿಕಾರಿ ರೂಪ ಸಾರ್ವಜನಿಕರು ರೈತರು ಜಾಥಾದಲ್ಲಿ ಪಾಲ್ಗೊಂಡಿದ್ದರು.

 

ಗುರುಮೂರ್ತಿ ಬೂದಿಗೆರೆ

Leave a Reply

Your email address will not be published. Required fields are marked *