ಶೀಘ್ರವೇ ಸಾರ್ವಜನಿಕ ಬದುಕಿಗೆ ಕಂ ಬ್ಯಾಕ್ _ಗಾಲಿ ಜನಾರ್ದನ ರೆಡ್ಡಿ.
ತುಮಕೂರು_ಶೀಘ್ರವೇ ತಾವು ಮತ್ತೊಮ್ಮೆ ಸಾರ್ವಜನಿಕ ಜೀವನದಲ್ಲಿ ಭಾಗವಹಿಸಲು ಸಿದ್ಧತೆ ಮಾಡಿಕೊಂಡಿರುವುದಾಗಿ ಮಾಜಿ ಸಚಿವ ಹಾಗೂ ಬಿಜೆಪಿಯ ಮುಖಂಡ ಗಾಳಿ ಜನಾರ್ಧನ್ ರೆಡ್ಡಿ ತಿಳಿಸಿದ್ದಾರೆ.
ಅವರ ಸೋಮವಾರ ಬೆಳಗ್ಗೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ದಂಪತಿ ಸಮೇತ ಭೇಟಿ ನೀಡಿದ ಅವರು ಶ್ರೀ ಶಿವಕುಮಾರ ಮಹಾಸ್ವಾಮಿಗಳ ಗದ್ದುಗೆ ಭೇಟಿ ನೀಡಿ ದರ್ಶನ ಪಡೆದ ಅವರು ನಂತರ ಸಿದ್ದಗಂಗಾ ಶ್ರೀಗಳನ್ನು ಭೇಟಿ ಮಾಡಿದರು.
ಇದೇ ವೇಳೆ ಪತ್ರಕರ್ತರೊಂದಿಗೆ ಮಾತನಾಡಿರುವ ಅವರು ಕಲ್ಪತರು ನಾಡು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ ಮಹಾಸ್ವಾಮಿಗಳು ಹಾಗೂ ಸಿದ್ದಗಂಗಾ ಶ್ರೀಗಳ ದರ್ಶನ ಪಡೆದಿರುವುದಾಗಿ ತಿಳಿಸಿದ ಅವರು ಶೀಘ್ರವೇ ತಾವು ಸಾರ್ವಜನಿಕ ಜೀವನದಲ್ಲಿ ಸಕ್ರಿಯಾನಾಗಲು ಸಿದ್ದತೆ ಮಾಡಿಕೊಂಡಿರುವುದಾಗಿ ತಿಳಿಸಿದರು. ತುಮಕೂರಿನ ಸಿದ್ದಗಂಗಾ ಮಠ ಕಾಯಕವೆ ಕೈಲಾಸ ಎನ್ನುವ ಆಶಯದೊಂದಿಗೆ ಇಡೀ ಪ್ರಪಂಚಕ್ಕೆ ಮಾದರಿಯಾಗಿ ಸೇವೆ ಸಲ್ಲಿಸುತ್ತಿದ್ದು ತಾವು ಸಹ ಇಂದು ಮಠಕ್ಕೆ ಭೇಟಿ ನೀಡಿರುವುದು ಸಂತೋಷ ತಂದಿದೆ ಎಂದರು.
ತಾವು ಸಾರ್ವಜನಿಕ ಜೀವನಕ್ಕೆ ಬರಬೇಕೆಂದು ನಿರ್ಧಾರ ಮಾಡಿದ ನಂತರ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದು ಸಾರ್ವಜನಿಕ ಜೀವನಕ್ಕೆ ಬರಬೇಕೆಂದು ನಿರ್ಧಾರ ತೆಗೆದುಕೊಂಡ ನಂತರ ರಾಜ್ಯದ್ಯಂತ ಪ್ರವಾಸ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
ಸಾರ್ವಜನಿಕ ಜೀವನದಲ್ಲಿ ಸಕ್ರಿಯ ನಾಗಲು ಜನರ ಪ್ರೀತಿ ಆಶೀರ್ವಾದ ಎಷ್ಟು ಮುಖ್ಯವೋ ಶ್ರೀಗಳ ಆಶೀರ್ವಾದ ಸಹ ಅಷ್ಟೇ ಮುಖ್ಯ ಸಿದ್ದಗಂಗಾ ಶ್ರೀಗಳ ನಿಸ್ವಾರ್ಥ ಸೇವೆ ಸಹ ನಮಗೆ ಮಾದರಿಯಾಗಿದ್ದು ಅದರಂತೆ ರಾಜ್ಯದ ಬಹುತೇಕ ಮಂದಿರ ಹಾಗೂ ಪುಣ್ಯಕ್ಷೇತ್ರ ಗಳಿಗೆ ಭೇಟಿ ನೀಡಿರುವುದಾಗಿ ತಿಳಿಸಿದರು.
ಇನ್ನು ಇದೇ ತಿಂಗಳ 25 ರಂದು ತಮ್ಮ ಸಾರ್ವಜಕ್ಕ ಬದುಕಿನ ತೀರ್ಮಾನವನ್ನು ಹಾಗೂ ಹೊಸ ಪಕ್ಷ ರಚನೆಗೆ ಸಂಬಂಧಿಸಿದಂತೆ ಡಿಸೆಂಬರ್ 25ರಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸಂಪೂರ್ಣ ಮಾಹಿತಿಯನ್ನು ನೀಡಲಾಗುವುದು ಎಂದಿದ್ದಾರೆ.
ಇನ್ನು ಜನಾರ್ದನ್ ರೆಡ್ಡಿ ರವರ ನಡೆ ಬಿಜೆಪಿ ಪಾಳಯಕ್ಕೂ ನುಂಗಲಾರದ ಬಿಸಿ ತುಪ್ಪವಾಗಿದೆ ಹಾಗಾಗಿ ಮುಂದೆ ಬಿಜೆಪಿಯ ಹಿರಿಯ ಮುಖಂಡರು ಜನಾರ್ಧನ್ ರೆಡ್ಡಿ ರವರನ್ನು ಯಾವ ರೀತಿ ಮನವೊಲಿಸಲಿದ್ದಾರೆ ಎನ್ನುವುದು ಸಹ ನಿಗೂಢವಾಗಿಯೇ ಉಳಿದಿದೆ.