29 ವರ್ಷದ ನಂತರ ಕಪ್ಪು ಕೋಟ್ ಧರಿಸಿ ಕೋರ್ಟ್ ಕಲಾಪಕ್ಕೆ ಹಾಜರಾದ ಮಾಜಿ ಸಂಸದರು.

29 ವರ್ಷದ ನಂತರ ಕಪ್ಪು ಕೋಟ್ ಧರಿಸಿ ಕೋರ್ಟ್ ಕಲಾಪಕ್ಕೆ ಹಾಜರಾದ ಮಾಜಿ ಸಂಸದರು.

ಕುಣಿಗಲ್_ತುಮಕೂರಿನ ಮಾಜಿ ಸಂಸದರು ಹಾಗೂ ಕಾಂಗ್ರೆಸ್ ಮುಖಂಡರಾದ ಎಸ್ಪಿ ಮುದ್ದಹನುಮೇಗೌಡ ರು ತಮ್ಮ ರಾಜಕೀಯ ಜೀವನದ 29 ವರ್ಷಗಳ ಬಳಿಕ ಮತ್ತೆ ಕಪ್ಪು ಕೋಟು ಧರಿಸಿ ಕೋರ್ಟ್ ಕಲಾಪಕ್ಕೆ ಹಾಜರಾಗುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

 

 

ಕುಣಿಗಲ್ ತಾಲೂಕು ಹುತ್ರಿದುರ್ಗ ಹೋಬಳಿ ಸಿವಿಲ್ ಕೇಸ್ ಗೆ ಸಂಬಂಧಿಸಿದಂತೆ ತಮ್ಮ ಕಕ್ಷಿದಾರರ ಪರವಾಗಿ ವಕಾಲತ್ತು ಮಂಡಿಸಲು ಮುದ್ದಹನುಮೇಗೌಡ ರು ಹಾಜರಾಗಿದ್ದರು.

 

 

ಇನ್ನು 1986 ರಲ್ಲಿ ರಾಜಕೀಯ ಜೀವನಕ್ಕೆ ಎಂಟ್ರಿಕೊಟ್ಟ ಮುದ್ದಹನುಮೇಗೌಡ ಮೊದಲಬಾರಿಗೆ 1992 ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು.

 

 

ಕುಣಿಗಲ್ ,ಬೆಂಗಳೂರು ಸೇರಿದಂತೆ ಹಲವು ಕಡೆ ಉತ್ತಮ ವಕೀಲರಾಗಿ ಸೇವೆ ಸಲ್ಲಿಸಿ ನಂತರ ನ್ಯಾಯಾಧೀಶರಾಗಿಯು ಸಹ ಸೇವೆಸಲ್ಲಿಸಿದರು ನಂತರ ಸ್ವಯಂ ನಿವೃತ್ತಿ ಪಡೆದು ರಾಜಕೀಯ ಜೀವನಕ್ಕೆ ಎಂಟ್ರಿ ಕೊಟ್ಟಿದ್ದರು.

 

 

 

ಇನ್ನು ಕೋರ್ಟ್ ಕಲಾಪಕ್ಕೆ ಮಾಜಿ ಸಂಸದ ಮುದ್ದಹನುಮೇಗೌಡ ಭಾಗವಹಿಸುವ ವಿಚಾರ ಮೊದಲೇ ವಕೀಲರಿಗೆ ತಿಳಿದ ಹಿನ್ನೆಲೆಯಲ್ಲಿ ಕೋರ್ಟ್ ಆವರಣ ಕಿಕ್ಕಿರಿದು ತುಂಬಿತ್ತು .

 

 

ನಂತರ ಅವರು ಕೋರ್ಟ್ ಕಲಾಪದಲ್ಲಿ ಭಾಗವಹಿಸಿ ತಮ್ಮ ಕಕ್ಷಿದಾರರ ಪರವಾಗಿ ವಾದ ಮಂಡಿಸಿದರು ಇನ್ನು ತಮ್ಮ ವಾದದಲ್ಲಿ ಯಾವುದೇ ವ್ಯತ್ಯಾಸ ಕಂಡು ಬರದ ರೀತಿಯಲ್ಲಿ ತಮ್ಮ ವಾದವನ್ನು ಮಂಡಿಸುವ ಮೂಲಕ ನ್ಯಾಯಾಧೀಶರ ಮೆಚ್ಚುಗೆಯನ್ನು ಸಹ ಎಸ್ಪಿ ಮುದ್ದಹನುಮೇಗೌಡ ರು ಪಡೆದಿದ್ದಾರೆ.

 

ಅವರು ರಾಜಕೀಯ ಜೀವನಕ್ಕೆ ಪಾದಾರ್ಪಣೆ ಮಾಡಿದ ದಿನದಿಂದಲೂ ಸಹ ಪಟ್ಟಣದ ಬಸ್ಟ್ಯಾಂಡ್ ಬಳಿ ಇದ್ದ ತಮ್ಮ ಕಚೇರಿಯನ್ನು ಯಾವುದೇ ಕಾರಣಕ್ಕೂ ಮುಚ್ಚಿರಲಿಲ್ಲ ಎಂಬುದು ಗಮನಾರ್ಹ ವಿಷಯ.

 

ಅದೇನೆ ಇರಲಿ ಮಾಜಿ ಸಂಸದರು 29 ವರ್ಷಗಳ ಬಳಿಕ ಕೋರ್ಟ್ ಕಲಾಪಕ್ಕೆ ಹಾಜರಾಗುವ ಮೂಲಕ ತಮ್ಮಲ್ಲಿ ಇನ್ನೂ ಸಹ ರೈತರು ಹಾಗೂ ಬಡವರ ಪಾಲಿಗೆ ನ್ಯಾಯ ದೊರಕಿಸಿಕೊಡಬೇಕು ಎನ್ನುವ ಅವರ ಆಶಯಕ್ಕೆ ಎಲ್ಲರೂ ತಲೆಬಾಗಿದ್ದಾರೆ.

 

 

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಸಹಜವಾಗಿಯೇ 29 ವರ್ಷಗಳ ಬಳಿಕ ಕೋರ್ಟ್ ಕಲಾಪಕ್ಕೆ ಹಾಜರಾಗಿದ್ದು ನನಗೂ ಸಹ ಖುಷಿ ತಂದಿದೆ ಈ ಮೂಲಕ ಬಡವರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಮುಂದಿರುತ್ತೆನೆ ಎಂದು ತಿಳಿಸಿದ್ದಾರೆ.

 

ವರದಿ_ ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!