ಜೋಳಿಗೆ ಹಿಡಿದು ಮತ ಭಿಕ್ಷೆ ಶುರು ಮಾಡಿದ ಮಾಜಿ ಸಚಿವ ಸೊಗಡು ಶಿವಣ್ಣ.
ತುಮಕೂರು – 2023 ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ನಿಟ್ಟಿನಲ್ಲಿ ತುಮಕೂರು ನಗರ ವಿಧಾನಸಭಾ ಚುನಾವಣೆಯ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಸಚಿವ ಸೊಗಡು ಶಿವಣ್ಣ ಅಖಾಡಕ್ಕೆ ಇಳಿಯಲು ರೆಡಿಯಾಗಿದ್ದು
ಇಂದು ತುಮಕೂರು ನಗರದ ಎನ್ ಆರ್ ಕಾಲೋನಿಯ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಜೋಳಿಗೆ ಹಿಡಿದು ತಮಟೆ ಸದ್ದಿನೊಂದಿಗೆ ಮನೆ ಮನೆಗೆ ತೆರಳಿ ಮತ ಹಾಗೂ ಹಣಕ್ಕಾಗಿ ಜೋಳಿಗೆ ಹಿಡಿದು ಮತ ಭಿಕ್ಷೆ ಶುರುಮಾಡಿದ್ದಾರೆ.
ನಾಲ್ಕು ಬಾರಿ ಶಾಸಕರಾಗಿ ತುಮಕೂರು ನಗರದಲ್ಲಿ ಆಯ್ಕೆಯಾಗಿದ್ದ ಸೊಗಡು ಶಿವಣ್ಣ ಇದು ತಮ್ಮ ಕೊನೆಯ ಚುನಾವಣೆ ಹಾಗಾಗಿ ಪಕ್ಷದಿಂದ ತಮಗೆ ಟಿಕೆಟ್ ದೊರೆಯುವ ಸಂಪೂರ್ಣ ವಿಶ್ವಾಸದೊಂದಿಗೆ ಇಂದು ಅಧಿಕೃತವಾಗಿ ಜೋಳಿಗೆ ಹಿಡಿದು ಮತ ಭಿಕ್ಷೆ ಶುರುಮಾಡಿದ್ದು ಮನೆಮನೆಗೆ ತೆರಳಿದ ಮಾಜಿ ಸಚಿವರಿಗೆ ಮಹಿಳೆಯರು ಹಿರಿಯರು ಸೇರಿದಂತೆ ಮತದಾರರು ಮಾಜಿ ಸಚಿವರ ಜೋಡಿಗೆ ಹಣ ನೀಡುವ ಮೂಲಕ ಸೊಗಡು ಶಿವಣ್ಣರ ಮತ ಭಿಕ್ಷೆಗೆ ಸಾತ್ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ರವರು ಎನ್ ಆರ್ ಕಾಲೋನಿ ಸೇರಿದಂತೆ ವಿವಿಧ ಬಡಾವಣೆಗಳಿಗೆ ತೆರಳಿ ಮತದಾರರನ್ನು ಭೇಟಿಯಾಗುವ ಮೂಲಕ ಜೋಳಿಗೆ ಮೂಲಕ ಮತ ಕೇಳಲು ಮುಂದಾಗಿದ್ದಾರೆ.
ತುಮಕೂರು ನಗರದ ಅತ್ಯಂತ ಉತ್ತಮ ಪ್ರಶಂಸೆ ವ್ಯಕ್ತವಾಗಿದ್ದು ಮಾಜಿ ಸಚಿವ ಸೊಗಡು ಶಿವಣ್ಣ ರವರ ಮತ ಭಿಕ್ಷೆ ಕಾರ್ಯಕ್ರಮಕ್ಕೆ ತುಮಕೂರು ನಗರದ ಹಲವು ಮುಖಂಡರು ಹಾಗೂ ಮತದಾರರು ಶಿವಣ್ಣ ರವರಿಗೆ ಜೋಳಿಗೆಗೆ ಹಣ ನೀಡುವ ಮೂಲಕ ಸೊಗಡು ಶಿವಣ್ಣ ರವರ ಬೆಂಬಲಕ್ಕೆ ನಿಂತಿದ್ದಾರೆ.
ಮತ್ತೊಂದೆಡೆ ಹಾಲಿ ಶಾಸಕ ಜ್ಯೋತಿ ಗಣೇಶ್ ಸಹ ಈ ಬಾರಿಯ ಚುನಾವಣೆಗೆ ಸ್ಪರ್ಧಿಸುವ ನಿಟ್ಟಿನಲ್ಲಿ ಟಿಕೆಟ್ ಗಾಗಿ ಬಾರಿ ಪೈಪೋಟಿ ನಡೆಸುತ್ತಿರುವ ಜೊತೆಯಲ್ಲಿ ಸೊಗಡು ಶಿವಣ್ಣ ರವರು ಸಹ ತಮ್ಮ ಕೊನೆ ಚುನಾವಣೆ ಎಂದು ಬಿಜೆಪಿಯ ಹಿರಿಯ ನಾಯಕರ ಬಳಿ ಶತಾಯಗತಯ ಟಿಕೆಟ್ ಪಡೆಯಬೇಕು ಎಂದು ಸೊಗಡು ಶಿವಣ್ಣ ಸಹ ಭಾರಿ ಪೈಪೋಟಿ ನಡೆಸುತ್ತಿರುವುದರ ಜೊತೆಗೆ ಮತ ಜೋಳಿಗೆ ಹಿಡಿದು ಮತ ಭಿಕ್ಷೆಗೆ ಹೊರಟಿರುವ ಶಿವಣ್ಣರವರ ನಡೆಯಿಂದ ಹಾಲಿ ಶಾಸಕರಿಗೆ ಕೊಂಚ ಹಿನ್ನಡೆ ಆಗಿದೆ ಎಂದರೆ ತಪ್ಪಾಗಲಾರದು.
ವರದಿ ಮಾರುತಿ ಪ್ರಸಾದ್ ತುಮಕೂರು