ಮಾಜಿ ಸಚಿವ ಸೊಗಡು ಶಿವಣ್ಣ ಸರ್ವ ಜನಾಂಗದ ನಾಯಕ -ಶಾಸಕ ಡಿಸಿ ಗೌರಿಶಂಕರ್

ಮಾಜಿ ಸಚಿವ ಸೊಗಡು ಶಿವಣ್ಣ ಸರ್ವ ಜನಾಂಗದ ನಾಯಕ -ಶಾಸಕ ಡಿಸಿ ಗೌರಿಶಂಕರ್ 

 

ತುಮಕೂರು – ಮಾಜಿ ಸಚಿವ ಸೊಗಡು ಶಿವಣ್ಣ ರವರು ತುಮಕೂರು ಜಿಲ್ಲೆಯ ಸರ್ವ ಜನಾಂಗದ ನಾಯಕ ಇನ್ನು ಅವರು ತುಮಕೂರು ಜಿಲ್ಲೆಯಲ್ಲಿ ಲಿಂಗಾಯತ ಸಮುದಾಯದ ಪ್ರಭಾವಿ ಮುಖಂಡರು ಅಂತಹ ನಾಯಕರು ಜೆಡಿಎಸ್ ಪಕ್ಷಕ್ಕೆ ಬಂದರೆ ಜಿಲ್ಲೆಯಲ್ಲಿ  ಜೆಡಿಎಸ್ ಪಕ್ಷಕ್ಕೆ ಹೆಚ್ಚಿನ ಬಲ ಸಿಗಲಿದೆ ಎಂದು ತುಮಕೂರು ಗ್ರಾಮಾಂತರ ಶಾಸಕ ಡಿಸಿ ಗೌರಿಶಂಕರ್ ತಿಳಿಸಿದ್ದಾರೆ.

 

 

 

 

ಇಂದು ಅವರು ತುಮಕೂರು ಗ್ರಾಮಾಂತರ ವಿಭಾಗದ ಅರಿಯೂರು ಹಾಲೂನೂರು ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿದರು ಇದೇ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಇನ್ನು ಮಾಜಿ ಸಚಿವ ಸೊಗಡು ಶಿವಣ್ಣ ರವರು ಟಿಕೆಟ್ ಕೈ ತಪ್ಪಲು ಮಾಜಿ ಶಾಸಕ ಸುರೇಶ್ ಗೌಡ ರವರು ನೇರ ಕಾರಣ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರೇ ತಿಳಿಸಿದಂತೆ ಅವರ ಏಳಿಗೆಯನ್ನ ಮಾಜಿ ಶಾಸಕರು ಸಹಿಸದೇ ಇರುವುದು ದುರದೃಷ್ಟಕರ ಎಂದ ಅವರು .

 

ಇನ್ನು ತುಮಕೂರು ಗ್ರಾಮಾಂತರ ಮಾಜಿ ಶಾಸಕರು ತುಮಕೂರು ಜಿಲ್ಲೆಯಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ಹಾಗೂ ಸಚಿವ ಮಾಧುಸ್ವಾಮಿ ರವರನ್ನು ವಿರೋಧ ಕಟ್ಟಿಕೊಂಡ ಮಾಜಿ ಶಾಸಕ ಸುರೇಶ್ ಗೌಡ ರವರು ಲಿಂಗಾಯಿತ ಸಮುದಾಯದ ಮುಖಂಡರನ್ನು ವಿರೋಧ ಮಾಡುವ ಮೂಲಕ ತಾವು ಮಾತ್ರ ಸಚಿವರಾಗಬೇಕು ಎನ್ನುವ ಆಸೆಯನ್ನು ಹೊಂದಿದ್ದಾರೆ ಎಂದು ಆರೋಪಿಸಿದ ಶಾಸಕ ಡಿ.ಸಿ ಗೌರಿಶಂಕರ್ ಅವರು ಮಾಜಿ ಸಚಿವ ಸೊಗಡು ಶಿವಣ್ಣ ರವರು ಜಿಲ್ಲೆಯ ಉತ್ತಮ ರಾಜಕಾರಣಿ ಇನ್ನು ಜಿಲ್ಲೆಯಲ್ಲಿ ಅವರದ್ದೇ ಆದ ಒಂದು ದೊಡ್ಡ ಸಮೂಹವೇ ಇದೇ ಅಂತಹ ನಾಯಕ ಜೆಡಿಎಸ್ ಪಕ್ಷಕ್ಕೆ ಬಂದರೆ ನಮಗೂ ಸಹ ಜಿಲ್ಲೆಯಲ್ಲಿ ಹೆಚ್ಚಿನ ಬಲ ಸಿಗಲಿದೆ ಎಂದರು.

 

 

ಇನ್ನು ಮಾಜಿ ಸಚಿವ ಸೊಗಡು ಶಿವಣ್ಣ ರವರನ್ನು ಜೆಡಿಎಸ್ ಪಕ್ಷಕ್ಕೆ ಬರಲು ನಾವು ಸಹ ಮನವಿ ಮನವಿ ಮಾಡಿದ್ದೆವು, ಅದರಂತೆ ಅವರು ಸಹ ನಮ್ಮ ಜೆಡಿಎಸ್ ಪಕ್ಷದ ನಮ್ಮ ಮುಖಂಡರಾದ ಎಚ್ ಡಿ ಕುಮಾರಸ್ವಾಮಿ ರವರನ್ನ ಭೇಟಿ ಮಾಡಿ ಚರ್ಚೆ ನಡೆಸಿದ್ದು ಮುಂದಿನ ತೀರ್ಮಾನವನ್ನು ಶಿವಣ್ಣ ರವರು ಶೀಘ್ರದಲ್ಲೇ ತಿಳಿಸುತ್ತೇನೆ ಎಂದಿದ್ದಾರೆ  ಅದರೊಂದಿಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರವರು ಸಹ ಸೊಗಡು ಶಿವಣ್ಣ ರವರ ನಿವಾಸಕ್ಕೆ ಭೇಟಿ ನೀಡಲಿದ್ದರೂ ಆದರೆ ಕಾರಣಾಂತರದಿಂದ ಅನ್ಯ ಕಾರ್ಯದ ಕಾರ್ಯಕ್ರಮದ ನಿಮಿತ್ತ ಮಂಗಳೂರಿಗೆ ಹೋಗಿದ್ದಾರೆ ಎಂದರು.

 

 

ಚುನಾವಣಾ ಪ್ರಚಾರಕ್ಕೆ ಉತ್ತಮ ಪ್ರಶಂಸೆ

 

ಇನ್ನು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಉತ್ತಮ ಸ್ಪಂದನೆ ಸಿಗುತ್ತಿದೆ ಇನ್ನು ತಾವು ಗ್ರಾಮಾಂತರ ಕ್ಷೇತ್ರದಲ್ಲಿ ಯಾರ ವಿರುದ್ಧವು ಸುಳ್ಳು ಕೇಸ್ ಗಳನ್ನ ದಾಖಲಿಸಿಲ್ಲ, ಹೆಂಡ ಕುಡಿಸಿಲ್ಲ ಅದರ ಬದಲಾಗಿ ಮನೆಯ ಮಗನಾಗಿ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿದ್ದೇನೆ ಎಂದ ಅವರು

 

 

 

ಇನ್ನು ಕೊರೋನಾ ಸಂದರ್ಭದಲ್ಲಿ ನಾವು ಹಾಗೂ ನಮ್ಮ ಕಾರ್ಯಕರ್ತರು ತುಮಕೂರು ಗ್ರಾಮಾಂತರ ಕ್ಷೇತ್ರದ 75 ಸಾವಿರಕ್ಕೂ ಹೆಚ್ಚು  ಮನೆಗಳಿಗೆ 1.5 ಲಕ್ಷ ಕಿಟ್ ನೀಡುವುದರೊಂದಿಗೆ ಆಸ್ಪತ್ರೆ ಸೌಲಭ್ಯ ಸೇರಿದಂತೆ ಹಲವು ಕೆಲಸಗಳನ್ನ ಮಾಡುವ ಮೂಲಕ ಜನರ ಸಂಕಷ್ಟಗಳಿಗೆ ನೆರವಾಗಿದ್ದೇವು ಅಂತಹ ಕಷ್ಟ ಕಾಲದಲ್ಲಿ ನಾವು ಕ್ಷೇತ್ರ ಬಿಟ್ಟು ಪಲಾಯನವಾಗಲಿಲ್ಲ ಅದರ ಬದಲು ಜನರ ಸಂಕಷ್ಟಗಳಲ್ಲಿ ಭಾಗಿಯಾಗಿ ಮನೆಮಗನಾಗಿ ನನ್ನ ಜವಾಬ್ದಾರಿಯನ್ನ ನಿಭಾಯಿಸಿದ ತೃಪ್ತಿ ನನಗಿದೆ ಹಾಗಾಗಿ ಕ್ಷೇತ್ರದ ಜನತೆ ಈ ಬಾರಿಯೂ ಸಹ ನನಗೆ ಆಶೀರ್ವದಿಸಲಿದ್ದಾರೆ ಎಂದು ತಿಳಿಸಿದ್ದಾರೆ.

 

 

 

 

ಇದೇ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಪಾಲನೆತ್ರಯ, ವಿಜಯಲಕ್ಷ್ಮಿ , ಹಲವು ಕಾರ್ಯಕರ್ತರು ಹಾಜರಿದ್ದರು

 

 

ವರದಿ  -ಮಾರುತಿ ಪ್ರಸಾದ್ ತುಮಕೂರು

 

Leave a Reply

Your email address will not be published. Required fields are marked *

You cannot copy content of this page

error: Content is protected !!