ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋನಿಯಾಗಾಂಧಿ ರವರ ಗುಲಾಮರಾಗಿದ್ದಾರೆ _ಬಿಜೆಪಿ ಮುಖಂಡ ಸಿ.ಟಿ ರವಿ.
ತುಮಕೂರು_ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಸೋನಿಯಾಗಾಂಧಿ ಅವರ ಗುಲಾಮರಾಗಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀಟಿ ರವಿ ಕಾಂಗ್ರೆಸ್ ಮುಖಂಡರ ವಿರುದ್ಧ ಹರಿಹಾಯ್ದಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಹಿಂದಿ ಭಾಷೆಯ ವಿಚಾರದಲ್ಲಿ ಬಿಜೆಪಿಗರು ಅಮಿತ್ ಶಾ ರವರ ಗುಲಾಮರಾಗಬೇಡಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಯಿಸಿದ ಸಿ. ಟಿ ರವಿರವರು ಕನ್ನಡಿಗರಿಗೆ ಕನ್ನಡವೇ ಸರ್ವಶ್ರೇಷ್ಠ ಹಾಗಾಗಿ ಇದರಲ್ಲಿ ಗುಲಾಮರಾಗುವ ಪ್ರಶ್ನೆ ಏನಿದೆ…? ಇನ್ನು ತಾವಿನ್ನು ಸೋನಿಯಾಗಾಂಧಿಯವರ ಗುಲಾಮರಾಗಿದ್ದರೀ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನೇರ ಟಾಂಗ್ ಕೊಟ್ಟಿದ್ದಾರೆ.
ಇನ್ನು ಅಮಿತ್ ಶಾ ರವರು ನಮ್ಮ ನಾಯಕರು ನಾವು ಪಕ್ಷದ ಕಾರ್ಯಕರ್ತರು ಹಾಗಾಗಿ ತಾವಿನ್ನೂ ಸೋನಿಯಾಗಾಂಧಿಯವರ ಗುಲಾಮರಾಗಿದ್ದೀರಿ ಗುಲಾಮರಂತೆ ವರ್ತಿಸುತ್ತಿದ್ದೀರಿ.
ಪ್ರಾದೇಶಿಕ ಭಾಷೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಬಗ್ಗೆ ನೂತನ ಶಿಕ್ಷಣ ನೀತಿಯಲ್ಲಿ ಈಗಾಗಲೇ ಪ್ರಸ್ತಾಪಿಸಿದ್ದು ಅಪರಾಧವ….?? ಲೋಪವಾ…?? ಹಾಗಾಗಿ ಇದರಲ್ಲಿ ಗುಲಾಮರಾಗುವ ಅಂಶವೇನಿದೆ.ಉನ್ನತ ಶಿಕ್ಷಣವನ್ನು ಸಹ ಪ್ರಾದೇಶಿಕ ಭಾಷೆಯಲ್ಲಿ ಕೊಡಬೇಕು ಎನ್ನುವ ಅಂಶವಿದೆ.
ಹಾಗಾಗಿ ಸಿದ್ದರಾಮಯ್ಯನವರು ರಾಷ್ಟ್ರೀಯ ಭಾಷೆಯನ್ನು ಒಪ್ಪಿಕೊಳ್ಳುವರೋ ಅಥವಾ ದೇಶದ ಮೇಲೆ ಅತಿಕ್ರಮಣ ಮಾಡಿ ಹೇರಿರುವ ಗುಲಾಮಗಿರಿಯ ಪರಭಾಷೆಯನ್ನು ಒಪ್ಪಿಕೊಳ್ಳುವರೋ ಎಂದು ಸಿದ್ದರಾಮಯ್ಯನವರನ್ನು ಪ್ರಶ್ನಿಸಿದ್ದಾರೆ.
ಅಮಿತ್ ಶಾ ರವರು ಮಾತೃ ಭಾಷೆಗೆ ಮನ್ನಣೆ ನೀಡಿ, ಸಂಪರ್ಕ ಭಾಷೆಯಾಗಿ ಇಂಗ್ಲಿಷ್ ಬದಲು ಹಿಂದಿಯನ್ನು ಬಳಸಲು ಅಮಿತ್ ಶಾ ರವರು ತಿಳಿಸಿದ್ದಾರೆ.
ಹಿಂದೆ ರಾಷ್ಟ್ರೀಯ ಭಾಷೆ ಅದನ್ನು ಕಡೆಗಣಿಸಿ ಎಂದು ಅವರು ಹೇಳಿಲ್ಲ ಇನ್ನೂ ಕನ್ನಡವನ್ನು ಬಿಟ್ಟು ಹಿಂದಿಯಲ್ಲಿ ಮಾತನಾಡಿ ಎಂದು ಅಮಿತ್ ಶಾ ರವರು ಹೇಳಿಲ್ಲ ಇನ್ನೂ ಒಂದು ವೇಳೆ ಅವರು ಅಂತಹ ಹೇಳಿಕೆಯನ್ನು ನೀಡಿದ್ದಾರೆ ನಾವು ಸಹ ಬಗ್ಗೆ ಧ್ವನಿ ಎತ್ತುತ್ತಿದ್ದೆವು.
ಹಾಗಾಗಿ ಸಿದ್ದರಾಮಯ್ಯನವರು ಇಂಗ್ಲೀಷ್ ಭಾಷೆಯ ವ್ಯಾಮೋಹವಿದ್ದು ತಾನು ಇಂಗ್ಲೀಷ್ ಭಾಷೆಯ ಗುಲಾಮ ಎಂದು ಒಪ್ಪಿಕೊಳ್ಳಲಿ ಅದನ್ನು ಬಿಟ್ಟು ಅಮಿತ್ ಶಾಅವರ ಹೇಳಿಕೆಯನ್ನು ತಿರುಚುವ ಕೆಲಸ ಮಾಡಬಾರದು. ಅದಕ್ಕೆ ಅವರು ಒಪ್ಪಿಕೊಳ್ಳಲಿ ತಾನು ಇಂಗ್ಲಿಷ್ನ ಗುಲಾಮ ಹಾಗೂ ಸೋನಿಯಾ ಗಾಂಧಿ ರವರ ಗುಲಾಮ ಎಂದು ಒಪ್ಪಿಕೊಳ್ಳಲಿ ಎಂದು ಸಿದ್ದರಾಮಯ್ಯನವರ ವಿರುದ್ಧ ಹರಿಹಾಯ್ದಿದ್ದಾರೆ.
ವರದಿ_ ಮಾರುತಿ ಪ್ರಸಾದ್ ತುಮಕೂರು