ಪರೀಕ್ಷೆಯ ಬಯದಲ್ಲಿ ಇದ್ದ ವಿದ್ಯಾರ್ಥಿನಿಗೆ ಧೈರ್ಯ ತುಂಬಿದ ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ.
ತುಮಕೂರು_ ಪಾವಗಡದ ಪಳವಲ್ಲಿ ಬಸ್ ದುರಂತದಲ್ಲಿ ಗಾಯಗೊಂಡ ವಿದ್ಯಾರ್ಥಿನಿಯೊಬ್ಬಳು ಮುಂಬರುವ ಪರೀಕ್ಷೆ ಹೇಗೆ ಬರೆಯುವುದು ಎಂದು ಪೋತಾಗಾನಹಳ್ಳಿಯ ವಿದ್ಯಾರ್ಥಿನಿಯಾದ ಶ್ರುತಿ ಎನ್ನುವ ಯುವತಿಯೊಬ್ಬಳು ಪಾವಗಡದ ಬಾಪೂಜಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು ನೆನ್ನೆ ನಡೆದ ಬಸ್ ದುರಂತದಲ್ಲಿ ಬೆನ್ನುಮೂಳೆಗೆ ತೀವ್ರತರ ಪೆಟ್ಟಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾಳೆ.
ಇದೇ ಸಂದರ್ಭದಲ್ಲಿ ಗಾಯಾಳುಗಳನ್ನು ಭೇಟಿ ಮಾಡುವ ಸಂಬಂಧ ಇಂದು ತುಮಕೂರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಬಸ್ ದುರಂತದಲ್ಲಿ ಗಾಯಗೊಂಡಿರುವ ವಿದ್ಯಾರ್ಥಿನಿ ಶೃತಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ರವರಿಗೆ ಮುಂಬರುವ ಪರೀಕ್ಷೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು ವಿದ್ಯಾರ್ಥಿನಿ ಪರೀಕ್ಷೆ ಹೇಗೆ ಬರೆಯುವುದು ಹೇಗೆ ಎಂದು ಮನವಿ ಮಾಡಿದ್ದಾಳೆ ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಮುಂಬರುವ ಪರೀಕ್ಷೆಯ ಬಗ್ಗೆ ಆತಂಕ ಬೇಡ ನಿಮಗೆ ಪರ್ಯಾಯ ಪರೀಕ್ಷೆ ಮಾಡುವ ಸಂಬಂಧ ಸರ್ಕಾರಕ್ಕೆ ಮನವರಿಕೆ ಮಾಡಲಾಗುವುದು ಎಂದು ಧೈರ್ಯ ತುಂಬಿದ್ದಾರೆ.
ಇದೇ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ವಿದ್ಯಾರ್ಥಿನಿ ಶೃತಿ ತಾನು ಪ್ರತಿನಿತ್ಯ ಪೂತಗಾನಹಳ್ಳಿಯಿಂದ ಪಾವಗಡ ಪಟ್ಟಣದ ಬಾಪೂಜಿ ಕಾಲೇಜಿಗೆ ವಿದ್ಯಾಭ್ಯಾಸಕ್ಕೆಂದು ಆಗಮಿಸುತ್ತಿದೆ ಇನ್ನು ತಾವು ಪ್ರಯಾಣಿಸುತ್ತಿದ್ದ ಬಸ್ನಲ್ಲಿ ಮಿತಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ತುಂಬಿಕೊಂಡು ವೇಗವಾಗಿ ಬಸ್ ಚಲಾಯಿಸಿದ ಅಲ್ಲದೆ ಇನ್ನು ಬಸ್ ಚಲಾಯಿಸುವ ಡ್ರೈವರ್ ಕಂಠಪೂರ್ತಿಯಾಗಿ ಕುಡಿದಿದ್ದೆ ಬಸ್ ಅಪಘಾತಕ್ಕೀಡಾದಾಗ ಕಾರಣವಾಗಿದೆ ಈಗ ತಾನು ಪರೀಕ್ಷೆ ಬರೆಯಲು ಸಾಧ್ಯವಾಗದ ಅತಂತ್ರ ಸ್ಥಿತಿಯಲ್ಲಿ ಇದ್ದೇನೆ ಎಂದು ವಿದ್ಯಾರ್ಥಿನಿ ಶೃತಿ ಆತಂಕ ವ್ಯಕ್ತಪಡಿಸಿದ್ದಾರೆ.
ವರದಿ _ಮಾರುತಿ ಪ್ರಸಾದ್ ತುಮಕೂರು