ನಾಮಫಲಕ ಕಲಾವಿದರು ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಸಂಘಟಿತರಾಗಲು ಕರ್ನಾಟಕ ರಾಜ್ಯ ನಾಮಫಲಕ ಕಲಾವಿದರ ಸಂಘದ ರಾಜ್ಯಾಧ್ಯಕ್ಷ ಗುರುರಾಜ್ ಕರೆ ನೀಡಿದರು
ಅವರು ತುಮಕೂರು ನಗರದ ಹೊರವಲಯದ ರಂಗಾಪುರ ಚೆಕ್ ಪೋಸ್ಟ್ ಬಳಿಯ ಶ್ರೀ ವಿನಾಯಕ ಆವರಣದಲ್ಲಿ ನಾಮಫಲಕ ಕಲಾವಿದರಿಗೆ ದಿನಿಸಿ ಕಿಟ್ ಗಳನ್ನು ವಿತರಿಸಿ ಮಾತನಾಡಿದರು.
ರಾಜ ಮಹಾರಾಜರ ಕಾಲದಿಂದಲೂ ಈ ನಾಡಿಗೆ ನುಡಿಗೆ ನಾಮಫಲಕ ಕುಂಚ ಕಲಾವಿದರು ಸೇವೆ ಸಲ್ಲಿಸುತ್ತಲೇ ಬಂದಿದ್ದಾರೆ ಆದರೆ ಆಳುವ ಸರ್ಕಾರಗಳು ನಾಮಫಲಕ ಕಲಾವಿದರನ್ನು ಕಡೆಗಣಿಸುತ್ತಲೇ ಬಂದಿವೆ. ಜೀವನದ ಅಭದ್ರತೆಯಿಂದ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿರುವ ನಾಮಪಲಕ ಕಲಾವಿದರ ಬದುಕಿಗೆ ಭದ್ರತೆ ಎಂಬುದೇ ಇಲ್ಲದಂತಾಗಿದೆ. ಸರ್ಕಾರ ಕಟ್ಟಡ ಕಾರ್ಮಿಕರು ಅಥವಾ ಅಸಂಘಟಿತ ವಲಯದ ಕಾರ್ಮಿಕರಿಗೆ ನೀಡುತ್ತಿರುವ ಎಲ್ಲ ಸೌಲಭ್ಯಗಳನ್ನು ನಾಮಫಲಕ ಕಲಾವಿದರಿಗೂ ಗುರುತಿನ ಪತ್ರ ನೀಡಿ ಕೆಟಗರಿ ಕಲ್ಪಿಸಬೇಕಿದೆ. ರಾಜ್ಯಾದ್ಯಂತ ಇರುವ ಸುಮಾರು 7ಲಕ್ಷ ನಾಮಪಲಕಗಳಿಗೆ ಕಲಾವಿದರು ಒಂದೇ ಸಂಘಟನೆಯಡಿ ಗುರುತಿಸಿಕೊಂಡಾಗ ಮಾತ್ರ ಸರ್ಕಾರ ನಮ್ಮನ್ನು ಗುರುತಿಸಲು ಸಾಧ್ಯ. ರಾಜ್ಯದಲ್ಲಿ ಈಗಾಗಲೇ ಹಲವು ಭಾಗಗಳಲ್ಲಿ ತಮ್ಮ ಸಂಘಟನೆಯ ಶಾಖೆಗಳಿದ್ದು ರಾಜ್ಯಾದ್ಯಂತ ಹಲವು ಭಾಗಗಳಿಂದ ಶೀಘ್ರದಲ್ಲೇ ಶಾಖೆಗಳನ್ನು ರಚಿಸಲಾಗುವುದು. ಈ ವಿಚಾರದಲ್ಲಿ ರಾಜ್ಯಾದ್ಯಂತ ಸಕ್ರಿಯವಾಗಿರುವ ಎಲ್ಲಾ ನಾಮಫಲಕ ಕಲಾವಿದರಿಗೂ ಮುಕ್ತ ಆಹ್ವಾನವಿದೆ ಕಲಾವಿದರ ಕ್ಷೇಮ ಮತ್ತು ಅಭಿವೃದ್ಧಿಗಾಗಿ ಕಲಾವಿದರೇ ಸಂಘಟಿತರಾದಾಗ ಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿಯ ಖಜಾಂಚಿ ಮಂಜುನಾಥ್ ತುಮಕೂರಿನ ಹಿರಿಯ ಕಲಾವಿದರಾದ ನಾಗರಾಜ್. ಜೇಮ್ಸ್. ಸೂರ್ಯ . ಮಾನಂಗಿ.ಕೃಷ್ಣ ಶಿವರಾಜು ವಸಂತ್. ಚಂದ್ರು ರಾಜೇಶ್ ಮಂಜುನಾಥ್ ಮತ್ತಿತರರು ಹಾಜರಿದ್ದರು