ತುಮಕೂರಿನ ರಿಂಗ್ ರಸ್ತೆಯಲ್ಲಿ ಇರುವ ಇಂಡಿಯನ್ ವರ್ಕ್ಸ್ ನ ಸೈಯದ್ ಬುರ್ಹಾನ್ ರವರ ನೇತೃತ್ವದಲ್ಲಿ ಕರೋನ ಸಂಕಷ್ಟದಲ್ಲಿ ಸಾರ್ವಜನಿಕರು ದಿನನಿತ್ಯ ಊಟಕ್ಕೆ ಪರಿತಪಿಸುತ್ತಿದ್ದರು ಇದನ್ನು ಗಮನಿಸಿದ ಅಲ್ತಾಫ್ ಅವರ ನೇತೃತ್ವದ ತಂಡ ಪ್ರತಿದಿನ ಯಾರ ಸಹಾಯವೂ ಇಲ್ಲದೆ ಕೇವಲ ಯುವಕರು ಸೇರಿಕೊಂಡು ಪ್ರತಿದಿನ ಉಚಿತ ಊಟವನ್ನು ತಯಾರಿಸಿ ಸಂಕಷ್ಟದಲ್ಲಿರುವ ಸಾರ್ವಜನಿಕರ ಇರುವ ಸ್ಥಳಕ್ಕೆ ತೆರಳಿ ಉಚಿತವಾಗಿ ಊಟವನ್ನು ನೀಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಕರೋನ ಹೆಚ್ಚಿದ್ದ ಸಮಯದಲ್ಲಿ ಪ್ರತಿದಿನ ನಾನೂರಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಊಟವನ್ನು ವಿತರಿಸುತ್ತಿದ್ದಾರೆ .
ಆಸ್ಪತ್ರೆಯಲ್ಲಿರುವ ರೋಗಿಗಳು ರೋಗಿಗಳ ಸಂಬಂಧಿಕರು ಸೇರಿದಂತೆ ತುಮಕೂರು ನಗರದಲ್ಲಿರುವ ಹಲವು ಆಸ್ಪತ್ರೆಗಳು , ಅಲೆಮಾರಿ ಕುಟುಂಬಗಳು, ಬಸ್ಟಾಂಡ್ ಸುತ್ತಮುತ್ತ ಇರುವ ಸಾರ್ವಜನಿಕರ ಬಳಿ ತೆರಳಿ ಪ್ರತಿನಿತ್ಯ ಊಟವನ್ನು ನೀಡುತ್ತಿರುವುದಾಗಿ ಇಂಡಿಯನ್ ವುಡ್ವರ್ಕ್ ನ ಸೈಯದ್ ಬುರ್ಹಾನ್ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಖುದ್ದೂಸ್ ಅಹಮದ್ ರವರು ಇಂಥ ಸಂಕಷ್ಟ ಕಾಲದಲ್ಲಿ ಅನ್ನದಾನಕ್ಕಿಂತ ಮತ್ತೊಂದು ಶ್ರೇಷ್ಠವಾದ ಕೆಲಸ ಯಾವುದು ಇಲ್ಲ ಹಸಿದ ಹೊಟ್ಟೆಗಳಿಗೆ ಅನ್ನ ನೀಡುವ ಸಲುವಾಗಿ ಯುವಕರು ಯಾವುದೇ ಫಲಾಪೇಕ್ಷೆ ಇಲ್ಲದೆ ಯಾರ ಸಹಾಯವೂ ಇಲ್ಲದೆ ಕೇವಲ ಯುವಕರು ಸೇರಿಕೊಂಡು ಇಂತಹ ಮಹತ್ತರ ಕೆಲಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಇದೇ ಸಂದರ್ಭದಲ್ಲಿ ಸೈಯದ್ ಆಸಿಫ್, ಸನಾವುಲ್ಲಾ, ಸೈಯದ್ ಉಮರ್ ಫಾರೂಕ್, ಅಲಿಂ ಪಾಷಾ, ಸಾಧಿಕ್, ಸುಹೇಲ್ ಫೈರೋಜ್, ಅಸ್ಲಾಂ ಸೇರಿದಂತೆ ಇತರರು ಹಾಜರಿದ್ದರು.