ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಹಾಗೂ ತುಮಕೂರು ಸ್ಥಳೀಯ ಸಂಸ್ಥೆ ವತಿಯಿಂದ ತುಮಕೂರು ನಗರದಲ್ಲಿರುವ ಅತ್ಯಂತ ಬಡತನದಲ್ಲಿರುವ ಕುಟುಂಬಗಳನ್ನು ಗುರುತಿಸಿ ಆಹಾರದ ಕಿಟ್ ವಿತರಿಸಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಹಿರೇಮಠದ ಶ್ರೀ ಶಿವಾನಂದ ಶಿವಾಚಾರ್ಯ ಶ್ರೀಗಳು ಮಾತನಾಡಿ ಕರೋನ ಮಾರಣಾಂತಿಕ ಕಾಯಿಲೆಯಾಗಿದ್ದು ಜಾಗತಿಕ ಯುದ್ಧದ ರೀತಿಯಲ್ಲಿ ಎಲ್ಲರನ್ನೂ ಬಲಿ ಪಡೆಯಲು ಸಜ್ಜಾಗಿದ್ದು ಎಲ್ಲರೂ ಜಾಗೃತರಾಗಬೇಕಿದೆ ಇಲ್ಲವಾದರೆ ಇದರ ಸೋಂಕು ಮತ್ತಷ್ಟು ವ್ಯಾಪಿಸುತ್ತದೆ ಹಾಗಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ ಹಾಗೂ ಸುರಕ್ಷತಾ ಕ್ರಮಗಳನ್ನು ಅನುಸರಿಸಲು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ತುಮಕೂರು ಮಹಾನಗರ ಪಾಲಿಕೆಯ ಮೇಯರ್ ಕೃಷ್ಣಪ್ಪರವರು ಮಾತನಾಡಿ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಬೇಕು ಸರ್ಕಾರಿ ಮಾರ್ಗಸೂಚಿಗಳನ್ನು ತಪ್ಪದೆ ಪಾಲಿಸಿ. ಕರೋನಾ ಸೋಂಕನ್ನು ಎಲ್ಲರೂ ಸೇರಿ ಹೋಗಲಾಡಿಸಬೇಕಿದೆ ಅದಕ್ಕಾಗಿ ತುಮಕೂರು ಮಹಾನಗರ ಪಾಲಿಕೆಯ ಸಿಬ್ಬಂದಿಗಳು ಅವಿರತ ಶ್ರಮ ಸಲ್ಲಿಸುತ್ತಿದ್ದಾರೆ ಅದಕ್ಕಾಗಿ ಎಲ್ಲರೂ ಸಹಕರಿಸಲು ಮನವಿ ಮಾಡಿದರು.
ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಬೆಳ್ಳಿ ಲೋಕೇಶ್ ಮಾತನಾಡಿ ವಿಶ್ವವೇ ಕರೋನ ಸೋಂಕಿನಿಂದ ತತ್ತರಿಸಿದೆ ಇಂತಹ ತುರ್ತು ಪರಿಸ್ಥಿತಿಯಲ್ಲಿ ಸಂಘ ಸಂಸ್ಥೆಗಳು ಬಡವರಿಗೆ ನೆರವಾಗಬೇಕಿದೆ, ಕರೋನ ಎಂದರೆ ಭಯಪಡದೆ ಎಚ್ಚರದಿಂದಿರಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಬಡಕುಟುಂಬಗಳಿಗೆ ದಿನಸಿ ಕಿಟ್ ಹಾಗೂ ತರಕಾರಿಗಳನ್ನು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಡಿವೈಎಸ್ಪಿ ಶ್ರೀನಿವಾಸ್, ಸ್ಕೌಟ್ಸ್ ಆಯುಕ್ತರಾದ ಬಿ ಆರ್ ವೇಣುಗೋಪಾಲಕೃಷ್ಣ, ಗೈಡ್ಸ್ ಆಯುಕ್ತರಾದ ಶ್ರೀಮತಿ ಸುಭಾಷಿಣಿ, ಮಹಾನಗರ ಪಾಲಿಕೆಯ ಸದಸ್ಯರಾದ ಗಿರಿಜಾ ದನಿಯಕುಮಾರ್, ಜಿಲ್ಲಾ ಸ್ಥಾನಿಕ ಆಯುಕ್ತರಾದ ಈಶ್ವರಯ್ಯ ಹಾಗೂ ಆಂಜಿನಪ್ಪ, ದಾನಿಗಳಾದ ಪೋಲೋ ರಾಮಣ್ಣ, ಸ್ಥಳೀಯ ಸಂಸ್ಥೆ ಉಪಾಧ್ಯಕ್ಷರಾದ ಕುಮಾರ್, ರಮೇಶ್, ಕಾರ್ಯದರ್ಶಿಗಳಾದ ಗುರುನಾಥ್ , ಖಜಾಂಚಿಗಳಾದ ನಂದಿನಿ ,ಸ್ಥಳೀಯ ಸಂಸ್ಥೆಯ ಪದಾಧಿಕಾರಿಗಳಾದ ರಮೇಶ್ ,ದಯಾನಂದ್,ಸುದೇಶ್ ,ಶ್ರೀನಿವಾಸ್ ಶೆಟ್ಟಿ ರಾಜ್ಯ ಸಂಸ್ಥೆಯ ಪ್ರತಿನಿಧಿಗಳಾದ ಶ್ರೀ ರವೀಶ್ ,ಮಹೇಶ್, ಗಣೇಶ್ ಗುಡಿ, ಹಾಗೂ ಕಚೇರಿಯ ಎಲ್ಲ ಸಿಬ್ಬಂದಿಗಳು ಉಪಸ್ಥಿತರಿದ್ದರು.