ದೇವನಹಳ್ಳಿ : ತಟ್ಟೆ ಹೊಡೆದರೆ, ಜ್ಯೋತಿ ಬೆಳಗಿದರೆ, ಚಪ್ಪಾಳೆ ಹೊಡೆದರೆ ಯಾವ ಪ್ರಾಣಾಪಾಯ ನಡೆದಿಲ್ಲಾ ಆದ್ರೆ ಲಸಿಕೆ ಪಡೆದರೆ ಮಕ್ಕಳಾಗಲ್ಲ, ಇದು ಮೋದಿ ಲಸಿಕೆ, ಗ್ಲೂಕೋಸ್ ನೀರು ಅಂತ ಸುಳ್ಳು ಹೇಳಿ ಜನರ ದಾರಿ ತಪ್ಪಿಸಿ 40 ಸಾವಿರ ಡೋಜ್ ಹಾಳಾಗಲು ಕಾರಣ ವಿರೋಧ ಪಕ್ಷದ ಕಾಂಗ್ರೆಸ್ ನವರು.
ನಾವು ಗಲ್ಲಿ ಕ್ರಿಕೆಟ್ ಆಡುತ್ತಿಲ್ಲಾ ದೇಶ ದೇಶಗಳ ನಡುವೆ ಆಡುತ್ತಿರುವ ಸೆಣೆಸಾಟ ಅದರಲ್ಲಿ ಕಪ್ ಭಾರತದ್ದೆ ಎನ್ನುವ ಮಟ್ಟಕ್ಕೆ ನಮ್ಮ ದೇಶ ಬಂದಿಗೆ,
ಕಾಂಗ್ರೆಸ್ ನವರನ್ನು ದೇಶದ ಜನ ಬ್ಲಾಕ್ ಲಿಸ್ಟ್ ಹಾಕಿದ್ದಾರೆ ಆದ್ದರಿಂದ ಅವರ ಆಟ ಏನೂ ನಡೆಯದಿರುವ ಕಾರಣ ಕೊರೋನಾ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದರು.
ದೇವನಹಳ್ಳಿ ಪಟ್ಟಣದ ಗಾರೆರವಿಕುಮಾರ್ ಲೇಔಟ್ ನಲ್ಲಿನ ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ಖಜಾಂಚಿ ಎ.ಕೆ.ಪಿ.ನಾಗೇಶ್ ರವರ ನಿವಾಸದಲ್ಲಿ ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ
ಪತ್ರಕರ್ತರಿಗೆ ದಿನಸಿ ಕಿಟ್ ವಿತರಣೆ ಹಾಗೂ ಸಸಿ ನೆಡುವ ಕಾರ್ಯಕ್ರಮ ನಂತರ ಮಾತನಾಡಿ ನಮ್ಮ ದೇಶದಲ್ಲಿ 130 ಕೋಟಿ ಜನಸಂಖ್ಯೆ ಇದೆ ಲಸಿಕ ಎಲ್ಲರಿಗೂ ಒಂದೇ ಹಂತದಲ್ಲಿ ನೀಡಲು ಸಾಧ್ಯವಿಲ್ಲಾ ಇದರಲ್ಲಿ ಮೂರು ಮುಂಚೂಣಿ ಪಕ್ಷಗಳು ರಾಜಕೀಯ ಮಾಡಬಾರದು ಎಲ್ಲರೂ ಒಗ್ಗೂಡಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೆಲಸವಾಗಬೇಕು.
ಕೊವಿಡ್ ಜೊತೆಯಲ್ಲಿ ಫಂಗಸ್ ಖಾಯಿಲೆ ಕೂಡ ಭಯ ಹುಟ್ಟಿಸಿದ್ದು ಇದು ಹಿಂದೆಯೂ ಇತ್ತು ವರ್ಷಕ್ಕೆ 100 ಜನರಲ್ಲಿ ಕಾಣಿಸಿಕೊಳ್ಳುತ್ತಿತ್ತು ಆದ್ರೆ ಸದ್ಯದ ಪರಿಸ್ಥಿತಿಯಲ್ಲಿ ತಿಂಗಳಿಗೆ ಸಾವಿರ ಸಂಖ್ಯೆಯಲ್ಲಿ ರೋಗಿಗಳು ತುತ್ತಾಗಿ ಮರಣಹೊಂದುತ್ತಿದ್ದಾರೆ ಇದಕ್ಕೂ ಸರ್ಕಾರ ಉಚಿತವಾಗಿ ಚಿಕಿತ್ಸೆ ನೀಡುತ್ತಿದೆ,
ರೋಗಿ ಆಕ್ಸಿಜನ್ ಪಡೆಯುವ ವೇಳೆ ಡಿಸ್ಪೆನ್ಸರಿ ನೀರು ಹಾಕುವ ಬದಲು ಮಾಮೂಲಿ ನೀರು ಹಾಕಿದ್ದರೆ, ಸ್ಟೆರಾಯ್ಡ್ಸ್ ಪಡೆದವರಿಗೆ ಹಾಗೂ ರೆಮಿಡಿಸೀವರ್ ತೆಗೆದುಕೊಂಡವರಲ್ಲಿ ಹೆಚ್ಚಾಗಿ ಕಾಣಿಸುತ್ತಿದೆ ವೈದ್ಯರ ಸಲಹೆ ನಿರಾಕರಿಸಿ ಅವರ ಇಷ್ಟಾನುಸಾರ ಮಾಡಿದ್ದರಿಂದ ತೊಂದರೆಗೊಳಗಾಗಿದ್ದಾರೆಂದು ತಿಳಿಸಿದರು.
ನಾನು ಯಾವುದೇ ಅಧಿಕಾರಕ್ಕೆ ಜೋತು ಬಿದ್ದು ಈ ಸೇವಾ ಚಟುವಟಿಕೆ ಮಾಡುತ್ತಿಲ್ಲಾ ಬಯಸದೇ ನನಗೆ ಎಲ್ಲಾ ಅಧಿಕಾರ ಬಂದಿದೆ ನನ್ನ ಸಂಪಾದನೆಯಲ್ಲಿ ಅಲ್ಪಸ್ವಲ್ಪ ಅಳಿಲು ಸೇವೆ ಮಾಡುವ ನಿಟ್ಟಿನಲ್ಲಿ ನಿರ್ಗತಿಕರಿಗೆ, ಶಿಕ್ಷಕರಿಗೆ,
ಆಶಾಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ, ಸಹಾಯಕರಿಗೆ ಇಂತಹ ಕೋವಿಡ್ ಸಂದರ್ಭದಲ್ಲಿ ಸಹಾಯ ಮಾಡುವ ಉದ್ದೇಶದಿಂದ ಮಾಡುತ್ತಿರುವುದಾಗಿ ರಾಜ್ಯ ಎಸ್ಸಿ ಮೋರ್ಚಾ ಖಜಾಂಚಿ ಎ.ಕೆ.ಪಿ.ನಾಗೇಶ್ ತಿಳಿಸಿದರು.
ಈ ಸಂದರ್ಭದಲ್ಲಿ ಸಸಿಗಳನ್ನು ನೆಟ್ಟು ನೆರೆರೆದು ಪರಿಸರ ಉಳಿಸಿ ಎನ್ನುವ ಸಂದೇಶ ನೀಡಿದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಕೇಶವಪ್ರಸಾದ್, ಎಸ್ಸಿ ಮೋರ್ಚಾ ಪ್ರಭಾರಿ ಮಂಜುನಾಥ್, ವೆಂಕಟೇಶ್, ಮಧುಸೂದನ್, ಅಮರನಾರಾಯಣ್, ಶ್ರೇಯಸ್, ಚಂದ್ರಸಾಗರ್ ಮತ್ತಿತರರು ಇದ್ದರು.
ಗುರುಮೂರ್ತಿ ಬೂದಿಗೆರೆ
8861100990