ಒಬ್ಬನೇ ವ್ಯಕ್ತಿಗೆ ಐದು ಬಾರಿ ಕೋವಿಡ್ ಲಸಿಕೆ ಪಡೆದ ಸರ್ಟಿಫಿಕೇಟ್ !

ಒಬ್ಬನೇ ವ್ಯಕ್ತಿಗೆ ಐದು ಬಾರಿ ಕೋವಿಡ್ ಲಸಿಕೆ ಪಡೆದ ಸರ್ಟಿಫಿಕೇಟ್ !

ಮೀರತ್: ಕೊರೋನ ಲಸಿಕೆಯ ಐದು ಡೋಸ್ಗಳನ್ನು ನೀಡಲಾಗಿದೆ ಹಾಗೂ ಆರನೇ ಡೋಸ್ಗೆ ಸಮಯ ನಿಗದಿಪಡಿಸಲಾಗಿದೆ ಎಂದು ಬಿಜೆಪಿಯ ಬೂತ್ಮಟ್ಟದ ನಾಯಕನಿಗೆ ನೀಡಲಾದ ಲಸಿಕೆ ಪ್ರಮಾಣ ಪತ್ರದಲ್ಲಿ ದಾಖಲಿಸಲಾಗಿದೆ. ‌

 

ಇದು ಪ್ರಮಾದದಿಂದ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕರಣ ಜಿಲ್ಲೆಯ ಸರ್ಧಾನ ಪ್ರದೇಶದಿಂದ ವರದಿಯಾಗಿದೆ. 

 

ಬೂತ್ ಸಂಖ್ಯೆ 79ರ ಬಿಜೆಪಿ ಅಧ್ಯಕ್ಷ ಹಾಗೂ ಹಿಂದೂ ಯುವ ವಾಹಿನಿಯ ಸದಸ್ಯನಾಗಿರುವ ರಾಮ್ಪಾಲ್ ಸಿಂಗ್ (73) ಅವರು ಡೌನ್ ಲೋಡ್ ಮಾಡಿರುವ ಲಸಿಕೆ ಪ್ರಮಾಣ ಪತ್ರದಲ್ಲಿ ಈ ರೀತಿಯ ದೋಷ ಕಂಡು ಬಂದಿದೆ. ಐದು ಬಾರಿ ಲಸಿಕೆ ಪಡೆದುಕೊಂಡಿರುವ ಹಾಗೂ 6ನೇ ಡೋಸ್ ಗೆ ಸಮಯ ನಿಗದಿಪಡಿಸಿರುವ ಪ್ರಮಾಣ ಪತ್ರವನ್ನು ತಾನು ಸ್ವೀಕರಿಸಿದ್ದೇನೆ. ಆರೋಗ್ಯ ಇಲಾಖೆಯ ಬೇಜವಾಬ್ದಾರಿಯಿಂದ ಈ ಪ್ರಮಾದ ಸಂಭವಿಸಿದೆ. ಈ ಬಗ್ಗೆ ತಾನು ದೂರು ದಾಖಲಿಸಿದ್ದೇನೆ ಎಂದು ರಾಮ್ಪಾಲ್ ಸಿಂಗ್ ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *

You cannot copy content of this page

error: Content is protected !!