ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯದ ಸಿಬ್ಬಂದಿಯಿಂದ ದಲಿತ ಮಹಿಳೆ ಮೇಲೆ ಹಲ್ಲೆ,ಮಾಂಗಲ್ಯ ಕಿತ್ತು ಹಾಕಿದ ದುರುಳ.ಎಫ್.ಐ.ಅರ್ ದಾಖಲು.

ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯದ ಸಿಬ್ಬಂದಿಯಿಂದ ದಲಿತ ಮಹಿಳೆ ಮೇಲೆ ಹಲ್ಲೆ,ಮಾಂಗಲ್ಯ ಕಿತ್ತು ಹಾಕಿದ ದುರುಳ.ಎಫ್.ಐ.ಅರ್ ದಾಖಲು.

 

ತುಮಕೂರು: ಕೊರಟಗೆರೆಯ ಇತಿಹಾಸ ಪ್ರಸಿದ್ದ ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನದ ಸಿಬ್ಬಂದಿಯಿಂದ ದಲಿತ ಪರಿಶಿಷ್ಟ ಪಂಗಡದ  ಮಹಿಳೆಯ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.

 

 

 

ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ನಡೆದಾಡುವ ದೇವತೆ ಶ್ರೀ ಮಾತೆ ಕಮಲಮ್ಮನವರು ಸ್ಥಾಪಿತ ಶ್ರೀ ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನ ದ ಸಿಬ್ಬಂದಿಯಾದ ಅಶ್ವಥ್ ನಾರಾಯಣ ಎಂಬ ವ್ಯಕ್ತಿ   ದಲಿತ ( ನಾಯಕ ) ಮಹಿಳೆ ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನದ ಪಕ್ಕದಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಈ ಮಹಿಳೆ ತನ್ನ ಪರಿಚಯಸ್ಥರನ್ನು ಶ್ರೀ ಮಹಾಲಕ್ಷ್ಮಿಯ ದರ್ಶನ ಮಾಡಲು ಕರೆದುಕೊಂಡು ಹೋದ ಸಂದರ್ಭದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಚೇರಿಗೆ ಕರೆದುಕೊಂಡು ಹೋಗಿ ಅಪರಾಧಿಯಂತೆ ಬಾಯಿಗೆ ಬಂದಂತೆ ಬೈದು ಭಾರತೀಯ ಸಂಸ್ಕೃತಿಯ ವಿಶಿಷ್ಟ ಪವಿತ್ರಸ್ಥಾನವನ್ನು ಹೊಂದಿರುವ ಮಾಂಗಲ್ಯವನ್ನು ಕಿತ್ತುಹಾಕಿ ಮಹಿಳೆಯ ಮೇಲೆ ದೌರ್ಜನ್ಯವೆಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

 

ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನ ಪವಿತ್ರತೆಗೆ ಧಕ್ಕೆ ಬರುವಂತೆ ನೀಚ ಕೃತ್ಯ ನಡೆದಿದೆ. ಈ ಹಿಂದೆ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಚಾರಿಟಬಲ್ ಟ್ರಸ್ಟ್ ಮಾಡಿಕೊಂಡಿದ್ದರು ಹೊಸದಾಗಿ ಇನ್ನೊಂದು ಟ್ರಸ್ಟ್ ಮಾಡಿ ಎರಡು ಟ್ರಸ್ಟ್ಗಳ ನಡುವೆ ಜಗಳ ಸಂಭವಿಸಿ ಪ್ರಕರಣವು ಕೋರ್ಟ್ ಮೆಟ್ಟಿಲೇರಿತ್ತು, ಈ ಸಮಯದಲ್ಲಿ ಧಾರ್ಮಿಕ ದತ್ತಿ ಇಲಾಖೆ ಮಹಾಲಕ್ಷ್ಮಿ ದೇವಸ್ಥಾನ ತುಮಕೂರು ಜಿಲ್ಲಾಡಳಿತ ಸುಸೂತ್ರವಾಗಿ ದೇವಸ್ಥಾನದ ಅಭಿವೃದ್ಧಿ ಕಾರ್ಯ ನಡೆಸಿಕೊಂಡು ಬಂದಿದ್ದು ಕೋರ್ಟ್ ಮತ್ತೆ ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್ ಆಡಳಿತ ನಡೆಸುವಂತೆ ತೀರ್ಪು ನೀಡಿದ ಬಳಿಕ ಟ್ರಸ್ಟ್ ಆಡಳಿತ ನಡೆಸಲು ಪ್ರಾರಂಭಿಸಿದ ದಿನದಿಂದಲೂ ಭಕ್ತಾದಿಗಳ ಮೇಲೆ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಲೇ ಬಂದವು ಈ ದೇವಸ್ಥಾನಕ್ಕೆ ತಿಂಗಳಿಗೆ ಲಕ್ಷಾಂತರ ರೂಪಾಯಿ ಕಾಣಿಕೆ ರೂಪದಲ್ಲಿ ಬರುತ್ತದೆ ಕೆಲವು ಸಿಬ್ಬಂದಿಗಳ ವರ್ತನೆಗಳಿಂದ ಭಕ್ತಾದಿಗಳು ದಿನವೂ ಶಾಪ ಹಾಕುವಂತಹ ಆರೋಪ ಸಹ ಕೇಳಿಬಂದಿದೆ.

ಈ ಹಲ್ಲೆ ಸಂಬಂಧ  ಮಹಿಳಾ ದೌರ್ಜನ್ಯ ಮತ್ತು ಜಾತಿ ನಿಂದನೆ ಪ್ರಕರಣವು ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಮಹಿಳಾ ದೌರ್ಜನ್ಯ ಮತ್ತು ಜಾತಿ ನಿಂದನೆಯ ಬಗ್ಗೆ ಪ್ರಕರಣ ದಾಖಲಾಗಿರುದನ್ನು ತಿಳಿದ ಮೇಲೆ ಸ್ಥಳಕ್ಕೆ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಆದರೆ ಪ್ರಕರಣದ ಆರೋಪಿಯನ್ನು ಇದು ವರೆಗೂ ಬಂಧಿಸಿಲ್ಲ ಎನ್ನುವ ಗಂಭೀರ ಆರೋಪವನನ್ನು ಸಂತ್ರಸ್ತ ಕುಟುಂಬವು ಮಾಡುತ್ತಿದೆ.

 

 

ವರವ ಕೊಡು ಎಂದು ಸಾಕಷ್ಟು ಭಕ್ತಾದಿಗಳು ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಆಗಮಿಸುತ್ತಾರೆ ಇಂಥ ಪವಿತ್ರ ದೇವಾಲಯದಲ್ಲಿ ಮಹಿಳೆಯ ಮೇಲೆ ಹಲ್ಲೆ ನಡೆಸಿ ಮಾಂಗಲ್ಯ ಕಿತ್ತು ಹಾಕುವ ಮೂಲಕ ಇನ್ನು ದೇವಾಲಯದಲ್ಲಿ ಕೆಲಸ ಮಾಡುವ ದುರುಳ ಅಟ್ಟಹಾಸ ಮೆರೆದಿದ್ದಾನೆ ಆದರೆ ಇದುವರೆಗೂ ಅಂತಹ ಆರೋಪಿಯ ರಕ್ಷಣೆಗೆ ಹಲವರು ನಿಂತಿದ್ದಾರೆ ಎನ್ನುವ ಗಂಭೀರ ಆರೋಪ ಕುಟುಂಬಸ್ಥ ರದ್ದು. ಇನ್ನಾದರೂ ಸಂಬಂಧಪಟ್ಟ ಇಲಾಖೆಗಳ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಯ ಮೇಲೆ ಕ್ರಮ ಕೈಗೊಳ್ಳುವರೇ ಕಾದುನೋಡಬೇಕು….????

 

ವರದಿ_ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!