ಪಾಕಿಸ್ತಾನಿ ಫೈಟರ್‌ ನನ್ನು ಮಣ್ಣು ಮುಕ್ಕಿಸಿದ ಬೆಂಗಳೂರಿನ ಫೈಟರ್‌ ಮೊಹಮ್ಮದ್‌ ಫರಾದ್‌

 

 

ಪಾಕಿಸ್ತಾನಿ ಫೈಟರ್‌ ನನ್ನು ಮಣ್ಣು ಮುಕ್ಕಿಸಿದ ಬೆಂಗಳೂರಿನ ಫೈಟರ್‌ ಮೊಹಮ್ಮದ್‌ ಫರಾದ್‌ ಗೆ ಕೆಎಸ್‌ಎಫ್‌ಎ ಮತ್ತು ನಲಪಾಡ್‌ ಅಕಾಡೆಮಿ ಹಾಗೂ ಬೌರಿಂಗ್‌ ಇನ್ಸಿಟ್ಯೂಟ್‌ ನಿಂದ ಸನ್ಮಾನ

 

ಬೆಂಗಳೂರು ಬುಧವಾರ ಮಾರ್ಚ್‌ 17: ಮಾರ್ಚ್‌ 11 ರಂದು ಬಹ್ರೇನ್‌ ನಲ್ಲಿ ನಡೆದ ಎಂಎಂಎ (ಮಿಕ್ಸಡ್‌ ಮಾರ್ಷಲ್‌ ಆರ್ಟ್ಸ್‌) ಫೈಟ್‌ ನಲ್ಲಿ ಬೆಂಗಳೂರಿನ ಫೈಟರ್‌ ಮೊಹಮ್ಮದ ಫರಾದ್‌ ಪಾಕಿಸ್ತಾನಿ ಫೈಟರ್‌ ಉಲೂಮಿ ಕರೀಮ್‌ ಅವರನ್ನು ನಾಕ್‌ಔಟ್‌ ಮಾಡಿ ಗೆಲವು ಸಾಧಿಸಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಹಾಗೂ ದೇಶದ ಪತಾಕೆಯನ್ನು ಹಾರಿಸಿದ ಬೆಂಗಳೂರಿನ ಫೈಟರ್‌ ಗೆ ಇಂದು *ಕರ್ನಾಟಕ ಸ್ಟೇಟ್‌ ಫುಟ್‌ಬಾಲ್‌ ಅಸೋಸಿಯೇಷನ್‌, ನಲಪಾಡ್‌ ಅಕಾಡೆಮಿ ಹಾಗೂ ಬೌರಿಂಗ್‌ ಇನ್ಸಿಟ್ಯೂಟ್‌ ಜಂಟಿಯಾಗಿ ಇಂದು ಸನ್ಮಾನಿಸಿದವು.

 

ಸನ್ಮಾನ ಸ್ವೀಕರಿಸಿ ಮಾತನಾಡಿದ ಫೈಟರ್‌ ಮೊಹಮ್ಮದ ಫರಾದ್*‌ ಎಂಎಂಎ ಇತ್ತೀಚೆಗೆ ಜಗತ್ತಿನಾದ್ಯಂತ ಬಹಳಷ್ಟು ಪ್ರಸಿದ್ದಿಯನ್ನು ಪಡೆದುಕೊಳ್ಳುತ್ತಿದೆ. ಈ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಬಹಳಷ್ಟು ದೈಹಿಕ ಶ್ರಮ ಹಾಗೂ ಶಕ್ತಿಯ ಅಗತ್ಯವಿದೆ. ನಿಜವಾದ ಫೈಟ್‌ ನಲ್ಲಿ ಅದರಲ್ಲೂ ನಮ್ಮ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನಿ ಫೈಟರನ್ನು ನಾಕ್‌ಔಟ್‌ ಮಾಡಿ ಗೆಲವು ಸಾಧಿಸಿದ್ದು ಬಹಳ ಸಂತಸ ತಂದಿದೆ. ನನ್ನ ಗೆಲುವನ್ನು ಗುರುತಿಸಿ ಕರ್ನಾಟಕ ಸ್ಟೇಟ್‌ ಫುಟ್‌ಬಾಲ್‌ ಅಸೋಸಿಯೇಷನ್‌, ನಲಪಾಡ್‌ ಅಕಾಡೆಮಿ ಹಾಗೂ ಬೌರಿಂಗ್‌ ಇನ್ಸಿಟ್ಯೂಟ್‌ ನನ್ನ ಊರಿನಲ್ಲಿ ಸನ್ಮಾನಿಸುತ್ತಿರುವುದು ಬಹಳ ಖುಷಿಯ ವಿಷಯವಾಗಿದೆ ಎಂದರು.

 

ಸನ್ಮಾನ ಮಾಡಿ ಮಾತನಾಡಿದ ಕರ್ನಾಟಕ ಸ್ಟೇಟ್‌ ಫುಟ್‌ಬಾಲ್‌ ಅಸೋಸಿಯೇಷನ್‌ ಅಧ್ಯಕ್ಷರು ಹಾಗೂ ಶಾಸಕರಾದ ಎನ್‌ ಎ ಹ್ಯಾರಿಸ್*‌, ದೈಹಿಕ ಶಕ್ತಿಯನ್ನು ಬೇಡುವ ಕ್ರೀಡೆ ಮಿಕ್ಸಡ್‌ ಮಾರ್ಷಲ್‌ ಆರ್ಟ್ಸ್‌, ಇಂತಹ ಕ್ರೀಡೆಯಲ್ಲಿ ನಮ್ಮ ನಗರದ ಹುಡುಗ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವುದು ಬಹಳ ಹೆಮ್ಮೆಯ ಸಂಗತಿಯಾಗಿದೆ. ಇಂತಹ ಪ್ರತಿಭೆಗೆ ಪ್ರೋತ್ಸಾಹ ನೀಡಬೇಕಾಗಿರುವುದು ನಮ್ಮ ಅದ್ಯ ಕರ್ತವ್ಯವಾಗಿದೆ. ಈ ಹಿನ್ನಲೆಯಲ್ಲಿ ಫುಟ್‌ಬಾಲ್‌ ಅಸೋಸಿಯೇಷನ್‌ ವತಿಯಿಂದ ಸನ್ಮಾನ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಅವರಿಗೆ ಬೇಕಾದ ಪ್ರೋತ್ಸಾಹ ನೀಡುವುದಕ್ಕೂ ಸಿದ್ದರಿದ್ದೇವೆ. ಮೊಹಮ್ಮದ್‌ ಫರಾದ್‌ ಸಾಧನೆ ಇನ್ನು ಹಲವರಿಗೆ ಸ್ಪೂರ್ತಿಯಾಗಲಿ ಹಾಗೂ ಹೆಚ್ಚು ಹೆಚ್ಚು ಯುವ ಜನಾಂಗ ಇಂತಹ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿ ಎಂಬುದು ನಮ್ಮ ಆಶಯವಾಗಿದೆ ಎಂದರು.

 

ನಲಪಾಡ್‌ ಅಕಾಡೆಮಿಯ ನಿರ್ದೇಶಕ ಓಮರ್‌ ನಲಪಾಡ್‌ ಹ್ಯಾರಿಸ್‌* ಮಾತನಾಡಿ, ನಮ್ಮ ನಲಪಾಡ್‌ ಅಕಾಡೆಮಿಯಲ್ಲಿ ಕ್ರೀಡೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಎಂಎಂಎ ನಂತಹ ಕ್ರೀಡೆಗಳನ್ನು ನಾವು ನಮ್ಮ ಅಕಾಡೆಮಿಯಲ್ಲೂ ಅಳವಡಿಸಿಕೊಳ್ಳಲು ಚಿಂತನೆ ನಡೆಸಿದ್ದೇವೆ ಎಂದು ಹೇಳಿದರು.

 

ಆಲ್‌ ಇಂಡಿಯಾ ಎಂಎಂಎ ಫೆಡರೇಷನ್‌ ನ ಪ್ರಧಾನ ಕಾರ್ಯದರ್ಶಿ ಹಾಗೂ ತರಬೇತಿ ನೀಡಿದ ಅಬ್ದುಲ್‌ ಮುನೀರ್*‌ ಮಾತನಾಡಿ, ಸಾಕಷ್ಟು ಶ್ರಮದಿಂದ ನಮ್ಮ ಬೆಂಗಳೂರಿನ ಹುಡುಗ ಮೊಹಮ್ಮದ್‌ ಫರಾದ್‌ ಈ ಗೆಲುವನ್ನು ಸಾಧಿಸಿದ್ದಾನೆ. ಸೋತಿರುವ ಪಾಕಿಸ್ತಾನಿ ಫೈಟರ್‌ ಹಿಂದಿನ ಹಲವು ಪಂದ್ಯಗಳಲ್ಲಿ ಭಾರತೀಯ ಕ್ರೀಡಾಪಟುಗಳನ್ನು ಸೋಲಿಸಿದ್ದರು. ಕ್ರೀಡೆಯಲ್ಲಿ ನಮ್ಮ ಸಾಂಪ್ರದಾಯಿಕ ಎದುರಾಳಿ ರಾಷ್ಟ್ರದ ಕ್ರೀಡಾಪಟುಗಳು ಎದುರಾದಾಗ ಬಹಳಷ್ಟು ಮಾನಸಿಕವಾದ ಒತ್ತಡ ಇರುತ್ತದೆ. ಈ ಒತ್ತಡವನ್ನು ಮೀರಿ ದೇಶದ ಹೆಸರನ್ನು ಎತ್ತಿಹಿಡಿಯವುದು ಬಹಳ ಹೆಮ್ಮೆಯ ಸಂಗತಿಯಾಗಿದೆ ಎಂದರು.

 

ಕಾರ್ಯಕ್ರಮದಲ್ಲಿ ಆಲ್‌ ಇಂಡಿಯಾ ಎಂಎಂಎ ಫೆಡರೇಷನ್‌ ನ ಅಧ್ಯಕ್ಷರಾದ ಆದಿತ್ಯ, ಬೌರಿಂಗ್‌ ಇನ್ಸಿಟ್ಯೂಟ್ ನ ಅಧ್ಯಕ್ಷರಾದ ರೂಪ್‌ ಗೋಲ್ಖಾನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *

You cannot copy content of this page

error: Content is protected !!