ಹೆಬ್ಬಕ ಕೆರೆಗೆ ನೀರು ಹರಿಸಲು ಒತ್ತಾಯ.
ತುಮಕೂರು
ತುಮಕೂರು ತಾಲೂಕು ಊರುಕೆರೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿರುವ ಹೆಬ್ಬಾಕ ಕೆರೆಯು ಆ ಭಾಗದ ರೈತರಿಗೆ ಒಡನಾಡಿಯಾಗಿದ್ದು ಕೆರೆಯು ಇಂದು ನೀರಿಲ್ಲದೆ ಬಣಗುಡುತ್ತಿದೆ ಕೂಡಲೇ ಹೆಬ್ಬಕ ಕೆರೆಗೆ ನೀರು ಹರಿಸಬೇಕು ಎಂದು ಮುಖಂಡರಾದ ಊರುಕೆರೆ ನಂಜುಂಡಪ್ಪ ರವರು ಒತ್ತಾಯಿಸಿದ್ದಾರೆ.
ಹೆಬ್ಬಾಕ ಕೆರೆಗೆ ಹೊಂದಿಕೊಂಡಂತೆ ಹಲವಾರು ಗ್ರಾಮಗಳಿದ್ದು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶವಾಗಿದೆ ಹಾಗೂ ನಾಗರೀಕರಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು ಪೂರೈಕೆ ಮಾಡುವುದು ಅಧಿಕಾರಿಗಳ ಕರ್ತವ್ಯವಾಗಿದೆ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಮೂಲಗಳು ಬತ್ತಿಹೋಗುತ್ತಿದ್ದು ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆ ಮಾಡಲು ಕಷ್ಟವಾಗುತ್ತಿದೆ .ಈ ಬಾರಿ ಹೇಮಾವತಿ ನದಿ ಪಾತ್ರದಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗುತ್ತಿದ್ದು ಹೇಮಾವತಿ ಜಲಾಶಯ ತುಂಬಿ ಹರಿಯುತ್ತಿರುವುದರಿಂದ ನಾಲೆಗಳ ಮೂಲಕ ಇತರೆ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ ಆದರೆ ಬುಗುಡನಹಳ್ಳಿ ಕೆರೆ ಹಾಗೂ ಹೆಬ್ಬಕ ಕೆರೆ ಎರಡು ಕೆರೆಗಳನ್ನು ತುಮಕೂರು ನಗರಕ್ಕೆ ಕುಡಿಯುವ ನೀರು ಪೂರೈಸಲು ಕಳೆದ 20 ವರ್ಷಗಳಿಂದ ಬಳಸಿಕೊಳ್ಳಲಾಗುತ್ತಿದೆ ಬುಗುಡನಹಳ್ಳಿ ಕೆರೆ ತುಂಬಿದ ನಂತರ ಹೆಬ್ಬಕ ಕೆರೆಗೆ ಸಹ ನೀರು ಹರಿಸಿ ಕೆರೆಯನ್ನು ತುಂಬಿಸಬೇಕಾಗಿತ್ತು ಹೆಬ್ಬಕ ಕೆರೆಯಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಊರುಕೆರೆ ಹಾಗೂ ಅಕ್ಕಪಕ್ಕದ ಹಳ್ಳಿಗಳಿಗೂ ಕುಡಿಯುವ ನೀರು ಪೂರೈಸಲು ಅನುಕೂಲ ಮಾಡಿಕೊಡಬೇಕಾಗಿ ಅಧಿಕಾರಿಗಳಲ್ಲಿ ಮನವಿ ಮಾಡಲಾಗುವುದು ಇದಕ್ಕೆ ಸಂಬಂಧಿಸಿದಂತೆ ಕೂಡಲೇ ಶೀಘ್ರ ಹೆಬ್ಬಾಕ ಕೆರೆಗೆ ನೀರು ಹರಿಸಲು ತುಮಕೂರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಮನವಿ ಸಲ್ಲಿಸುವ ಮೂಲಕ ಮುಖಂಡರು ಒತ್ತಾಯಿಸಿದ್ದಾರೆ.
ಹೆಬ್ಬಾಕ ಕೆರೆಯನ್ನು ತುಮಕೂರು ನಗರಕ್ಕೆ ಪರ್ಯಾಯ ನೀರು ಸರಬರಾಜಿಗೆ ಬಳಸಿಕೊಳ್ಳಲಾಗುತ್ತಿದೆ ಆದರೆ ಇದುವರೆಗೂ ಯಾವುದೇ ಮೂಲಭೂತ ಸೌಕರ್ಯಗಳನ್ನು ಒದಗಿಸಿಲ್ಲ ರಸ್ತೆಯ ಕಿರಿದಾಗಿದ್ದು ಪ್ರತಿದಿನ ಸಾವಿರಾರು ಜನ ಸಂಚರಿಸುವ ರಸ್ತೆಯಾಗಿದೆ. ಇದುವರೆಗೂ ರಸ್ತೆಯ ಎರಡು ಬದಿಯಲ್ಲಿ ಬೀದಿದೀಪಗಳನ್ನು ಹಾಗೂ ಗ್ರಿಲ್ ಗಳನ್ನು ಅಳವಡಿಸಿಲ್ಲ ಆದ್ದರಿಂದ ಕೂಡಲೇ ಗ್ರಿಲ್ಗಳನ್ನು ಹಾಗೂ ಬೀದಿ ದೀಪಗಳನ್ನು ಅಳವಡಿಸಿ ಸಾರ್ವಜನಿಕರಿಗೆ ಅನುವು ಮಾಡಿಕೊಡಬೇಕು ಎಂದು ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಕೋರಿದ್ದಾರೆ
ಇದೇ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ತಿರುಮಲೇಶ್, ರಾಜಣ್ಣ, ಸಿದ್ದೇಶ್, ರಾಮಣ್ಣ, ರಂಗನಾಥ್ ಸೇರಿದಂತೆ ಸ್ಥಳೀಯರು ಹಾಜರಿದ್ದರು