ಅರಣ್ಯಾಧಿಕಾರಿಗಳ ರಾಜಕೀಯ ಮೇಲಾಟಕ್ಕೆ ರೈತರು ತತ್ತರ ಶಾಸಕ ವೀರಭದ್ರಯ್ಯ ಸೋಲಿಗೆ ಅಧಿಕಾರಿಗಳ ಪಣ….???

ಅರಣ್ಯಾಧಿಕಾರಿಗಳ ರಾಜಕೀಯ ಮೇಲಾಟಕ್ಕೆ ರೈತರು ತತ್ತರ ಶಾಸಕ ವೀರಭದ್ರಯ್ಯ ಸೋಲಿಗೆ ಅಧಿಕಾರಿಗಳ ಪಣ….???

ಮಧುಗಿರಿ : ರೈತರಿಗೆ ಬಗರ್ ಹುಕುಂ ಸಾಗುವಳಿಗೆ ನೀಡಲು ಅರಣ್ಯ ಇಲಾಖೆಯಿಂದ ಎನ್ಒಸಿ ಅಗತ್ಯವಿದ್ದು, ಅದನ್ನು ನೀಡಲು ಅರಣ್ಯ ಇಲಾಖೆಯ ಆರ್‌ಎಫ್ಒ ರವಿ ಅವರು ಸತಾಯಿಸುತ್ತಿದ್ದಾರೆ ಎಂದು ರೈತರು ದೂರಿದರು.

 

 

 

 

 

ಅರಣ್ಯ ಇಲಾಖೆಯಲ್ಲಿ ಮಧುಗಿರಿ ಶಾಸಕರು ಹಾಗೂ ಮಾಜಿ ಶಾಸಕರ ಬೆಂಬಲಿಗರಿದ್ದು, ರೈತರು ಹಾಲಿ ಶಾಸಕರ ಬೆಂಬಲಿಗರೋ ಇಲ್ಲವೋ ಎಂಬುದರ ಮೇಲೆ ಎನ್ಒಸಿ ಬೇಗ ನೀಡುವುದು ಅಥವಾ ತಡವಾಗಿ ನೀಡುವುದು ನಿರ್ಧಾರವಾಗಿದೆಯಂತೆ. ತಾಲೂಕಿನಲ್ಲಿ ಬಗರ್ ಹುಕುಂ ಮೀಟಿಂಗ್ ದಿನದಿಂದ ದಿನಕ್ಕೆ ಮುಂದೂಡಲಾಗುತ್ತಿದ್ದು, ರೈತರು ಸಾಗುವಳಿ ಚೀಟಿಗಳಿಗಾಗಿ ಕಾಯುತ್ತಿದ್ದಾರೆ.

 

 

 

 

ವಾಸ್ತವವಾಗಿ ಅರಣ್ಯ ಇಲಾಖೆಯಿಂದ ತಾಲೂಕು ಕಚೇರಿಗೇ ನೇರವಾಗಿ ಎನ್‌ಒಸಿ ಕಳುಹಿಸಬೇಕು. ಆದರಿನ್ನೂ ಕಳುಹಿಸಲಾಗಿಲ್ಲ. ಕಮ್ಮನಕೋಟೆಯ ಗ್ರಾಮದ ಸರ್ವೇ ನಂ 54 ರ ಅರ್ಜಿಗಳು ಸಲ್ಲಿಕೆಯಾಗಿದ್ದು, ರೈತರು ಪ್ರತಿಯೊಂದು ಕೆಲಸಗಳಿಗಾಗಿ ಸರ್ಕಾರಿ ಕಚೇರಿಗೆ ಅಲೆದಾಡಲು ಸಾಧ್ಯವಿಲ್ಲ. ಅಧಿಕ ಮಳೆಯಿಂದಾಗಿ ನೀರಿನ ಲಭ್ಯತೆ ಹೆಚ್ಚಿದ್ದು, ರೈತರು ನಿರಂತರವಾಗಿ ಕೃಷಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಆದ್ದರಿಂದ ಪ್ರತೀಬಾರಿ ಅಲೆಯುವ ಬದಲು ಊರಿನ ಮುಖಂಡರೊಬ್ಬರಿಗೆ ಸಾಗುವಳಿ ಅರ್ಜಿಗಳನ್ನು ಫಾಲೋ ಅಪ್ ಮಾಡಲು ವಹಿಸಿದ್ದಾರೆ. ರೈತ ಮುಖಂಡರು ಫಾರೆಸ್ಟ್ ರೇಂಜರ್ ರವಿ ಅವರನ್ನು ಭೇಟಿ ಮಾಡಲು ಹಲವು ಬಾರಿ ಪ್ರಯತ್ನಿಸಿದರೂ ಆಗ ಈಗ ಎನ್ನುವ ಕಾರಣ ಹೇಳಿ ನುಣುಚಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

 

 

 

 

 

ಇತ್ತ ತಾಲೂಕು ಕಚೇರಿಯಲ್ಲಿ ಎನ್‌ಒಸಿ ಬಂದಿಲ್ಲ ಎನ್ನುತ್ತಿದ್ದಾರೆ. No abjunction certificate ಬರದೆ ಕಮಿಟಿ ಮೀಟಿಂಗ್ ನಲ್ಲಿ ಅರ್ಜಿಗಳನ್ನು ಇಡಲು ಸಾಧ್ಯವಿಲ್ಲ. ಅರಣ್ಯದ ಗಡಿಯಲ್ಲಿ ಬರುವ ಬಗರ್ ಹುಕುಂ ಜಮೀನುಗಳನ್ನು ಸಾಮಾಜಿಕ ಅರಣ್ಯಕ್ಕೆ ಸೇರ್ಪಡಿಸುವ ಯೋಜನೆ ಹಾಕಿದ್ದಾರೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಅರಣ್ಯ ಇಲಾಖೆಯವರ ಈ ರೈತ ವಿರೋಧಿ ನೀತಿಗೆ ಬಡ ಕೃಷಿಕರು ಹೈರಾಣಾಗಿದ್ದು, ರೈತರು ಶಾಸಕ ವಿರುದ್ಧ ತಿರುಗಿ ನಿಂತಿದ್ದು, ಇದು ಶಾಸಕ ಎಂ.ವಿ.ವೀರಭದ್ರಯ್ಯನವರ ಚುನಾವಣೆಯ ಮೇಲೂ ಪ್ರಭಾವ ಭೀರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

 

 

 

 

 

ರೈತರು ನೆಚ್ಚಿ ಬದುಕುತ್ತಿರುವುದು ಭೂಮಿಯನ್ನು. ಬಗರ್ ಹುಕುಂ ಮುಖಾಂತರ ತಮ್ಮ ಜಮೀನುಗಳು ಸಕ್ರಮವಾಗುವ ನಿರೀಕ್ಷೆಯಲ್ಲಿ ರೈತರಿದ್ದಾರೆ. ಅವರನ್ನೇ ಹೀಗೆ ಅಲೆದಾಡಿಸಿ, ಅರಣ್ಯದ ಹೆಸರಲ್ಲಿ ಭೂಮಿ ಕಬ್ಜ ಮಾಡಲು ಹೋದರೆ ಹಾಲಿ ಶಾಸಕರು ಮಕಾಡೆ ಮಲಗುವುದು ಗ್ಯಾರಂಟಿ.

 

 

 

 

 

ಕೃಷಿಕರೇ ಹೆಚ್ಚಿರುವ ತಾಲೂಕಿನಲ್ಲಿ ಅಧಿಕಾರಿಗಳಿಂದ ಸರಿಯಾಗಿ ಕೆಲಸ ತೆಗೆಸಲು ಸಾಧ್ಯವಾಗದ ನಿವೃತ್ತ ಐಎಎಸ್ ಅಧಿಕಾರಿ ಎಂದು ಮತ್ತು ಶಾಸಕ ವೀರಭದ್ರಯ್ಯ ರೈತ ವಿರೋಧಿ ಎಂದೂ ಜನಾಭಿಪ್ರಾಯ ರೂಪಿತವಾಗಿದೆ. ಇದರಿಂದ ಅವರ ಗೆಲವು ಕಷ್ಟ ಸಾಧ್ಯ. ಈ ಎಲ್ಲದನ್ನೂ ಗಮನಿಸಿದರೆ ಶಾಸಕರನ್ನು ಸೋಲಿಸಲು ಅಧಿಕಾರಿಗಳೇ ಸಿದ್ಧವಾದಂತೆ ಕಾಣುತ್ತಿದೆ.

 

 

 

 

 

ಸರ್ಕಾರಿ ಕೆಲಸದಲ್ಲಿ ರಾಜಕಾರಣ : ರಾಜಕಾರಣವೇ ಬೇರೆ, ಸರ್ಕಾರದ ಕರ್ತವ್ಯವೇ ಬೇರೆ. ಈ ಎರಡರ ನಡುವಿನ ವ್ಯತ್ಯಾಸ ತಿಳಿಯದ ಅಧಿಕಾರಿಗಳು ಪ್ರಜಾಪ್ರಭುತ್ವಕ್ಕೆ ಮಾರಕ. ಇಂತಹ ಅಧಿಕಾರಿಗಳ ಬಗ್ಗೆ ಗಮನವಿರಿಸಬೇಕಾದದ್ದು, ಶಾಸಕರ ಕರ್ತವ್ಯ. ಅಲ್ಲದೆ ತಾಲೂಕು ನೂತನ ದಂಡಾಧಿಕಾರಿಯಾಗಿ ಸಿಕ್ಬತ್ತುಲ್ಲಾ ಅವರು ನೇಮಕವಾಗಿದ್ದು, ಇಂತಹ ಬೆಳವಣಿಗೆ ಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕಿದೆ.

 

 

 

 

ಈ ಹಿಂದೆ ಎನ್‌ಒಸಿ ನೀಡುವಿಕೆಗೆ ಸಂಬಂಧಿಸಿದಂತೆ ತಾಲೂಕು ಕಚೇರಿಯಿಂದ ಅರಣ್ಯ ಇಲಾಖೆಗೆ ಪತ್ರ ಕಳುಹಿಸಲು ತಡವಾಗಿತ್ತು. ಈ ಬಗ್ಗೆ ಈ ಕ್ಷಣ.ಕಾಂ ವರದಿ ಮಾಡಿದ್ದ ಹಿನ್ನೆಲೆಯಲ್ಲಿ ಹಿಂದೆಯಿದ್ದ ತಹಶಿಲ್ದಾರ್ ಸುರೇಶ್ ಆಚಾರ್ ಅವರು ತಕ್ಷಣ ಎಚ್ಚೆತ್ತು ಎನ್‌ಒಸಿಗಾಗಿ ಪತ್ರ ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

 

 

ಎನ್‌ಒಸಿ ವಿಚಾರಕ್ಕೆ ಸಂಬಂಧಿಸಿದಂತೆ ನೂತನ ತಹಶಿಲ್ದಾರ್ ಸಿಕ್ಬತ್ತುಲ್ಲ ಅವರನ್ನು ಸಂಪರ್ಕಿಸಿದ ವೇಳೆ ಸಮರ್ಪಕವಾಗಿ ಉತ್ತರಿಸಲಿಲ್ಲ ಹಾಗೂ ಮಧುಗಿರಿ ಆರ್‌ಎಫ್‌ಒ ರವಿ ಅವರು ಕರೆ ಸ್ವೀಕರಿಸಲಿಲ್ಲ.ಸಾಗುವಳಿ ಜಮೀನುಗಳಲ್ಲಿ ಉಳುಮೆ ಮಾಡುವುದು ಅಕ್ರಮವಾಗಿತ್ತು, ಈಗ ಸಕ್ರಮ ಮಾಡುವ ಕಾಲ ಬಂದಾಗ ಅಡ್ಡಿಪಡಿಸಬೇಡಿ ಅಥವಾ ತಡ ಮಾಡಬೇಡಿ. ನಮ್ಮ ಬದುಕು ಕೃಷಿಯನ್ನು ಅವಲಂಬಿಸಿದೆ.

_ರವಿಕುಮಾರ್, ಕಮ್ಮನಕೋಟೆ ಸಾಗುವಳಿ ಅರ್ಜಿದಾರ

Leave a Reply

Your email address will not be published. Required fields are marked *

You cannot copy content of this page

error: Content is protected !!