ನೀರಿಗಾಗಿ ಹಾಹಾಕಾರದ ಸೃಷ್ಟಿಯಾಗುವ ಮುನ್ನವೇ ಎಚ್ಚೆತ್ತುಕೊಳ್ಳಿ : ಮಾಜಿ ಶಾಸಕ ಡಾ.ರಫೀಕ್ ಅಹ್ಮದ್

ತುಮಕೂರು

ತುಮಕೂರು ನಗರದ ಜನತೆಗೆ ಪ್ರಮುಖ ನೀರಿನ ಮೂಲವಾದ ಬುಗುಡನಹಳ್ಳಿ ಕೆರೆಯಲ್ಲಿ ನೀರು ಖಾಲಿಯಾಗುತ್ತಾ ಬಂದಿದ್ದು. ಈಗ ಇರುವ ನೀರನ್ನು ಕೆಲವೇ ದಿನಗಳು ಮಾತ್ರ ಪೂರೈಸಬಹುದಾಗಿದೆ. ಕೆರೆಯ ಒಟ್ಟು ನೀರಿನ ಸಂಗ್ರಹದ ಸಾಮರ್ಥ್ಯ ೨೪೬ ಎಂ.ಸಿ.ಎಫ್.ಟಿ ಈಗಾಗಲೇ ಬಹುತೇಕ ನೀರು ಖಾಲಿಯಾಗಿದ್ದು, ೩೧ ಎಂ.ಸಿ.ಎಫ್.ಟಿ ನೀರು ಉಳಿದಿದೆ ಇದರಲ್ಲಿ ೨೦ ರಿಂದ ೨೫ ಎಂ.ಸಿ.ಎಫ್.ಟಿ ಯಷ್ಟು ನೀರು ಮಾತ್ರ ಲಭ್ಯವಾಗಲಿದೆ. ಹೇಮಾವತಿ ಜಲಾಶಯದಿಂದ ನೀರು ಬಿಡುಗಡೆಯಾದರೆ ಮಾತ್ರ ನೀರಿನ ಕೊರತೆ ಸರಿದೂಗಿಸಲು ಸಾಧ್ಯ, ಆದರೆ ಹೇಮಾವತಿ ಜಲಾಶಯದಲ್ಲೂ ಸಾಕಷ್ಟು ಪ್ರಮಾಣದಲ್ಲಿ ನೀರಿನ ಸಂಗ್ರಹ ಇಲ್ಲದಿರುವುದು ಅರಿಯಬೇಕಿದೆ. ಮಳೆಗಾಲ ಆರಂಭವಾಗಿ ಜಲಾಶಯಕ್ಕೆ ನೀರಿನ ಹರಿವು ಹೆಚ್ಚಳವಾದಾಗ ಮಾತ್ರ ಬುಗುಡನಹಳ್ಳಿ ಕೆರೆಗೆ ನೀರು ಹರಿಯುತ್ತದೆ.

 

 

ನಗರದ ಕೆಲವು ವಾರ್ಡ್ಗಳಲ್ಲಿ ಬಳಸಲೂ ಯೋಗ್ಯವಲ್ಲದಂತಹ ಮಲಿನಯುಕ್ತ ನೀರು ಪೂರೈಕೆಯಾಗುತಿದ್ದು ಸಂಬoಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ಕೊರೊನಾ ಸಾಂಕ್ರಾಮಿಕದಿAದ ಜನರು ಬಳಲುತ್ತಿದ್ದು ಇಂತಹ ಮಲಿನವಾದ ನೀರನ್ನು ಕುಡಿದು ಬೇರೊಂದು ಸಾಕ್ರಾಮಿಕ ರೋಗಕ್ಕೆ ತುತ್ತಾಗುವುದನ್ನು ತಪ್ಪಿಸಿ ಎಂದು ಆಗ್ರಹಿಸುತ್ತೇನೆ.

 

 

ನೀರಿನ ಮಿತಬಳಕೆ ಮಾಡಿದರೆ ಮಾತ್ರ ನೀರಿನ ಕೊರತೆ ನೀಗಿಸಬಹುದು, ಇದೇ ರೀತಿ ಮುಂದುವರಿದರೆ ಕುಡಿಯುವ ನೀರಿಗೆ ಭುಗಿಲೇಳುವ ಪರಿಸ್ಥಿತಿ ಎದುರಾಗಬಹುದು. ಈಗಾಗಲೇ ಲಾಕ್ ಡೌನ್ ನಿಂದ ತತ್ತರಿಸಿರುವ ಜನತೆಗೆ ನೀರಿನ ಕೊರತೆ ಎದುರಾದರೆ ಎಲ್ಲರಿಗೂ ತೊಂದರೆಯಾಗುತ್ತದೆ .

ಇದರ ಜೊತೆಗೆ ಮೈದಾಳ ಕೆರೆಯಲ್ಲಿ ಸಂಗ್ರಹವಾಗಿದ್ದ ಮಳೆಯ ನೀರನ್ನು ಸಂಸ್ಕರಿಸಿ ಬಳಕೆ ಮಾಡಲಆಗುತ್ತಿದ್ದು. ಈ ಕೆರೆಯ ನೀರು ಕೂಡ ಕೆಲವೇ ದಿನಗಳಲ್ಲಿ ಖಾಲಿಯಾಗುವುದು ಆತಂಕಕ್ಕೀಡು ಮಾಡಿದೆ. ನೀರಿಗಾಗಿ ತೀವ್ರವಾದ ಕೊರತೆಯುಂಟಾದರೆ ಕೊಳವೆ ಬಾವಿಗಳನ್ನು ಕೊರೆಸಿ ಟ್ಯಾಂಕರ್ ಮೂಲಕ ಪೂರೈಕೆ ಮಾಡಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ನೀರನ್ನು ಪಡೆಯಲು ವ್ಯವಸ್ಥೆ ಮಾಡುವಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಸೂಕ್ತ ಕ್ರಮಗಳನ್ನು ತಗೆದುಕೊಳ್ಳಬೇಕೆಂದು  ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!