ಕೊರೊನಾ ಸಂಕಷ್ಟದಲ್ಲಿ ಸಮಾಜಮುಖಿಯಾಗಿ ಸಹಾಯ ಹಸ್ತ ಚಾಚಿದ ಮಾಜಿ ಶಾಸಕಡಾ.ರಫೀಕ್ ಅಹ್ಮದ್

 

ತುಮಕೂರು: ಮಹಾಮಾರಿ ಕೊರೋನಾ ಭಾರತದಲ್ಲಿ ಹಲವಾರು ಅವಾಂತರಗಳನ್ನು ಸೃಷ್ಟಿಸಿದೆ. ಕೊರೋನಾ ಚೈನ್‌ಲಿಂಕ್ ತುಂಡರಿಸಲು ಸರಕಾರ ತೆಗೆದುಕೊಂಡ ಲಾಕ್‌ಡೌನ್ ನರ‍್ಧಾರದಿಂದ ಸಂಕಷ್ಟಕ್ಕೆ ಒಳಗಾದ ಶ್ರಮಿಕರ‍್ಗಕ್ಕೆ ಹಲವಾರು ಜನರು ತಮ್ಮ ಕೈಲಾದ ಸಹಾಯವನ್ನು ಮಾಡುತ್ತಾ ಬಂದಿದ್ದು, ಅಂತಹವರಲ್ಲಿ ತುಮಕೂರು ನಗರದ ಮಾಜಿ ಶಾಸಕರು ಹಾಗೂ ಹೆಚ್.ಎಂ.ಎಸ್. ಶಿಕ್ಷಣ ಸಂಸ್ಥೆಯ ನರ‍್ದೇಶಕರೂ ಆದ ಡಾ. ರಫೀಕ್ ಅಹ್ಮದ್ ಅವರು ಒಬ್ಬರು.

 

೨೦೨೦ರ ಮಾರ್ಚ್ ತಿಂಗಳಲ್ಲಿ ಸರಕಾರ ಏಕಾಎಕಿ ಲಾಕ್‌ಡೌನ್ ಘೋಷಣೆ ಮಾಡಿದ ಸಂರ‍್ಭದಲ್ಲಿ ರ‍್ನಾಟಕದ ರಾಜ್ಯಧಾನಿ ಬೆಂಗಳೂರಿಗೆ ಹೆಬ್ಬಾಗಿಲಿನಂತಿರುವ ತುಮಕೂರು ಜಿಲ್ಲೆಯಲ್ಲಿ ಸಾವಿರಾರು ಜನರು ಅನ್ನ, ಆಹಾರವಿಲ್ಲದೆ ಪರದಾಡುವಂತಹ ಸ್ಥಿತಿ ನರ‍್ಮಾಣವಾಗಿತ್ತು. ತಮ್ಮದೆ ಸರಕಾರವಿದ್ದರೂ ಬಡವರಿಗೆ ಸಹಾಯಹಸ್ತ ಚಾಚಲು ಹಿಂದು, ಮುಂದು ನೋಡುತ್ತಿರು ವಂತಹ ಸಂರ‍್ಭದಲ್ಲಿ ಬಡವರಿಗೆ ಎರಡು ಹೊತ್ತಿನ ಊಟಕ್ಕೆ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಮೊದಲು ಬಡವರಿಗೆ ಅವರು ಇರುವಲ್ಲಿಗೆ ಆಹಾರದ ಪೊಟ್ಟಣಗಳನ್ನು ತಲುಪಿಸುವ ವ್ಯವಸ್ಥೆ ಮಾಡಿದವರು ಮಾಜಿ ಶಾಸಕರಾದ ಡಾ.ರಫೀಕ್ ಅಹ್ಮದ್ ರವರು.

 

 

 

ಲಾಕ್‌ಡೌನ್ ಘೋಷಣೆಯಾದ ದಿನದಿಂದ ಮುಗಿಯುವವರೆಗೂ ಪ್ರತಿದಿನ ೧೦೦೦ ಜನರಿಗೆ ಬೆಳಗಿನ ತಿಂಡಿ ಮತ್ತು ಮದ್ಯಾಹ್ನದ ಊಟವನ್ನು ಜನನಿಬೀಡ ಪ್ರದೇಶಗಳಿಗೆ ತೆಗೆದುಕೊಂಡು ಹೋಗಿ ಹಂಚುವ ಕೆಲಸವನ್ನು ಮಾಡಿದರು. ಅಲ್ಲದೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಆದೇಶದಂತೆ ನಗರ ಹಾಗೂ ಗ್ರಾಮೀಣ ಭಾಗದ ಜನರ ನೋವುಗಳಿಗೆ ಸ್ಪಂದಿಸಿದ ಡಾ.ರಫೀಕ್ ಅಹ್ಮದ್, ಆರೋಗ್ಯ ಹಸ್ತ ಎಂಬ ಕರ‍್ಯಕ್ರಮದ ಮೂಲಕ ಸುಮಾರು ೨ ಲಕ್ಷ ರೂಗಳನ್ನು ರ‍್ಚು ಮಾಡಿ, ಕರ‍್ಯರ‍್ತರು ಮನೆ ಮನೆಗೆ ಭೇಟಿ ನೀಡಿ, ಜಾಗೃತಿ ಮೂಡಿಸಿ ಜನರ ದೇಹದ ಉಷ್ಣಾಂಶ ಪರಿಶೀಲಿಸಲು ಅಗತ್ಯವಿರುವ ಪರಿಕರಗಳನ್ನು ಒದಗಿಸಿ ಕರ‍್ಯಕ್ರಮ ಯಶಸ್ವಿಯಾಗಲು ಸಹಕಾರ ನೀಡಿದ್ದಲ್ಲದೆ, ಸಾವಿರಾರು ಕುಟುಂಬಗಳಿಗೆ ಒಂದು ಮನೆಗೆ ಅಗತ್ಯವಿರುವ ದಿನಸಿ ಪದರ‍್ಥಗಳನ್ನು ನೀಡುವ ಮೂಲಕ ಬಡವರ ಹೊಟ್ಟೆ ತುಂಬಿಸುವ ಕೆಲಸ ಮಾಡಿದ್ದರು.

೨೦೨೧ ರಲ್ಲಿ ಕೋರೋನ ಎರಡನೇ ಅಲೆ ಕಾಣಿಸಿಕೊಂಡು, ಸರಕಾರ ಲಾಕ್‌ಡೌನ್ ಘೋಷಣೆ ಮಾಡಿದ ಸಂರ‍್ಭದಲ್ಲಿಯೂ ಈ ಹಿಂದಿನ ರ‍್ಷದಂತೆಯೇ ತಮ್ಮ ಸೇವಾ ಕರ‍್ಯವನ್ನು ಮುಂದುವರೆಸಿರುವ ಡಾ.ರಫೀಕ್ ಅಹ್ಮದ್, ಬಡವರಿಗೆ ದಿನಸಿ ಕಿಟ್ ವಿತರಿಸುವ ಗುರಿ ಹಾಕಿಕೊಂಡು, ಮಂಗಳಮುಖಿಯರು, ಅಂಧ ಮಕ್ಕಳು, ಅಂಗವಿಕಲರು, ಕೊಳಗೇರಿ ನಿವಾಸಿಗಳು, ಬೀದಿ ಬದಿ ವ್ಯಾಪಾರಿಗಳು, ಪೌರಕರ‍್ಮಿಕರು, ಛಾಯಾಗ್ರಾಹಕರಿಗೆ ಹೀಗೆ ಹಲವು ಸಮುದಾಯ ಸಂಘಟನೆಗಳನ್ನು ಗುರುತಿಸಿ, ಅವರಿಗೆ ದಿನಸಿ ಕಿಟ್ ವಿತರಿಸುವ ಮೂಲಕ ತಮ್ಮ ಸೇವೆಯನ್ನು ಮುಂದುವರೆಸಿದ್ದಾರೆ. ಹಿಂದಿನ ವರ್ಷದಂತೆ ಈ ಬಾರಿಯೂ ಪ್ರತಿದಿನ ಸುಮಾರು ೫೦೦ ಸಂಕಷ್ಟದಲ್ಲಿರುವ ಜನರಿಗೆ ತಯಾರಿಸಿದ ಆಹಾರ ಪೊಟ್ಟಣಗಳನ್ನು ಹಂಚಿರುತ್ತಾರೆ

ಕೋರೋನ ವಾರಿಯರ್ಸ್ ಎಂದು ಕರೆಯವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕರ‍್ಯನರ‍್ವಹಿಸುವ ವೈದ್ಯರು, ನರ್ಸ್ಗಳು, ಕ್ಲಿನಿಂಗ್ ಸಿಬ್ಬಂದಿಗೆ ಅಗತ್ಯವಿರುವ ಪಿಪಿಇ ಕಿಟ್, ಸ್ಯಾನಿಟೈಜರ್, ಮಾಸ್ಕ್ ಸೇರಿದಂತೆ ಅಗತ್ಯ ಪರಿಕರಗಳನ್ನು ವಿತರಿಸುವ ಮೂಲಕ ಅವರಲ್ಲಿ ಆತ್ಮಸ್ಥೆöರ‍್ಯ ತುಂಬುವ ಕೆಲಸವನ್ನು ಡಾ.ರಫೀಕ್ ಅಹ್ಮದ್ ಮಾಡುತ್ತಿದ್ದು, ಇನ್ನಿತರ ಕೊರೋನಾ ವಾರಿಯರ್ಸ್ಗಳಿಗೂ ಅಗತ್ಯವಿರುವ ಮಾಸ್ಕ್, ಸ್ಯಾನಿಟೈಜರ್, ಪಿಪಿಇ ಕಿಟ್ ನೀಡುವ ಮೂಲಕ ಸಹಾಯಹಸ್ತ ಚಾಚಿದ್ದಾರೆ

 

ಅಲ್ಲದೆ ಕೆಲವು ಸಂತ್ರಸ್ತರ ಕರೆಗಳಿಗೆ ಸ್ಪಂದಿಸಿ, ಅವರಿಗೆ ಬೆಡ್ ವ್ಯವಸ್ಥೆ ಮಾಡಿಸುವುದು. ಹಾಗೂ ಅಗತ್ಯವಿರುವ ಔಷಧಿಗೆ ತಮ್ಮ ಕೈಲಾದ ನೆರವು ನೀಡುವುದನ್ನು ಮುಂದುವರೆಸಿದ್ದಾರೆ.

 

ಸರಕಾರ ವ್ಯಾಕ್ಸಿನೇಷನ್ ಹಾಕಲು ಆರಂಭ ಮಾಡಿದ ನಂತರ ಸ್ವತಹಃ ತಾವೇ ಲಸಿಕೆ ಪಡೆಯುವ ಮೂಲಕ ಇತರರು ಲಸಿಕೆ ಪಡೆಯುವಂತೆ ಜಾಗೃತಿ ಮೂಡಿಸುವ ಕೆಲಸ ಮಾಡಿದ ಡಾ.ರಫೀಕ್ ಅಹ್ಮದ್, ಕೋರೋನ ಮಹಾಮಾರಿಯಿಂದ ಪೋಷಕರನ್ನು ಕಳೆದುಕೊಂಡು ಆನಾಥವಾಗಿರುವ ಮಕ್ಕಳಿಗೆ ಒಂದನೇ ತರಗತಿಯಿಂದ ಇಂಜಿನಿಯರಿಂಗ್ ಪದವಿಯವರಗೆ ಹೆಚ್.ಎಂ.ಎಸ್. ವಿದ್ಯಾಸಂಸ್ಥೆಯಲ್ಲಿ ಉಚಿತ ಶಿಕ್ಷಣ ನೀಡಲು ನರ‍್ಧರಿಸಿದ್ದು,

ಅಗತ್ಯವಿರುವವರು ಸಂಸ್ಥೆಯನ್ನು ಸಂರ‍್ಕಿಸಿದರೆ ಅವರಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ ತುಮಕೂರಿನ ಮಾಜಿ ಶಾಸಕ ರ‍್ಯಾಂಕ್ ನಜೀರ್ ಚಾರಿಟಬಲ್ ಟ್ರಸ್ಟ್ ಮೂಲಕ ಬಡ ವಿದ್ಯರ‍್ಥಿಗಳಿಗೆ ವಿದ್ಯರ‍್ಥಿ ವೇತನ ವಿತರಣೆ, ನೋಟ್‌ಪುಸ್ತಕ ಹಾಗೂ ಶುಲ್ಕು ಭರಿಸುವ ಕರ‍್ಯವನ್ನು ಮಾಡುತ್ತಿದ್ದಾರೆ.

ಕೋರೋನ ಲಾಕ್‌ಡೌನ್‌ನಿಂದ ಹೆದ್ದಾರಿಗಳಲ್ಲಿ ಸ್ಥಾಪಿಸಿರುವ ಚೆಕ್‌ಪೋಸ್ಟ್ಗಳಲ್ಲಿ ಕರ‍್ಯನರ‍್ವಹಿಸುತ್ತಿರುವ ಕೊರೋನಾ ವಾರಿಯರ್ಸ್ಗಳಿಗೆ ತಂಪು ಪಾನೀಯ, ಕುಡಿಯುವ ನೀರು ವಿತರಿಸುವುದು, ಜಿಲ್ಲಾಡಳಿತಕ್ಕೆ ಅಗತ್ಯವಿರುವ ಸಲಹೆಗಳನ್ನು ನೀಡಿ, ಲಾಕ್‌ಡೌನ್ ಸಮಯದಲ್ಲಿ ಜನರಿಗೆ ಸಹಾಯ ಹಸ್ತ ಚಾಚುವ ಕರ‍್ಯದಲ್ಲಿ ಡಾ.ರಫೀಕ್ ಅಹ್ಮದ್ ತೊಡಗಿದ್ದು, ಬಡವರ ಸಂಕಷ್ಟಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!