ಸಮುದಾಯದ ಸಭೆಯಲ್ಲಿ ಭಾವುಕರಾದ ಮಾಜಿ ಸಚಿವ ಸೊಗಡು ಶಿವಣ್ಣ ಕೊನೆ ಚುನಾವಣೆ ಗೆ ಬೆಂಬಲಿಸಲು ಮನವಿ.
ತುಮಕೂರು – 2023 ರ ಪತ್ರಿಕ ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧಿಸಿರುವ ಮಾಜಿ ಸಚಿವ ಸೊಗಡು ಶಿವಣ್ಣ ರವರು ತುಮಕೂರಿನಲ್ಲಿ ನಡೆದ ವೀರಶೈವ ಸಮುದಾಯದ ಪ್ರಮುಖರು ಹಾಗೂ ಹಿತೈಷಿಗಳ ಸಭೆಯಲ್ಲಿ ಭಾವುಕರಾದ ಘಟನೆಗೆ ಸಾಕ್ಷಿಯಾಗಿದೆ.
ಇನ್ನು ತಮ್ಮ ಜೀವಮಾನದ ಕೊನೆ ಚುನಾವಣೆ ಯಾಗಿದ್ದು ಸ್ವಾಭಿಮಾನದ ಸಂಕೇತವಾಗಿ ಈ ಬಾರಿಯ ಚುನಾವಣೆಗೆ ಪಕ್ಷೇತರಾಗಿ ಸ್ಪರ್ಧಿಸಿದ್ದು ತಮ್ಮ ಸ್ಪರ್ಧೆಗೆ ಈ ಬಾರಿ ತುಮಕೂರು ನಗರದ ಆದ್ಯಂತ ವ್ಯಾಪಕ ಬೆಂಬಲ ವ್ಯರ್ಥವಾಗಿದ್ದು ಜಾತಿ ಮತ ಹೊರತುಪಡಿಸಿ ಎಂದು ಸಮುದಾಯದವರು ಪಕ್ಷೇತರರಾಗಿ ಸ್ಪರ್ಧಿಸುತ್ತಿರುವ ತನಗೆ ಎಲ್ಲಾ ಸಮುದಾಯದ ಬೆಂಬಲ ವ್ಯಕ್ತವಾಗುತ್ತಿರುವುದನ್ನ ಕಂಡು ಭಾವುಕರಾದ ಸೊಗಡು ಶಿವಣ್ಣರವರು ಸಮುದಾಯದ ಸಭೆಯಲ್ಲಿ ಕಣ್ಣೀರು ಹಾಕಿದ್ದಾರೆ.
ತುಮಕೂರಿನ ಖಾಸಗಿ ಸಭಾಭವನದಲ್ಲಿ ನಡೆದ ವೀರಶೈವ ಸಮುದಾಯದ ಮುಖಂಡರು ಈ ಬಾರಿ ಮಾಜಿ ಸಚಿವ ಸೊಗಡು ಶಿವಣ್ಣರವರನ್ನ ಬೆಂಬಲಿಸುವ ಮೂಲಕ ತುಮಕೂರು ನಗರದ ಸರ್ವತೋಮುಖ ಅಭಿವೃದ್ಧಿಗೆ ಸಗಡು ಶಿವಣ್ಣ ಅಗತ್ಯವಾಗಿದ್ದು ಈ ಬಾರಿ ಅವರಿಗೆ ಸಮುದಾಯದ ಪರವಾಗಿ ಎಲ್ಲರೂ ಬೆಂಬಲಿಸಲು ಮನವಿ ಮಾಡಿದ್ದಾರೆ.
ಇನ್ನು ಸಭೆಯಲ್ಲಿ ವೀರಶೈವ ಸಮುದಾಯದ ಮುಖಂಡರಾದ ಶಿವಪ್ರಸಾದ್ ರುದ್ರಪ್ಪ ಆಶಾ ಪ್ರಸನ್ನ ಕುಮಾರ್ ಸೇರಿದಂತೆ ಸುಮಾರು 400ಕ್ಕೂ ಹೆಚ್ಚು ಸಮುದಾಯದ ಮುಖಂಡರು ಹಾಗೂ ಶಿವಣ್ಣರವರ ಹಿತೈಷಿಗಳು ಸಭೆಯಲ್ಲಿ ಪಾಲ್ಗೊಂಡು ಓಮ್ಮತದ ನಿರ್ಣಯ ಕೈಗೊಂಡು ಈ ಬಾರಿಯ ಚುನಾವಣೆಗೆ ಸಚಿವ ಸೊಗಡು ಶಿವಣ್ಣರವರನ್ನ ಬೆಂಬಲಿಸಲು ನಿರ್ಣಯ ಕೈಗೊಂಡರು.