ಹುಬ್ಬಳ್ಳಿ: ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಇದ್ದಾಗಲೇ ರೈತರ ಸಂಕಷ್ಟಕ್ಕೆ ಸ್ಪಂದಿಸದ ಬಿಜೆಪಿ ಸರ್ಕಾರ. ಇದೀಗ ನೂತನ ನಾಯಕತ್ವ ಬದಲಾವಣೆ ನಂತರ ಈ ಸರ್ಕಾರದಿಂದ ಏನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2019 ರಲ್ಲಿ ರಾಜ್ಯದಲ್ಲಿ ನೆರೆ ಬಂದಾಗ ಸಾವಿರಾರು ಕೋಟಿ ಹಾನಿಯಾಗಿದೆ. ಜನರು ಮನೆ ಮಠ ಕಳದುಕೊಂಡಿದ್ದಾರೆ. ಅಲ್ಲದೇ ನೂರಾರು ಜನ ಸತ್ತಿದ್ದಾರೆ. ಆ ವೇಳೆ ಜಾರಿ ಮಾಡಿದ ಪರಿಹಾರವೇ ಈವರೆಗೆ ಜನರಿಗೆ ಸಿಕ್ಕಿಲ್ಲ. ಎಲ್ಲಿ ಹೋದರಲ್ಲಿ ಜನರು ಪರಿಹಾರ ಕೇಳುತ್ತಿದ್ದಾರೆ. ಪರಿಹಾರ ವಿಷಯದಲ್ಲಿ ರಾಜ್ಯದ 25 ಎಮ್ ಪಿಗಳು ಕೂಡಾ ಕೈಕಟ್ಟಿ ಕುಳಿತ್ತಿದ್ದಾರೆ. ಈ ಸರ್ಕಾರ ನೆರೆ, ಕೋರೋನಾ ವಿಷಯದಲ್ಲಿ ಸಂಪೂರ್ಣ ವಿಫಲವಾಗಿದೆ. ಸುಳ್ಳು ಹೇಳುವ ಬಿಜೆಪಿ ಸರ್ಕಾರ ಜನರಿಗೆ ಅನ್ಯಾಯ ಮಾಡಿದೆ ಎಂದು ಹರಿಹಾಯ್ದರು.