ಶಿಕ್ಷಣ ಸಚಿವ ಬಿ. ಸಿ ನಾಗೇಶ್ ಹುಡುಕಿಕೊಡಲು ಸಿ.ಎಂ ಬೊಮ್ಮಾಯಿಗೆ ಪತ್ರ .
ತುಮಕೂರು_ಹಲವು ವರ್ಷಗಳಿಂದ ರಾಜ್ಯದಲ್ಲಿ ಇರುವ ಸರ್ಕಾರಿ ಶಾಲೆಗಳು ತೀವ್ರ ದುಸ್ಥಿತಿಯಲ್ಲಿ ಇದ್ದು ವಿದ್ಯಾರ್ಥಿಗಳು ಶಾಲೆಗೆ ತೆರಳಿ ವಿದ್ಯಾಭ್ಯಾಸ ಮಾಡಲು ಹೆದರುವಂತ ಪರಿಸ್ಥಿತಿ ನಿರ್ಮಾಣವಾಗಿದ್ದು ಇಂತಹ ಸ್ಥಿತಿಯಲ್ಲಿಇರುವ ಕಾರಣ ರಾಜ್ಯದ ಶಿಕ್ಷಣ ಸಚಿವರನ್ನು ಹುಡುಕಿಕೊಡಿ ಎಂದು ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರದ ಸಿದ್ದಲಿಂಗೆಗೌಡರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದ ಘಟನೆ ವರದಿಯಾಗಿದೆ.
ಪ್ರಸ್ತುತ ತುಮಕೂರು ಜಿಲ್ಲೆಯಲ್ಲಿನ ನೂರಾರು ಸರ್ಕಾರಿ ಶಾಲೆಗಳ ಸಾವಿರಾರು ಕೊಠಡಿಗಳು ಬೀಳುತ್ತಿವೆ ಕೆಲ ಶಾಲೆಗಳು ಸೋರುತ್ತವೆ ವಿದ್ಯಾರ್ಥಿಗಳು ಅಸುರಕ್ಷತೆಯಲ್ಲಿ ಜೀವ ಹಿಡಿದು ವ್ಯಾಸಂಗ ಮಾಡುತ್ತಿದ್ದಾರೆ ಬೆಳಗಾವಿಯ ಯಮಕನಮರಡಿಯಲ್ಲಿ ವಿದ್ಯಾರ್ಥಿಗಳು ಸಾವನ್ನಪ್ಪಿದಂತೆ ತುಮಕೂರು ಜಿಲ್ಲೆಯಲ್ಲೂ ಸಹ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಾವು ಆಗೆ ಆಗುತ್ತದೆ ಇದರಿಂದ ಸರ್ಕಾರಿ ಶಾಲೆಗಳ ಸುಧಾರಣೆಯಾಗಲು ತುರ್ತಾಗಿ ಶಿಕ್ಷಣ ಸಚಿವರನ್ನು ಹುಡುಕಿ ಕೊಡುವಂತೆ ಪತ್ರದಲ್ಲಿ ಮನವಿ ಮಾಡಲಾಗಿದೆ.
ರಾಜ್ಯದಲ್ಲಿನ ಹಲವು ಸರ್ಕಾರಿ ಶಾಲೆಗಳು ದುಸ್ಥಿತಿ ತಲುಪಿದ್ದು ಅವುಗಳ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು ಎಂದು ರಾಜ್ಯದ್ಯಂತ ಹಲವು ಸಂಘಟನೆಗಳು ಸಾರ್ವಜನಿಕರು ಪೋಷಕರು ಒತ್ತಾಯ ಮಾಡುತ್ತಲೇ ಬಂದಿದ್ದಾರೆ.
ವರದಿ_ ಮಾರುತಿ ಪ್ರಸಾದ್ ತುಮಕೂರು.