ಸರ್ಕಾರಿ ನೌಕರರ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಉದ್ಘಾಟನೆ ಮಾಡಿದ ಡಿವೈಎಸ್ಪಿ ಸೋಮೇಗೌಡ
ಹನೂರು :- ತಾಲೂಕಿನಲ್ಲಿ 24 ಮತ್ತು 25 ರಂದು ಹನೂರು ತಾಲೂಕು ಕ್ರಿಕೆಟ್ ಕ್ಲಬ್ ವತಿಯಿಂದ ಆಯೋಜಿಸಿರುವ ಸರ್ಕಾರಿ ನೌಕರರ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿವಿಧ ಇಲಾಖೆಯಾ ಸರ್ಕಾರಿ ನೌಕರರ ಜೊತೆ ಭಾಗಿಯಾಗಿ ಕೊಳ್ಳೇಗಾಲ ತಾಲೂಕು ಡಿವೈಎಸ್ ಪಿ ಸೋಮೇಗೌಡ ಹಾಗೂ ಹನೂರು ಪಟ್ಟಣ ಪೊಲೀಸ್ ಠಾಣಿಯ ಆರಕ್ಷಕ ನೀರಿಕ್ಷಕರು ಶಶಿಕುಮಾರ್ ಉದ್ಘಾಟನೆ ಮಾಡಿ ಚಾಲನೆ ಮಾಡಿದರು. ಇದೆ ವೇಳೆ ಮಾತನಾಡಿದ ಡಿವೈಎಸ್ ಪಿ ಸೋಮೇಗೌಡ ರವರು. ಮೊದಲನೇ ಬಾರಿಗೆ ಹನೂರು ಕ್ರಿಕೆಟ್ ಕ್ಲಬ್ ವತಿಯಿಂದ ಸರ್ಕಾರಿ ನೌಕರರ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿರುವುದು ತುಂಬಾ ಸಂತೋಷದ ವಿಷಯ.
ಹಾಗೂ ಎಲ್ಲಾ ಇಲಾಖೆಯ ಸರ್ಕಾರಿ ನೌಕರ ಸಿಬ್ಬಂದಿಗಳು ಹಲವಾರು ಒತ್ತಡಗಳನ್ನ ಎದುರಿಸುತ್ತಾ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿರುವುದು ತುಂಬಾ ಒಳ್ಳೆಯ ವಿಚಾರ. ಕ್ರೀಡೇ ಎಂಬುದು ಮನುಷ್ಯನ ದೇಹವನ್ನು ಸದೃಢ ಮತ್ತು ಅರೋಗ್ಯಕರವಾಗಿ ನಿರ್ಮಿಸಲು ತುಂಬಾ ಉಪಯೋಗಕಾರಿಯಾಗಿದೆ. ತುಂಬಾ ಅತ್ಯಗತ್ಯವಾಗಿದೆ.ಇದರ ಜೊತೆಗೆ ವಿವಿಧ ಕ್ರೀಡೆಗಳಾದ ಫುಟ್ಬಾಲ್ ವಾಲಿಬಾಲ್ ಹಾಕಿ ಮುಂತಾದ ಕ್ರೀಡೆಗಳನ್ನು ಮುಂದಿನ ದಿನಗಳಲ್ಲಿ ಸರ್ಕಾರಿ ನೌಕರರಿಗೆ ಆಯೋಜಿಸವಂತಾಗಲಿ ಎಂದು ಪ್ರಸ್ತಾಪಿಸಿದರು.
ಹಾಗೂ ಇದೆ ವೇಳೆಯಲ್ಲಿ ಹನೂರು ಕ್ರಿಕೆಟ್ ಕ್ಲಬ್ ವತಿಯಿಂದ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ್ದ ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವ ಹತ್ತಕ್ಕೂ ಹೆಚ್ಚು ಮಕ್ಕಳಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ವಿವಿಧ ಸರ್ಕಾರಿ ಇಲಾಖೆಯ ನೌಕರ ಸಿಬ್ಬಂದಿಗಳಿಗೆ ಹಾಗೂ ಹನುರೂ ತಾಲೋಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಮಾದೇಶ್ ಗೌಡ ರವರಿಗೂ ಸನ್ಮಾನಿಸಿ ಗೌರವಿಸಲಾಯಿತು.
ಇನ್ನು ಇದೆ ಸಂದರ್ಭದಲ್ಲಿ ಗುರುಸ್ವಾಮಿ ನೌಕರರ ಸಂಘದ ಅಧ್ಯಕ್ಷರು ನೌಕರರ ಸಂಘದ ಖಜಾಂಚಿ ಚಂದ್ರಶೇಖರ್ ಶಾಗ್ಯ ಗ್ರಾಮದ ಪಿಡಿಓ ರಾಮು ಅರಣ್ಯಧಿಕಾರಿಗಳು ಪ್ರವೀಣ್ ನಿರಂಜನ್ ಹನೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಮಾದೇಶ್ ಗೌಡ ಹನೂರು ವಲಯ ಅರಣ್ಯ ಅದಿಕಾರಿಗಳು ಪ್ರವೀಣ್. ಶಿಕ್ಷಕರು ಅಶೋಕ್. ಹನೂರು ಕ್ರಿಕೆಟ್ ಕ್ಲಬ್ ಅಧ್ಯಕ್ಷ ಅಭಿಲಾಶ್.ಗೌರವಾಧ್ಯಕ್ಷ ಮನ್ಸೂರ್, ಕಾರ್ಯದರ್ಶಿ ರಿಜ್ವಾನ್ ಖಝಾಂಚಿ ರಿಯಾಜ್ ,ಶಿವು,ಫಾಜಿಲ್ ಚೇತನ್ ಸೇರಿದಂತೆ. ಹನೂರು ತಾಲೂಕಿನ ವಿವಿಧ ಗ್ರಾಮದ ಕ್ರೀಡಾಭಿಮಾನಿಗಳು ಭಾಗವಹಿಸಿದ್ದರು.
ವರದಿ :- ನಾಗೇಂದ್ರ ಪ್ರಸಾದ್