ಅಂಗನವಾಡಿ ಕೇಂದ್ರಕ್ಕೆ ನೂತನ ಕಾರ್ಯಕರ್ತೆ ನೇಮಿಸಲು ದಲಿತ ಸ್ವಾಭಿಮಾನಿ ಸಂಘರ್ಷ ಸಮಿತಿ ಒತ್ತಾಯ.
ಶಿರಾ ತಾಲ್ಲೂಕು ಮೇಲ್ಕುಂಟೆ ಗ್ರಾಮ ಪಂಚಾಯಿತಿಯಲ್ಲಿ ಬರುವ ತಾಡಿಪಾಳ್ಯ ಅಂಗನವಾಡಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆ ಸರಿಯಾಗಿ ಕೆಲಸ ನಿರ್ವಹಿಸದೆ ಬೇಜವಾಬ್ದಾರಿಯಾಗಿ ನಡೆದುಕೊಳ್ಳುತ್ತಿದ್ದು,ಹಾಗೂ ಸ್ಥಳೀಯ ಅಂಗನವಾಡಿಗೆ ಸರಬರಾಜಾಗುತ್ತಿರುವ ಆಹಾರ ಪದಾರ್ಥಗಳನ್ನು ಸರಿಯಾಗಿ ವಿತರಿಸದೆ ಕರ್ತವ್ಯ ಲೋಪವನ್ನು ಎಸಗಿದ್ದಾರೆ ಹಾಗೂ ಮಕ್ಕಳ ಪೋಷಣೆಯಲ್ಲೂ ಬೇಜವಾಬ್ದಾರಿಯಾಗಿ ನಡೆದುಕೊಳ್ಳುತ್ತಿರುವ ಅಂಗನವಾಡಿ ಕಾರ್ಯಕರ್ತೆ ಗೆ ಸ್ಥಳೀಯ ತಾಲೂಕು ಅಧಿಕಾರಿಯಾಗಿರುವ ಸಿಡಿಪಿಓ ರವರು ಅಕ್ರಮವಾಗಿ ಬೆಂಬಲ ನೀಡುತ್ತಾ ಗ್ರಾಮಸ್ಥರ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದು ಕೂಡಲೇ ಸ್ಥಳೀಯವಾಗಿ ಕೆಲಸ ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆ ಯನ್ನು ವಜಾಗೊಳಿಸಿ ನೂತನ ಅಂಗನವಾಡಿ ಕಾರ್ಯಕರ್ತೆ ನೇಮಿಸಲು ದಲಿತ ಸ್ವಾಭಿಮಾನಿ ಸಂಘರ್ಷ ಸಮಿತಿಯ ರಾಜ್ಯದ್ಯಕ್ಷರ ನೇತೃತ್ವದಲ್ಲಿ ತುಮಕೂರು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷರಾದ ಬಂಡೆ ಕುಮಾರ್ ರವರು ಸ್ಥಳೀಯ ಸಿಡಿಪಿಓ ರವರಿಗೆ ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿದರೂ ಗ್ರಾಮಸ್ಥರ ವಿರುದ್ಧವಾಗಿ ಅಕ್ರಮ ಎಸಗಿರುವ ಅಂಗನವಾಡಿ ಕಾರ್ಯಕರ್ತಗೆ ಬೆಂಬಲ ನೀಡುತ್ತಾ ಗ್ರಾಮಸ್ಥರ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಹಾಗಾಗಿ ಕೂಡಲೇ ಆರೋಪ ಹೊತ್ತಿರುವ ಅಂಗನವಾಡಿ ಕಾರ್ಯಕರ್ತೆ ಯನ್ನು ಬದಲಾವಣೆ ಮಾಡಿ ಕಾನೂನು ರೀತಿಯಲ್ಲಿ ನೂತನ ಕಾರ್ಯಕರ್ತೆಯನ್ನು ನೇಮಿಸಬೇಕು ಇಲ್ಲವಾದರೆ ಸಮಿತಿಯ ವತಿಯಿಂದ ಉಗ್ರ ಹೋರಾಟಕ್ಕೆ ಮಾಡಲಾಗುವುದು ಎಂದು ಅಧ್ಯಕ್ಷರಾದ ಬಂಡೆ ಕುಮಾರ್ ರವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಶ್ರೀಧರ್ ರವರಿಗೆ ದಲಿತ ಸ್ವಾಭಿಮಾನಿ ಸಂಘರ್ಷ ಸಮಿತಿಯ ವತಿಯಿಂದ ಮನವಿ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಮುಖಂಡರಾದ ಡ್ಯಾ ಗೇರಹಳ್ಳಿ ವಿರೂಪಾಕ್ಷ ,ನಾಗೇಶ್, ರಾಮಮೂರ್ತಿ, ಶಿವರಾಜು, ರಘು ಹಾಗೂ ತಾಡಿಪಾಳ್ಯ ಗ್ರಾಮಸ್ಥರಾದ ಗಾಯಿತ್ರಮ್ಮ, ಲಕ್ಷ್ಮಮ್ಮ, ಸಣ್ಣತಾಯಮ್ಮ, ಉಮಾದೇವಿ ಸೇರಿದಂತೆ ಹಲವರು ಹಾಜರಿದ್ದರು