ತುಮಕೂರು ನಗರದ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳ ಪುನಶ್ಚೇತನ ಸಭೆಯನ್ನು ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷರಾದ ಪಿಎಂ ರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಈ ಸಮಾರಂಭವನ್ನು ತುಮಕೂರು ತಾಲೂಕು ಗೌರವ ಅಧ್ಯಕ್ಷರಾದ ಟಿ ಕೆ ನರಸಿಯಪ್ಪನವರು ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ ಸ್ವತಂತ್ರ ಬಂದು ಎಪ್ಪತ್ತೈದು ವರ್ಷ ಕಳೆದರೂ ಜಾತಿಯತೆ ಅಸ್ಪೃಶ್ಯತೆಯಂತಹ ಅನಿಷ್ಠ ಪದ್ಧತಿ ತೊಡಗಲಿಲ್ಲ ಎಸ್ಸಿಎಸ್ಟಿ ಜನಾಂಗದ ರಾಜಕೀಯ ,ಸಹಕಾರಿ, ನೌಕರಿ, ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಹುದ್ದೆಯಲ್ಲಿದ್ದರು ಸಮಾನತೆ ಸಿಕ್ಕಿಲ್ಲ ಆದ್ದರಿಂದ ಎಸ್ಸಿಎಸ್ಟಿ ಜನಾಂಗಗಳು ಸಂಘಟಿತರಾಗುವ ಮೂಲಕ ಜಾಗೃತರಾಗಬೇಕು ಎಂದು ಕರೆನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ಪಿ. ಎನ್. ರಾಮಯ್ಯನವರು ಮಾತನಾಡಿ ಸಂವಿಧಾನದ ಹಕ್ಕಿನಡಿಯಲ್ಲಿ ರಾಜಕೀಯದಲ್ಲಿ , ಸರಕಾರಿ ನೌಕರಿಯಲ್ಲಿ ಶೇಕಡ 18ರಷ್ಟು ಮೀಸಲಾತಿ ಕೊಟ್ಟಿಲ್ಲ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ತುಂಬಾ ಅನ್ಯಾಯವಾಗುತ್ಹಿದೆ ಕೆಲವು ರಾಜ್ಯಗಳಲ್ಲಿ ಮೀಸಲಾತಿಯನ್ನು ತೆಗೆದುಹಾಕಿದ್ದು ಇನ್ನೂ ಕೆಲವು ರಾಜ್ಯಗಳಲ್ಲಿ ಮೀಸಲಾತಿ ತಡೆಯುವ ಪ್ರಯತ್ನಗಳು ನಡೆಯುತ್ತಿವೆ. ಗ್ರಾಮಾಂತರ ಕ್ಷೇತ್ರದಲ್ಲಿ ಜಾತಿ ತಾರತಮ್ಯದಿಂದ ಜೀವಭಯದಿಂದ ಬದುಕುತ್ತಿದ್ದಾರೆ ಎಸ್ಸಿ-ಎಸ್ಟಿ ಆಯೋಗ, ಮಾನವ ಹಕ್ಕು ಆಯೋಗ ಎಸ್ಸಿ-ಎಸ್ಟಿ ನ್ಯಾಯಾಲಯಗಳ ನ್ಯಾಯಾಧೀಶರು ಈ ಜನಾಂಗಕ್ಕೆ ನ್ಯಾಯಾಲಯ ಮೂಲಕ ಧೈರ್ಯ ತುಂಬುವ ಕೆಲಸ ಮಾಡಬೇಕಾಗಿದೆ ಎಸ್ಸಿಎಸ್ಟಿ ಜನಾಂಗ ರಾಜಕೀಯ ಕ್ಷೇತ್ರದಲ್ಲಿ ಜಾಗೃತರಾಗಬೇಕು ಚುನಾವಣೆಗಳಲ್ಲಿ ಮತದಾನ ಮಾಡುವಾಗ ಎಚ್ಚರಿಕೆಯಿಂದ ಮತದಾನ ಮಾಡಬೇಕು ಎಸ್ಸಿ-ಎಸ್ಟಿ ಜನಾಂಗವನ್ನು ನಿರ್ಲಕ್ಷಿಸಿದ ರಾಜಕೀಯ ಮುಖಂಡರನ್ನು ಸೋಲಿಸಬೇಕು
ಎಸ್ಸಿಎಸ್ಟಿ ಜನಾಂಗದ ಎಲ್ಲಾ ಸಂಘಟನೆಗಳು ಒಗ್ಗಟ್ಟಾಗಿ ಜಾತಿ ನಿರ್ಮೂಲನೆ ,ಅಸ್ಪೃಶ್ಯತೆ ,ಮೂಢನಂಬಿಕೆ ತೊಡೆದುಹಾಕಬೇಕು ಕಾಲೋನಿಗಳಲ್ಲಿ ಸ್ಮಶಾನ ಜಾಗಕ್ಕಾಗಿ ಒತ್ತಾಯ, ಮನೆ ಇಲ್ಲದೆ ಇರುವ ಜನಾಂಗಕ್ಕೆ ಸೈಟ್ ಮಂಜೂರಾತಿಗೆ ಹಾಗೂ ಸೈಟ್ ಇದ್ದು ಮನೆ ಕಟ್ಟಿಕೊಳ್ಳುವುದಕ್ಕೆ ಸರ್ಕಾರದಿಂದ ಅನುದಾನಕ್ಕೆ ಒತ್ತಾಯಿಸಿ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಕೊಡಿಸಲು ಎಸ್ಸಿಎಸ್ಟಿ ಮುಖಂಡರು ಮುಂದಾಗಬೇಕು ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷರಾದ ಪಿಎಂ ರಾಮಯ್ಯನವರು ಮನವಿ ಮೂಲಕ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರಾದ ಎಚ್ ಬಿ ರಾಜೇಶ್, ಗೌರವಾಧ್ಯಕ್ಷರಾದ ಟಿ ಕೆ ನರಸಿಯಪ್ಪ, ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷರಾದ ಟಿ.ಎನ್ ಮಧು, ನಗರ ಉಪಾಧ್ಯಕ್ಷರಾದ ಮಾರುತಿ ಸೇರಿದಂತೆ ವಿವಿಧ ತಾಲೂಕು ಘಟಕದ ಪದಾಧಿಕಾರಿಗಳು, ಮುಖಂಡರು ಹಾಜರಿದ್ದರು