ಚಾಲಕನ ಅಜಾಗರೂಕತೆ ಹಾಗೂ ಓವರ್ಲೋಡ್ ಬಸ್ ದುರಂತಕ್ಕೆ ಕಾರಣ _ಸಚಿವ ಶ್ರೀರಾಮುಲು.

ಚಾಲಕನ ಅಜಾಗರೂಕತೆ ಹಾಗೂ ಓವರ್ಲೋಡ್ ಬಸ್ ದುರಂತಕ್ಕೆ ಕಾರಣ _ಸಚಿವ ಶ್ರೀರಾಮುಲು.

 

ತುಮಕೂರು_ಶನಿವಾರ ಪಾವಗಡದಲ್ಲಿ ನಡೆದ ಬಸ್ ದುರಂತಕ್ಕೆ ಚಾಲಕನ ಅಜಾಗರೂಕತೆ ಹಾಗೂ ಬಸ್ ಓವರ್ಲೋಡ್ ಆದಕಾರಣ ಬಸ್ ಅಪಘಾತಕ್ಕೀಡಾಗಿದೆ ಎಂದು ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

 

 

ಬಸ್ ದುರಂತದಲ್ಲಿ ಗಾಯಗೊಂಡ ಗಾಯಾಳುಗಳನ್ನು ಶನಿವಾರ ಸಂಜೆ ಶ್ರೀರಾಮುಲುರವರು ತುಮಕೂರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು ಇದೇ ಸಂದರ್ಭದಲ್ಲಿ ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳಿಗೆ ಸಚಿವ ಶ್ರೀರಾಮುಲು ರವರು ವೈಯಕ್ತಿಕವಾಗಿ ತಲಾ 25 ಸಾವಿರ ರೂಗಳ ಹಣವನ್ನು ನೀಡಿದರು.

 

 

ಇದೇ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದು ಘಟನೆ ನಡೆದ ಸ್ಥಳವನ್ನು ಕೂಡಲೇ ಅಪಘಾತ ವಲಯ(BLACK SPOT) ಎಂದು ಘೋಷಣೆ ಮಾಡಿರುವುದಾಗಿ ತಿಳಿಸಿದ್ದಾರೆ.

 

 

ಘಟನೆಯಲ್ಲಿ ಈಗಾಗಲೇ ಆರು ಮಂದಿ ಮೃತಪಟ್ಟಿದ್ದು ಅಪಘಾತದಲ್ಲಿ ಮೃತಪಟ್ಟ ಗಾಯಾಳುಗಳಿಗೆ ಸರ್ಕಾರದಿಂದ ತಲಾ ಐದು ಲಕ್ಷ ರೂಗಳ ಪರಿಹಾರವನ್ನು ನೀಡಲಾಗುವುದು ಎಂದರು.

 

 

ಇನ್ನು ರಾಜ್ಯದಲ್ಲಿ ಇರುವ ಅಪಘಾತ ವಲಯಗಳನ್ನು ಗುರುತಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ರಸ್ತೆ ಸುರಕ್ಷತಾ ಅನುದಾನದಡಿ ಅಪಘಾತ ವಲಯಗಳನ್ನು ಗುರುತಿಸಿ ಅವುಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

 

 

 

ಈ ಸಂಬಂಧ ಸಾರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಪಾವಗಡದಲ್ಲಿ ನಡೆದ ಘಟನೆ ಸಂಬಂಧ ಪ್ರಾಥಮಿಕ ವರದಿಯನ್ನು ಅಧಿಕಾರಿಗಳು ನೀಡಿದ್ದು ಓವರ್ಲೋಡ್ ಹಾಗೂ ಚಾಲಕನ ಅಜಾಗರೂಕತೆಯಿಂದ ಅಪಘಾತ ನಡೆದಿದೆ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಆ ಭಾಗದಲ್ಲಿ ಸಂಚರಿಸಿತಿದ್ದ ಎರಡು ಖಾಸಗಿ ಬಸ್ ಗಳನ್ನು ಅಧಿಕಾರಿಗಳು ಸೀಜ್ ಮಾಡಿದ್ದು ಇದರಿಂದ ಬಸ್ ಓವರ್ಲೋಡ್ ಆಗಲು ಕಾರಣವಾಗಿದೆ ಎಂದ ಅವರು ತುಮಕೂರು ಜಿಲ್ಲಾಸ್ಪತ್ರೆಯಲ್ಲಿ 28 ಜನ ಚಿಕಿತ್ಸೆ ಪಡೆಯುತ್ತಿದ್ದು ತೀವ್ರವಾಗಿ ಗಾಯಗೊಂಡ 11ಜನರ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ ಉಳಿದ ಗಾಯಾಳುಗಳಿಗೆ ಪಾವಗಡ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

 

ವರದಿ _ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!