ಗರ್ಭಿಣಿಯರು ಹಾಗೂ ವಿಕಲಚೇತನರಿಗೆ ಉಚಿತ ಆಟೋ ಸೇವೆಗೆ ಚಾಲನೆ ನೀಡಿದ _ಮಾಜಿ ಶಾಸಕ ಡಾ. ರಫೀಕ್ ಅಹಮದ್.

ಗರ್ಭಿಣಿಯರು ಹಾಗೂ ವಿಕಲಚೇತನರಿಗೆ ಉಚಿತ ಆಟೋ ಸೇವೆಗೆ ಚಾಲನೆ ನೀಡಿದ _ಮಾಜಿ ಶಾಸಕ ಡಾ. ರಫೀಕ್ ಅಹಮದ್.

 

 

ತುಮಕೂರು_ತುಮಕೂರು ನಗರ ಮಾಜಿ ಶಾಸಕರಾದ ರಫೀಕ್ ಅಹಮದ್ ಸ್ನೇಹ ಕೂಟ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರಾದ ಆಟೋ ರಾಜು, ಗೋಕುಲ ಬಡಾವಣೆಯ ರಘು ಹಾಗೂ ಸಂಗಡಿಗರಿಂದ ತುಮಕೂರು ನಗರದಲ್ಲಿನ ಗರ್ಭಿಣಿಯರು ಹಾಗೂ ವಿಕಲಚೇತನರಿಗೆ ಉಚಿತವಾಗಿ ಆಟೋ ಪ್ರಯಾಣಕ್ಕೆ ಚಾಲನೆ ನೀಡಲಾಯಿತು.

 

 

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ತುಮಕೂರು ನಗರ ಮಾಜಿ ಶಾಸಕ ಡಾ ರಫೀಕ್ ಅಹಮದ್ ಅವರು ಮಾತನಾಡಿ ನಮ್ಮ ಕಾಂಗ್ರೆಸ್ ಮುಖಂಡರು ಹಾಗೂ ಇಬ್ಬರು ಆಟೋ ಚಾಲಕರಾದ ಶಿವಕುಮಾರ್ ಹಾಗೂ ನಾರಾಯಣರವರು ಉಚಿತವಾಗಿ ಗರ್ಭಿಣಿಯರು ಹಾಗೂ ವಿಕಲಚೇತನರಿಗಾಗಿ ಉಚಿತ ಆಟೋ ಪ್ರಯಾಣ ಸೇವೆ ನೀಡಲು ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ ಇಂತಹ ಅನನ್ಯ ಸೇವೆ ನೀಡಲು ಮುಂದಾಗಿರುವ ಆಟೋ ಚಾಲಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

 

 

ಇಂದಿನ ದಿನದಲ್ಲಿ ಇಂತಹ ಸೇವೆ ನೀಡುವವರು ವಿರಳ ಇನ್ನೂ ಇಬ್ಬರು ಆಟೋ ಚಾಲಕರು ಇಂಥ ಸೇವೆಗೆ ಮುಂದಾಗುವ ಮೂಲಕ ವಿಕಲಚೇತನರು ಹಾಗೂ ಗರ್ಭಿಣಿಯರು ತಮ್ಮ ಮನೆಯಿಂದ ಆಸ್ಪತ್ರೆಗೆ ತೆರಳುವ ಉದ್ದೇಶಕ್ಕೆ ಸೇವೆ ನೀಡಲು ಮುಂದಾಗಿದ್ದಾರೆ ಇದರ ಸದುಪಯೋಗವನ್ನು ಅರ್ಹರು ಪಡೆದುಕೊಳ್ಳಬೇಕು ಎಂದು ಮನವಿ ಪಡೆದರು.

 

 

ಇದೇ ಸಂದರ್ಭದಲ್ಲಿ ಮುಖಂಡರಾದ ಆಟೋ ರಾಜು, ರಘು ,ಅನಿಲ್, ಆಟೋ ಚಾಲಕರಾದ ಶಿವಕುಮಾರ್ ಹಾಗೂ ನಾರಾಯಣ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

 

 

ಉಚಿತ ಆಟೋ ಸೇವೆಗಾಗಿ

9916507541

9060809171

Leave a Reply

Your email address will not be published. Required fields are marked *

You cannot copy content of this page

error: Content is protected !!