ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಕೊರಟಗೆರೆ ಶಾಸಕರಾದ ಡಾಕ್ಟರ್ ಜಿ ಪರಮೇಶ್ವರ್ ಅವರು ಕೊರಟಗೆರೆ ವಿಧಾನಸಭಾ ಕ್ಷೇತ್ರದ 25000 ಕುಟುಂಬಗಳಿಗೆ ದಿನಸಿ ಕಿಟ್ ನೀಡುವ ಮೂಲಕ ಕೊರಟಗೆರೆ ಕ್ಷೇತ್ರದ ಬಡ ಕುಟುಂಬಗಳ ನೆರವಿಗೆ ಮುಂದಾಗಿದ್ದಾರೆ.
ಇಂದು ತುಮಕೂರಿನ ಹೆಗ್ಗೆರೆ ಸಿದ್ದಾರ್ಥ ಶಾಲಾ ಆವರಣದಲ್ಲಿ ದಿನಸಿ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಡಾ ಪರಮೇಶ್ವರ್ ಹಾಗೂ ಅವರ ಪತ್ನಿ ಕನ್ನಿಕಾ ಪರಮೇಶ್ವರ ರವರು ಚಾಲನೆ ನೀಡಿದರು, ನಂತರ ಮಾತನಾಡಿದ ಡಾಕ್ಟರ್ ಜಿ ಪರಮೇಶ್ವರ್ ರವರು ಕೊರಟಗೆರೆ ವಿಧಾನಸಭಾ ಕ್ಷೇತ್ರದ ಬಡಕುಟುಂಬಗಳಿಗೆ 25000 ದಿನಸಿ ಕಿಟ್ ತರಲಾಗಿದ್ದು ಕೊರಟಗೆರೆಯ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ಕ್ಷೇತ್ರದಲ್ಲಿ ವಾಸವಿರುವ ಬಡ ಕುಟುಂಬಗಳನ್ನು ಗುರುತಿಸಿ ಅಂತ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಕರೋನ ಎರಡನೇ ಅಲೆ ಬಂದಾಗಿನಿಂದ ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ ಇನ್ನು ಎರಡನೇ ಹಳೆಯಲ್ಲಿ ಹೆಚ್ಚು ಸಾವುನೋವು ಸಂಭವಿಸಿದ್ದು ಹಳ್ಳಿಗಳಲ್ಲಿ ವಾಸವಿದ್ದ ಕುಟುಂಬಗಳು ಬೆಂಗಳೂರಿನಂತಹ ದೊಡ್ಡ ದೊಡ್ಡ ಪಟ್ಟಣಗಳಿಗೆ ಜೀವನ ರೂಪಿಸಿಕೊಳ್ಳುವ ಸಲುವಾಗಿ ತೆರಳಿದ್ದರು ಲಾಕ್ ಡೌನ್ ಘೋಷಣೆಯಿಂದ ಮತ್ತೆ ತಮ್ಮ ಸ್ವಂತ ಊರುಗಳಿಗೆ ವಾಪಸ್ ಆದಕಾರಣ ಪಟ್ಟಣ ಹಾಗೂ ಗ್ರಾಮಗಳಿಗೆ ಕರೋನ ಸೋಂಕು ವ್ಯಾಪಿಸಿ ಸಾರ್ವಜನಿಕರ ಬದುಕನ್ನ ಕಸಿದಿದೆ. ಇನ್ನು ಲಾಕ್ಡೌನ್ ಘೋಷಣೆಯಿಂದ ಕೂಲಿ ಕಾರ್ಮಿಕರು ಹಾಗೂ ಬಡವರಿಗೆ ಕೂಲಿ ಇಲ್ಲದೆ ಜೀವನ ನಡೆಸಲು ಕಷ್ಟವಾಗಿದ್ದು ಸಾರ್ವಜನಿಕರು ಜೀವನ ಸೇರಿದಂತೆ ಅವರ ಆರ್ಥಿಕ ವ್ಯವಸ್ಥೆ ಸಹ ಕುಸಿದಿದ್ದು ಬಡ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಗುರಿಯಾಗಿದೆ ಹಾಗಾಗಿ ನಮ್ಮ ಕ್ಷೇತ್ರದ ಬಡಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಲಾಗುತ್ತಿದೆ ಈಗಾಗಲೇ ಫ್ರಂಟ್ಲೈನ್ ವರ್ಕರ್ಸ್ ಆಗಿರುವ ಅಂಗನವಾಡಿ , ಆಶಾ ಕಾರ್ಯಕರ್ತೆಯರು ಸೇರಿದಂತೆ ಹಲವರಿಗೆ ಈಗಾಗಲೇ ದಿನಸಿ ಕೀಟಗಳನ್ನು ವಿತರಿಸಲಾಗಿತ್ತು ಅದರ ಮುಂದುವರಿದ ಭಾಗವಾಗಿ 25000 ದಿನಸಿ ಕಿಟ್ ಗಳನ್ನು ವಿತರಿಸಲಾಗುತ್ತಿದೆ ಎಂದರು.
ಕರೋನ ಮೂರನೇ ಅಲೆಯ ಎಚ್ಚರಿಕೆ ನೀಡಿರುವ ತಜ್ಞರ ವರದಿಯಂತೆ ತಮ್ಮ ಕ್ಷೇತ್ರದಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಸಲುವಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮೂರನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ವ್ಯಾಪಿಸುತ್ತದೆ ಎಂದು ತಜ್ಞರ ವರದಿ ಪ್ರಕಾರ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುವುದು ಹಾಗೂ ಮಕ್ಕಳ ಹಿತದೃಷ್ಟಿಯಿಂದ ತುಮಕೂರಿನ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಮಕ್ಕಳಿಗೆ ಅನುಕೂಲವಾಗುವ ದೃಷ್ಟಿಯಲ್ಲಿ ಅಗತ್ಯ ವೈದ್ಯಕೀಯ ಸಲಕರಣೆಗಳನ್ನು ತಂದು ಈಗಾಗಲೇ ಐಸಿಯು ಹಾಗೂ ಆಕ್ಸಿಜನ್ ಬೆಡ್ ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ರಾಮಕೃಷ್ಣ, ಕಾಂಗ್ರೆಸ್ ಮುಖಂಡರಾದ ಇಕ್ಬಾಲ್ ಅಹಮದ್, ವಾಲೆ ಚಂದ್ರಯ್ಯ, ಕೆಪಿಸಿಸಿ ಕಾರ್ಯದರ್ಶಿಗಳಾದ ಬಿ ಎಸ್ ದಿನೇಶ್, ಮುಖಂಡರಾದ ಚಂದ್ರಶೇಖರ್ ಗೌಡ, ಪರಮೇಶ್ವರ್ ಯುವ ಸೈನ್ಯದ ನಗುತ ರಂಗನಾಥ್, ನರಸಿಂಹರಾಜು ಸೇರಿದಂತೆ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಮುಖಂಡರು ಹಾಜರಿದ್ದರು