ಪುಟ್ಟ ಬಾಲಕನ ‌ಮೂಗನೇ ಕಿತ್ತು ತಿಂದ ಬೀದಿನಾಯಿ

 

ಹುಬ್ಬಳ್ಳಿ- ವಾಣಿಜ್ಯ ನಗರಿ, ಸ್ಮಾರ್ಟ್ ಸಿಟಿ ಅಂತಲ್ಲ ಕರೆಸಿಕೊಳ್ಳುವ ನಗರದಲ್ಲಿ ಇದೀಗ ಶ್ವಾನಗಳ ಕಾಟ ಜೋರಾಗಿದೆ..ಮಕ್ಕಳ ಮೇಲೆ ಮೃಗನಂತೆ ಎಗರುವ ಶ್ವಾನಗಳು ಇದೀಗ ಜನರ ನಿದ್ದೆಗೇಡಿಸಿವೆ. ಅದರಲ್ಲೂ ಮಗುವಿನ ಮೇಲೆ ದಾಳಿ ಮಾಡಿದ ಶ್ವಾನವೊಂದು ಮಗುವಿನ ಮೂಗನೇ ಕಿತ್ತು ತಿಂದಿರುವ ಭಯಂಕರ ಘಟನೆ ನಡೆದೆ.

 

ಹೌದು. ಹೀಗೆ ಫೋಟೋದಲ್ಲಿ ಇಷ್ಟು ಮುದ್ದಾಗಿ ಕಾಣುವ ಈ ಮಗುವಿನ ಹೆಸರು ವಿವೇಕ್ ಅಂತ. ಎಲ್ಲ ಮಕ್ಕಳಂತೆ ಆಟವಾಡುತ್ತಾ ಮನೆಯವರೊಡನೆ ಕಾಲ ಕಳೆಯುತ್ತಿದ್ದ. ಆದ್ರೆ ಈ ಬಾಲಕನ ಮೇಲೆ ನಾಯಿಯಿಂದು ದಾಳಿ ನಡೆಸಿ ಮೂಗನೇ ಕಿತ್ತು ತಿಂದಿದೆ.

 

ಹುಬ್ಬಳ್ಳಿಯ ಗಣೇಶ್ ಪೇಟೆಯ ನಿವಾಸಿಯಾಗಿರುವ ಸುನಿತಾ ಮತ್ತು ವಿಠ್ಠಲ ಎನ್ನುವ ದಂಪತಿಗಳ ಮಗನಾಗಿರುವ ವಿವೇಕ್ ನಿನ್ನೆ ಸಂಜೆ 4 ಗಂಟೆಗೆ ಮನೆಯ ಹೊರಗೆ ಆಟವಾಡುತ್ತಿದ್ದ ವಿವೇಕ್ ಜೋರು ಧ್ವನಿಯಲ್ಲಿ ಅಳಲು ಆರಂಭಿಸಿದ, ಆಗ ಮನೆಯವರು ಹೊರಗೆ ಬಂದು ನೋಡುತ್ತಿದ್ದಂತೆ ಮಗುವಿನ ಮುಖದ ತುಂಬೆಲ್ಲ ರಕ್ತವಿತ್ತು., ಏನಾಯ್ತು ಎನ್ನುವಷ್ಟರಲ್ಲಿ ಮೃಗದಂತಿದ್ದ ಶ್ವಾನವೊಂದು ಮಗುವಿನ ಮೇಲೆ ದಾಳಿ ಮಾಡಿ ಮೂಗನ್ನೇ ಹರಿದು ಹಾಕಿದೆ. ತೀವ್ರವಾಗಿ ಗಾಯಗೊಂಡ ಮಗುವನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬೀದಿನಾಯಿಗಳ ಹಾವಳಿಯನ್ನು ತಡೆಗಟ್ಟುವಂತೆ ಸ್ಥಳೀಯರು ಮಹಾನಗರ ಪಾಲಿಕೆ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 

 

Leave a Reply

Your email address will not be published. Required fields are marked *

You cannot copy content of this page

error: Content is protected !!