ಜಗದೀಶ್ ಸಾವಿನ ಹಿಂದೆ ಇದ್ದ ಊಹಾ ಪೋಹಗಳಿಗೆ ಸ್ಪಷ್ಟತೆ ನೀಡಿದ ಹೋಲಿ ಕ್ರಾಸ್ ಆಸ್ಪತ್ರೆ ವೈದ್ಯರು
ಹನೂರು :-ತಾಲೂಕಿನ ವಿವೇಕಾನಂದ ಶಾಲೆಯಲ್ಲಿ ದಿನಾಂಕ ಏಪ್ರಿಲ್ 18 ಮಂಗಳವಾರ ದಂದು ಚುನಾವಣೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು ಈ ವೇಳೆಯಲ್ಲಿ ತರಬೇತಿಯಲ್ಲಿ ಕಾರ್ಯನಿರತ ರಾಗಿದ್ದ ಜಗದೀಶ್ ಎಂಬುವವರಿಗೆ ಹೃದಯಘಾತವಾಗಿ ಮೂರ್ಛೆ ಬಿದ್ದು ರಕ್ತ ಶ್ರವ ವಾಗಿತ್ತು ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಹೋಲಿಕ್ರಾಸ್ ಆಸ್ಪತ್ರೆಗೆ ರವಾನಿಸಲಾಗಿತ್ತು ನಂತರ ಜಗದೀಶ್ ನನ್ನು ತಪಾಷಣೆ ಮಾಡಿದ ವೈದ್ಯರು ಸೂಕ್ತ ದಾಖಲೆಗಳೊಂದಿಗೆ ಆಸ್ಪತ್ರೆಗೆ ಬರುವ ಮುಂಚೆಯೇ ಮಾರ್ಗ ಮದ್ಯೆಯೇ ಮೃತ ಪಟ್ಟಿರುವುದಾಗಿ ಮಾಹಿತಿ ನೀಡಿ ನಂತರ ಜಿಲ್ಲಾಧಿಕಾರಿ ಡಿ ಎಸ್ ರಮೇಶ್ ರವರು ಆಸ್ಪತ್ರೆಗೆ ಭೇಟಿ ನೀಡಿ ಜಗದೀಶ್ ಮೃತ ಪಟ್ಟಿರುವ ಮಾಹಿತಿ ಪಡೆದುಕೊಂಡು ಸಂತಾಪ ಸೂಚಿಸಿದ್ದರು ನಂತರ ಶವ ಪರೀಕ್ಷೆಗಾಗಿ ಹನೂರು ಪಟ್ಟಣದ ಶವಗಾರಕ್ಕೆ ಸುಮಾರು ಸಾಯಂಕಾಲ 4 ಗಂಟೆಗೆ ಆಂಬುಲೆನ್ಸ್ ಮೂಲಕ ರವಾನಿಸಿರುತ್ತಾರೆ ನಂತರ ಜಗದೀಶ್ ಸಾವಿನ ಸುದ್ದಿ ಕೇಳಿದ ಅವರ ತಾಯಿ ಶವಾಗಾರದ ಹತ್ತಿರ ಬಂದು ದಿಗ್ಬ್ರಮೆಗೊಂಡು ಮಗನ ಶವದ ಹತ್ತಿರ ಎರಡು ಮೂರು ಬಾರಿ ಹೋಗಿ ನೋಡಿದಾಗ ಮಗನ ಕೈ ಅಲುಗಾಡುತ್ತಿದೆ ಮೈ ಬಿಸಿ ಇದೆ ಎಂದು ಹನೂರು ತಾಲೂಕು ವೈದ್ಯರಿಗೆ ತಿಳಿಸಿದ್ದಾರೆ ನಂತರ ಅಲ್ಲಿದ್ದ ವೈದ್ಯಾಧಿಕಾರಿ ಹಾಗೂ ಶುಶ್ರುಕಿಯಾರು ಪರಿಪೂರ್ಣವಾಗಿ ತಪಾಸಣೆ ಮಾಡದೆ ಜೀವ ಹೋಗಿರುವ ವ್ಯಕ್ತಿಯನ್ನು ಜೀವ ಇದೆ ಎಂದು ಆಂಬುಲೆನ್ಸ್ ಮೂಲಕ ಮೈಸೂರಿನ ಆಪೋಲೋ ಆಸ್ಪತ್ರೆಗೆ ರವಾನಿಸಿದ್ದಾರೆ ನಂತರ ಅಲ್ಲಿಯು ಕೂಡ ವ್ಯಕ್ತಿಯ ಪ್ರಾಣ ಹೋಗಿ ಸುಮಾರು ಆರು ಗಂಟೆಗಳ ಕಾಲ ಕಳೆದಿದೆ ಎಂದು ಮೈಸೂರಿನ ಅಪೋಲೋ ಆಸ್ಪತ್ರೆ ವೈದ್ಯಾಧಿಕಾರಿಗಳು ತಿಳಿಸಿರುತ್ತಾರೆ.
ಈ ಘಟನೆಯನ್ನು ಗಮನಿಸಿದ ಸಾರ್ವಜನಿಕರು ಮೇಲ್ಕಂಡ ವಿಷಯದಿಂದ ಹೋಲಿ ಕ್ರಾಸ್ ಆಸ್ಪತ್ರೆಯ ವೈದ್ಯರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದರು ನಂತರ ಹಲವು ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದ ಸುದ್ದಿ ತಿಳಿದು ಹೊಲಿಕ್ರಾಸ್ ಆಸ್ಪತ್ರೆ ವೈದ್ಯರು ಗುರುವಾರ ಸಂಜೆ 4:30 ರಲ್ಲಿ ಪತ್ರಿಕಾಗೋಷ್ಠಿ ಕರೆದು ಡಾಕ್ಟರ್ ವಿಕಾಸ್ ನಾಯಕ ರವರು ಸ್ಪಷ್ಟತೆ ನೀಡಿದ್ದಾರೆ ಸುಮಾರು 35 ರಿಂದ 40 ವರ್ಷಗಳಿಂದಲೂ ಕೂಡ ನಮ್ಮ ಹೋಲಿಕ್ರಾಸ್ ಆಸ್ಪತ್ರೆ ಸಂಸ್ಥೆ ಚಾಮರಾಜನಗರ ಜಿಲ್ಲೆಯಲ್ಲಿ ಉತ್ತಮ ಹಾಗೂ ಪ್ರಾಮಾಣಿಕ ವೈದ್ಯಕೀಯ ಚಿಕಿತ್ಸೆ ನೀಡುವ ಸಂಸ್ಥೆಯಾಗಿದೆ ಆದರೆ ಜಗದೀಶ್ ಸಾವಿನ ವಿಚಾರವಾಗಿ ಹಲವು ಪತ್ರಿಕಾ ಮಾಧ್ಯಮ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಪ್ರಕಟವಾಗಿದ್ದು ನಮಗೆ ನೋವುಂಟು ಮಾಡಿದೆ ಎಂದರು ನಂತರ ಮಾಧ್ಯಮದವರಿಗೆ ತಾಲೂಕು ವೈದ್ಯಾಧಿಕಾರಿಗಳು ಜೀವ ಇರುವುದಾಗಿ ತಿಳಿಸಿದ ನಂತರ ಸುದ್ದಿ ಪ್ರಕಟವಾಗಿದೆ ಎಂದು ತಿಳಿಸಲಾಯಿತು ಇದಕ್ಕೆ ಪ್ರತಿಕ್ರಿಯೆ ನೀಡಿದ ವಿಕಾಸ್ ನಾಯಕ್ ರವರು ಜಗದೀಶ್ ಹನೂರಿನಿಂದ ನಮ್ಮ ಆಸ್ಪತ್ರೆಗೆ ಬರುವ ಮೊದಲೇ ಮಾರ್ಗಮದ್ಯೆಯೇ ಮರಣವಾಗಿರುವುದಕ್ಕೆ ದಾಖಲೆ ಇದೆ ಮೈಸೂರಿನಲ್ಲಿಯೂ ಕೂಡ ಅಪೋಲೋ ಆಸ್ಪತ್ರೆಯಲ್ಲಿ ವೈದ್ಯರು ತಪಾಷಣೆ ನಡೆಸಿ 6 ಗಂಟೆಗಳ ಹಿಂದೆಯೇ ಮರಣ ಹೊಂದಿರುವುದಕ್ಕೆ ಪ್ರಮಾಣ ಪತ್ರ ನೀಡಿದ್ದಾರೆ. ಆಗಾಗಿ ಹೋಲಿಕ್ರಾಸ್ ಆಸ್ಪತ್ರೆಗೆ ಬರುವ ಮುಂಚೆಯೇ ಸತ್ತಿದ್ದ ವ್ಯಕ್ತಿ ಹನೂರಿನ ಶವಗಾರದಲ್ಲಿ ಬದುಕಿದ್ದಾನೆ ಎಂಬ ಸುದ್ದಿ ನಂಬಲು ಅಸಾಧ್ಯವಾದದ್ದು ಹಾಗೂ ಇದು ಸುಳ್ಳು ಸುದ್ದಿ. ಎಂದು ಹೋಲಿಕ್ರಾಸ್ ವೈದ್ಯರು ತಿಳಿಸಿದ್ದಾರೆ .
ಈ ವಿಚಾರವಾಗಿ ಮಾಧ್ಯಮ ಮಿತ್ರರಿಗೆ ಹೋಲಿ ಕ್ರಾಸ್ ವೈದ್ಯರು ಸ್ಪಷ್ಟತೆ ನೀಡಿದ್ದಾರೆ ಈ ಸಂದರ್ಭದಲ್ಲಿ ಹೋಲಿ ಕ್ರಾಸ್ ಮುಖ್ಯ ಆಡಳಿತ ಅಧಿಕಾರಿ ಡೆಲಿನ್ ಡಾ ಸುನಿಲ್. ಡಾ ವಿಕಾಸ್ ನಾಯಕ್ ಡಾ.ಕುಮಾರ್ ಹಾಾಗೂ ಆಸ್ಪತ್ರೆ ಸಿಬ್ಬಂದಿಗಳು ಉಪಸ್ಥಿತರಿದ್ದರು
ವರದಿ: ನಾಗೇಂದ್ರ ಪ್ರಸಾದ್