ಜಮೀನು ವಿವಾದ ಶವಸಂಸ್ಕಾರಕ್ಕೆ ಅಡ್ಡಿ ಪೊಲೀಸರ ಮಧ್ಯಪ್ರವೇಶದಿಂದ ನೆರವೇರಿದ ಅಂತ್ಯಸಂಸ್ಕಾರ.
ತುಮಕೂರು ನಗರದ ಭೀಮಸಂದ್ರದಲ್ಲಿ ಮಂಜುನಾಥ( 50) ಎಂಬುವವರು ಮೃತಪಟ್ಟಿದ್ದು ಅವರ ಮೃತದೇಹ ವನ್ನು ಇಂದು ಭೀಮಸಂದ್ರ ಸರ್ವೇ ನಂಬರ್ 16ರಲ್ಲಿ ಇದ್ದ ಸ್ಥಳದಲ್ಲಿ ಮೃತಪಟ್ಟ ಮಂಜುನಾಥ್ ರವರ ಶವವನ್ನು ಅಂತ್ಯಸಂಸ್ಕಾರ ಮಾಡಲು ಕುಟುಂಬವರ್ಗದವರು ತೆಗೆದುಕೊಂಡು ಹೋಗಿದ್ದರು.
ಆದರೆ ಅಂತ್ಯಸಂಸ್ಕಾರ ಮಾಡಲೆಂದು ಮಂಜುನಾಥ ಕುಟುಂಬದವರು ಸ್ಥಳದಲ್ಲಿ ಗುಂಡಿಯನ್ನು ಸಹ ತೆಗೆದಿದ್ದರು ಆದರೆ ಮತ್ತೊಂದು ಕುಟುಂಬದವರು ಜಾಗ ತಮ್ಮದೆಂದು ವಾದಿಸಿ ಪೊಲೀಸರ ಮೊರೆ ಹೋದ ಕಾರಣ ಪೊಲೀಸರು ಸ್ಥಳಕ್ಕೆ ಆಗಮಿಸಿದರು .
ಇನ್ನು ಮಂಜುನಾಥ್ ಹಾಗೂ ಸೌಭಾಗ್ಯ ಕುಟುಂಬದ ನಡುವೆ ಅಂತ್ಯಸಂಸ್ಕಾರದ ವೇಳೆ ತೀವ್ರ ವಾಗ್ವಾದ ನಡೆಯಿತು.
ಮಧ್ಯಾಹ್ನ 12ಗಂಟೆಯಿಂದ ಶವಸಂಸ್ಕಾರ ಮಾಡಲೆಂದು ಮಂಜುನಾಥ್ ಮೃತದೇಹವನ್ನು ಸ್ಥಳದಲ್ಲೇ ಇಟ್ಟುಕೊಂಡು ಕುಟುಂಬವರ್ಗದವರು ಅಂತ್ಯಸಂಸ್ಕಾರವನ್ನು ಮಾಡಲಾಗದೆ ವಾಗ್ವಾದ ನಡೆಸುವಂತಾಯಿತು ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರ ದಾಖಲೆಗಳನ್ನು ಸಹ ಪರಿಶೀಲಿಸಿದರು.
ನಂತರ ಪೊಲೀಸರು ಮಂಜುನಾಥ್ ಕುಟುಂಬದವರಿಗೆ ತಿಳಿಹೇಳಲು ಮುಂದಾದರು ಆದರೆ ಮಂಜುನಾಥ್ ಕುಟುಂಬದವರು ಸದರಿ ಜಾಗ ದಲಿತರಿಗೆ ಮಣ್ಣು ಮಾಡಲು ಇದ್ದ ಜಾಗ ಏನೇ ಆದರೂ ನಾವು ಇದೆ ಜಾಗದಲ್ಲಿ ಮಣ್ಣು ಮಾಡುತ್ತೇವೆ ಎಂದು ಪಟ್ಟು ಹಿಡಿದರು.
ಆದರೆ ಇವೆಲ್ಲವುಗಳ ಘಟನೆಯ ನಡುವೆ ಮಂಜುನಾಥ್ ರವರ ಶವಸಂಸ್ಕಾರ ಸಂಜೆ ಆದರೂ ಸಹ ನೆರವೇರಲು ಸಾಧ್ಯವಾಗಲಿಲ್ಲ . ಇನ್ನು ವಾಗ್ವಾದದ ನಡುವೆ ಸ್ಥಳ ನಮ್ಮದೆಂದು ಪಟ್ಟು ಹಿಡಿದ ಕುಟುಂಬದವರು ಮಂಜುನಾಥ ಮೃತದೇಹವನ್ನು ಹೂಳಲು ತೆಗೆದಿದ್ದ ಗುಂಡಿಯನ್ನು ಸಹ ಮುಚ್ಚಿದರು.
ಆದರೆ ಕೊನೆಗೆ ಪೊಲೀಸರ ಮಧ್ಯಪ್ರವೇಶದಿಂದ ಎರಡು ಕುಟುಂಬಗಲು ಒಪ್ಪಿ ಸದರಿ ಜಾಗದಲ್ಲೇ ಮಂಜುನಾಥ್ ರವರ ಅಂತ್ಯಸಂಸ್ಕಾರವನ್ನು ನೆರವೇರಿಸಲು ಎಲ್ಲರೂ ತೀರ್ಮಾನಿಸಿದರು ಆದಕಾರಣ ಸೋಮವಾರ ಸಂಜೆ ಮಂಜುನಾಥ್ ರವರ ಅಂತ್ಯಸಂಸ್ಕಾರ ನೆರವೇರಿದೆ.
ಅದೇನೇ ಇರಲಿ ಮನುಷ್ಯನಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬನಿಗೂ ಸಾವು ನಿಶ್ಚಿತ ಆದರೆ ಆತ ಮೃತಪಟ್ಟ ನಂತರವು ಜಾಗದ ವಿವಾದದಿಂದ ಕುಟುಂಬವರ್ಗದವರು ಪರಸ್ಪರ ವಾಗ್ವಾದ ಮಾಡುವ ಮೂಲಕ ಸಂಜೆಯವರೆಗೂ ಕಾಲ ತಳ್ಳುವಂಥ ಆಗಿದ್ದು ನಿಜಕ್ಕೂ ಶೋಚನೀಯ ಸಂಗತಿ.